ಕಾರವಾರ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿ ಪ್ರಿಯಾಂಗಾ ಎಂ. ಅವರ ಅಧ್ಯಕ್ಷತೆಯಲ್ಲಿ ಸಿಐಟಿಯು ಸಂಯೋಜಿತ ಅಕ್ಷರದಾಸೋಹ ನೌಕರರ ಸಂಘದ ಪ್ರತಿನಿಧಿಗಳು ಹಾಗೂ ಯೋಜನೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಜಂಟಿ ಸಭೆ ಜಿಪಂ ಸಭಾಭವನದಲ್ಲಿ ನಡೆಯಿತು.
ಯೋಜನೆಯ ಅನುಷ್ಟಾನದಲ್ಲಿ ಅಡುಗೆ ಸಿಬ್ಬಂದಿಗಳು ಎದುರಿಸುತ್ತಿರುವ ಸಮಸ್ಯೆಗಳ ಆಧಾರದಲ್ಲಿ ಚರ್ಚೆಗಳು ನಡೆದವು. ಹದಿನೆಂಟು ಇಪ್ಪತ್ತು ವರ್ಷ ಕೆಲಸ ಮಾಡಿದವರನ್ನು ವಯಸ್ಸಿನ ಕಾರಣಕ್ಕೆ ಕೆಲಸದಿಂದ ಕೈಬಿಟ್ಟು ನಿವೃತ್ತಿ ಸೌಲಭ್ಯ ಇಡಿಗಂಟು ಕೊಡುವುದು, ಶಾಲೆಯ ಬಿಸಯೂಟ ಕೆಲಸದ ಅವಧಿ ಆರು ತಾಸು ಎಂದು ಅಧಿಕೃತ ನಮೂದಿಸುವುದು ಮತ್ತು ಎಂಟು ತಾಸಿಗೆ ವಿಸ್ತರಿಸುವುದು, ಉದ್ಯೋಗವನ್ನು ಶಾಲಾ ಕೈತೋಟದಲ್ಲಿ ಮಾಡಿಸಿ ಕನಿಷ್ಟ ಕೂಲಿ ನೀಡುವುದು, ವಿಮಾಸೌಲಭ್ಯ ನೀಡುವುದು, ಆರೋಗ್ಯ ನಿಧಿ ನೀಡುವುದು, ಅಪಘಾತ ಪರಿಹಾರ ಮೊತ್ತ ಹೆಚ್ಚಿಸುವುದು, ರಜಾ ಸೌಲಭ್ಯ, ಹೆರಿಗೆ ರಜೆ ನೀಡುವುದು ಇತ್ಯಾದಿ ಜೊತೆಗೆ ಜಿಲ್ಲಾ ಮಟ್ಟದಲ್ಲಿ ಈಡೇರಿಸಲೇಬೇಕಾದ ಸಮಸ್ಯೆಗಳಾದ ಸಂಭಾವನೆ ವಿಳಂಬ ಸರಿಪಡಿಸಿ ಪ್ರತಿ ತಿಂಗಳ ಮೊದಲವಾರ ನೀಡುವುದು ಎನ್ನುವುದರ ಬಗ್ಗೆ ಆಗ್ರಹಿಸಲಾಯಿತು.
ಕೆಲವು ತಾಲೂಕಿನಲ್ಲಿ ಗೌರವಸಂಭಾವನೆ ವಿಳಂಬವಾಗದಂತೆ ನೋಡಿಕೊಳ್ಳಲು ತಾಲೂಕು ಪಂಚಾಯತ್ ಗೆ ಖಾಯಂ ಸಿಬ್ಬಂದಿ ಒದಗಿಸುವುದು, ಎಪ್ರಿಲ್ ನಲ್ಲಿ ಹತ್ತು ದಿನ ಮೇ ತಿಂಗಳಲ್ಲಿ ಹದಿನೈದು ದಿನ ಕೆಲಸದ ಕೂಲಿ ಪಾವತಿಸಲು, ಸುರಕ್ಷಾ ಭತ್ಯೆ ಸ್ವಚ್ಛತಾ ಭತ್ಯೆ ನೀಡಬೇಕು, ಶೌಚಾಲಯ ತೊಳೆಸುವ ಮತ್ತು ಬಿಸಿಅಡುಗೆಗೆ ಸಂಬಂಧವಿಲ್ಲದ ಕೆಲಸ ಮಾಡಿಸಬಾರದು, ಡಿಬಿಟಿ ಕುರಿತು ಬ್ಯಾಂಕಿನಲ್ಲಾದ ಸಮಸ್ಯೆ ನಿವಾರಿಸುವುದು, ಕಳೆದ ನಾಲ್ಕು ಚುನಾವಣೆ ವೇಳೆ ಅಡುಗೆ ಮಾಡಿಸಿಕೊಂಡು ಊಟದ ಖರ್ಚು ಮತ್ತು ಭತ್ಯೆ ಕೊಡದೇ ಇರುವ ತಾಲೂಕಿನಲ್ಲಿ ಭತ್ಯೆ ಕೊಡಿಸುವುದು, ರಜಿಸ್ಟರ್ ಪುಸ್ತಕ ಇಲಾಖೆಯೇ ಪೂರೈಸಬೇಕು, ಅಡುಗೆ ಬೇಯಿಸಿದ ಸವಕಳಿ ಪಾತ್ರೆ ಬದಲಿಸಿಹೊಸ ಪಾತ್ರೆಗಳನ್ನು ನೀಡುವುದು, ಸಮಯಕ್ಕೆ ಸರಿಯಾಗಿ ಸಿಲಿಂಡರ್ ಗ್ಯಾಸ್ ಪೂರೈಸುವಂತೆ ಒತ್ತಾಯಿಲಾಯಿತು.