News Kannada
Friday, February 03 2023

ಉತ್ತರಕನ್ನಡ

ಗೋಕರ್ಣ: ಮನೆ ಮನೆಗೆ ರಾಘವ ರಾಮಾಯಣ, ಧರ್ಮಭಾರತಿ ವಿಶೇಷ ಅಭಿಯಾನ

Raghava Ramayana, Dharmabharati special campaign for door-to-door
Photo Credit : By Author

ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿಯವರು ಕನ್ನಡದಲ್ಲೇ ಬರೆಯುವ ರಾಮಾಯಣವನ್ನು ರಾಜ್ಯದ ಮನೆ ಮನೆಗೆ ಪುಸ್ತಕ ರೂಪದಲ್ಲಿ ತಲುಪಿಸುವ ವಿಶೇಷ ಅಭಿಯಾನವನ್ನು ಶ್ರೀ ರಾಮಚಂದ್ರಾಪುರ ಮಠದ ‘ಧರ್ಮಭಾರತಿ’ ಹಮ್ಮಿಕೊಂಡಿದೆ.

ಪರಮಪೂಜ್ಯರ 30ನೇ ಚಾತುರ್ಮಾಸ್ಯದ ಅಂಗವಾಗಿ, ಮಹರ್ಷಿ ವಾಲ್ಮೀಕಿ ಬರೆದ ಮೂಲ ರಾಮಾಯಣದ ಪುನರವತರಣ ಇದಾಗಿರುತ್ತದೆ. ಮೊದಲಿಗೆ ಕನ್ನಡದಲ್ಲಿ ಹಾಗೂ ನಂತರ ವಿವಿಧ ಭಾಷೆಗಳಲ್ಲಿ ಇದನ್ನು ಪ್ರಕಟಿಸಲಾಗುವುದು ಎಂದು ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸಮಗ್ರ ರಾಮಾಯಣ ಮುಗಿಯುವವವರೆಗೆ ಧರ್ಮಭಾರತಿ ಮಾಸಿಕದ ಪ್ರತಿ ಸಂಚಿಕೆಯ ಪ್ರತಿ ಪುಟವೂ ರಾಮಾಯಣಮಯವಾಗಿರುತ್ತದೆ. ವಿಶೇಷವೆಂದರೆ ಧರ್ಮಭಾರತೀ ಇದನ್ನು ಉಚಿತವಾಗಿ ವಿತರಿಸುತ್ತದೆ. ಮೊದಲ ಹಂತದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಮನೆಗಳಿಗೆ ತಲುಪಲಿದೆ ಎಂದು ವಿವರಿಸಿದ್ದಾರೆ.

ಹತ್ತಾರು ಲಕ್ಷ ಜನರು ಮೂಲ ರಾಮಾಯಣವನ್ನು ಓದುವಂತೆ ಮಾಡುವ ಪ್ರಯತ್ನ ಇದಾಗಿದ್ದು, ಲಕ್ಷ ಲಕ್ಷ ಮನೆಗಳಲ್ಲಿ ನೂರಾರು ವರ್ಷ ರಾಮಾಯಣ ಪುಸ್ತಕ ಇರುವಂತೆ ಮಾಡುವ ಮಹದುದ್ದೇಶದ ಯೋಜನೆ ಇದಾಗಿದೆ. ಹಲವು ತಲೆಮಾರುಗಳಿಗೆ ಇದರ ಪ್ರಯೋಜನ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

See also  ಸ್ಯಾಂಡಲ್ ವುಡ್: ಝೈದ್ ಖಾನ್ ನಟನೆಯ 'ಬನಾರಸ್' ಸಿನಿಮಾ ಇಂದು ತೆರೆಗೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು