ಕಾರವಾರ: ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಅವರಿಗೆ ಅವರಿಗೆ ವಯಸ್ಸಾಗಿದೆ. ಹೀಗಾಗಿ ಅವರಿಗೆ ಮುಡಗೇರಿ, ಅಸ್ನೋಟಿ, ಮಾಜಾಳಿ ಹಾಗೂ ಚಿತ್ತಾಕುಲಾ ಪಂಚಾಯತಿಗಳ ವ್ಯಾಪ್ತಿ ತಿಳಿದಿಲ್ಲ ಎಂದು ಕಾರವಾರ ತಾಲೂಕಿನ ಮುಡಗೇರಿ ಗ್ರಾಮ ಪಂಚಾಯತಿ ಸದಸ್ಯ ನಂದಕಿಶೋರ ನಾಯಕ ಟೀಕಿಸಿದ್ದಾರೆ.
ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಂಭು ಶೆಟ್ಟಿಯವರು ಮಾಜಿ ಶಾಸಕ ಸತೀಶ್ ಸೈಲ್ ಅವಧಿಯಲ್ಲಿ ಮುಡಗೇರಿ ಪಂಚಾಯತಿ ಅಭಿವೃದ್ಧಿಯ ಪರ್ವಕಾಲದಲ್ಲಿ ಮೆರೆದಿತ್ತು ಎಂದು ಪತ್ರಿಕಾ ಹೇಳಿಕೆ ನಿಡಿದ್ದಾರೆ.
ಆದರೆ ಆ ಹೇಳಿಕೆಯಲ್ಲಿ ಉಲ್ಲೇಖಿಸಿರುವ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ಮುಡಗೇರಿ ಪಂಚಾಯತಿಯಿAದ ಹೊರಗಿನದ್ದು. ಶಾಸಕಿ ರೂಪಾಲಿ ನಾಯ್ಕ ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಆಗಿದೆ. ಹೀಗಾಗಿ ನಾವು ಅವರನ್ನು ಬೆಂಬಲಿಸುತ್ತೇವೆ ಎಂದರು.
ಶಾಸಕರಾದಾಗ ಸತೀಶ್ ಸೈಲ್ ಜೊತೆಯಲ್ಲೇ ನಾನಿದ್ದೆ. ಅಂದು ಏನೆಲ್ಲ ಆಗಿದ್ದವು ಎಂಬುದು ನನಗೆ ತಿಳಿದಿದೆ. ಮುಡಗೇರಿಯ ಭೂಸ್ವಾಧೀನ ಪ್ರಕರಣದಲ್ಲಿ ಜನರಿಗೆ ಹೆಚ್ಚಿನ ಪರಿಹಾರ ಕೊಡಿಸಲು ಪ್ರಯತ್ನವನ್ನೇ ಮಾಡಿಲ್ಲ. ಆದರೆ ಈಗ ಶಾಸಕಿಯವರು ಗುಂಟೆಗೆ ಒಂದು ಲಕ್ಷ ಸರ್ಕಾರದಿಂದ ಕೊಡಿಸುತ್ತೇವೆ ಎಂದಾಗ ನಾವು ಎರಡು ಲಕ್ಷ ಕೊಡಿಸುತ್ತೇವೆ ಎಂದು ಜನರಿಗೆ ಫೋನ್ ಮಾಡಿ ಹೇಳುತ್ತಾರೆ. ಇವರು ಎರಡು ಲಕ್ಷ ಪರಿಹಾರ ಎಲ್ಲಿಂದ ಕೊಡಿಸುತ್ತಾರೆ ಎಂದು ಪ್ರಶ್ನಿಸಿದರು.
ಸುಳ್ಳು ಹೇಳುವುದು ಶಂಭು ಶೆಟ್ಟಿ ಹಾಗೂ ಸತೀಶ್ ಸೈಲ್‌ಗೆ ಅಭ್ಯಾಸ ಆಗಿಹೋಗಿದೆ. ಯುವಜನರಿಗೆ ಉದ್ಯೋಗ ಕೊಡಿಸುತ್ತೇವೆಂದು ಶಾಸಕರಾಗುವ ಮುಂಚೆ ಹೇಳಿದ್ದರು. ಆದರೆ ಅವರು ಮಾಡಿದ್ದೇನೂ ಇಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೂ ನಾನು ಸಿದ್ಧನಿದ್ದೇನೆ ಎಂದರು.
ಇನ್ನೋರ್ವ ಸದಸ್ಯ ಸುರೇಂದ್ರ ಗಾಂವಕರ್ ಮಾತನಾಡಿ, ಮುಡಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 73 ಎಕರೆ ಜಾಗ ಭೂಸ್ವಾಧೀನಗೊಂಡು 23 ವರ್ಷಗಳಾಗಿದೆ. ಆದರೆ ಇತ್ತೀಚಿಗೆ ಶಾಸಕಿ ರೂಪಾಲಿ ನಾಯ್ಕರವರು ಸಭೆ ನಡೆಸಿ, ಭೂಸ್ವಾಧೀನಗೊಂಡವರಿಗೆ ಪ್ರತಿ ಗುಂಟೆಗೆ ಒಂದು ಲಕ್ಷ ಕೊಡುವುದಾಗಿ ಭರವಸೆ ನೀಡಿದರು.
ಆದರೆ ಈ ಹಿಂದೆಲ್ಲ ಸಾಕಷ್ಟು ಜನ ಶಾಸಕರಾಗಿ ಹೋದವರು ಒಂದೇ ಒಂದು ಸಭೆಯನ್ನು ಮುಡಗೇರಿ ಪಂಚಾಯತಿಯಲ್ಲಿ ನಡೆಸಿಲ್ಲ.