ಕಾರವಾರ: ಕ್ರೀಡೆಯಲ್ಲಿ ಸೋಲು ಗೆಲವು ಸಹಜ, ಆದರೆ ಸ್ಪರ್ಧಾಳುಗಳು ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಕರೆ ನೀಡಿದರು.ನಗರದ ಸೇಂಟ್ ಮೈಕಲ್ ಪ್ರೌಢಶಾಲೆಯಲ್ಲಿ ಗುರುವಾರದಿಂದ ಪ್ರಾರಂಭವಾದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದು ಕಾರವಾರದಲ್ಲಿ ಸ್ಪರ್ಧಿಸುತ್ತಿರುವುದು ಹೆಮ್ಮೆಯ ವಿಷಯ. ಹಳೆ ವಿದ್ಯಾರ್ಥಿಯಾಗಿ ಈ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡುರುವುದು ಸಂತಸ ಸಂತಿದೆ. ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಮಕ್ಕಳು ಸ್ಪರ್ಧಿಸಬೇಕು ಎಂದರು. ಉತ್ತರ ಕನ್ನಡ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ ಮಾತನಾಡಿ, ಹೊರಾಂಗಣ ಕ್ರೀಡೆಗಳು ದೈಹಿಕವಾಗಿ ಸದೃಢ ಮಾಡಿದರೆ, ಒಳಾಂಗಣ ಕ್ರೀಡೆಗಳು ಮನಸಿಕವಾಗಿ ನಮ್ಮನ್ನು ಸದೃಢ ಮಾಡುತ್ತವೆ. ಚದುರಂಗ, ಕೇರಂ ನಂತಹ ಆಟದಲ್ಲಿ ಏಕಾಗ್ರತೆ ಅತ್ಯಂತ ಮುಖ್ಯವಾಗುತ್ತದೆ ಎಂದರು. ನಗರಸಭೆ ಅಧ್ಯಕ್ಷ ಡಾ.ನಿತಿನ ಪಿಕಳೆ, ಕಾರವರ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಈಶ್ವರ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಲತಾ ನಾಯಕ, ಪ್ರವೀಣ ತಳೇಕರ, ಸಮಾಜ ಸೇವಕ ನರೇಂದ್ರ ದೇಸಾಯಿ, ಶಿಕ್ಷಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.