ಕಾರವಾರ: ನಗರದ ಸೇಂಟ್ ಮೈಕಲ್ ಪ್ರೌಢ ಶಾಲೆಯಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯ ಸಮಾರೋಪ ಸಮಾರಂಭ ಶನಿವಾರ ನಡೆಯಿತು.
17 ವರ್ಷದ ಬಾಲಕಿಯರ ವಿಭಾಗದಲ್ಲಿ ಉಡುಪಿಯ ಸಾನ್ವಿ ಎಸ್ ಬಲ್ಲಾಳ ಪ್ರಥಮ, ಮೈಸೂರಿನ ಅನಘ ಕೆಜಿಆರ್ ದ್ವಿತೀಯ, ಉಡುಪಿಯ ದಿಶಾ ತೃತೀಯ, ಉಡುಪಿಯ ಯಶಸ್ವಿ ಚತುರ್ಥ ಹಾಗೂ ಮಂಡ್ಯದ ಯಶಸ್ವಿ ಎಸ್ ಕಿರಣ ಐದನೇ ಸ್ಥಾನ ಪಡೆದರು.
ಬಾಲಕರ ವಿಭಾಗದಲ್ಲಿ ಬೆಂಗಳೂರು ಉತ್ತರದ ತೇಜಸ್ ಕೆ ಪ್ರಥಮ, ಧಾರವಾಡದ ಸಚಿನ್ ಪೈ ದ್ವಿತೀಯ, ಮೈಸೂರಿನ ಕಾರ್ತಿಕ ಪಿ ತೃತೀಯ, ಮಂಗಳೂರಿನ ನಿನಾಧ ಎಸ್ ಎ ಚತುರ್ಥ ಹಾಗೂ ಮಂಗಳೂರಿನ ಧನುಶ್ ರಾಮ ಎಂ ಐದನೇ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಬಾಲಕಿಯರ 14 ವರ್ಷದೊಳಗಿನ ವಿಭಾಗದಲ್ಲಿ ಕೊಡಗಿನ ಅನಿಶಾ ಎಚ್ ದೇವಾಡಿಗ ಪ್ರಥಮ, ಮೈಸೂರಿನ ಸಹನಾ ಕೆ ಎನ್ ದ್ವಿತೀಯ, ಶಿವಮೊಗ್ಗದ ಪಾವನಿ ಆರ್ ತೃತೀಯ, ಮಂಗಳೂರಿನ ರಿಸಿಲ್ಲಾ ಡಿಸೋಜಾ ಚತುರ್ಥ ಹಾಗೂ ಉತ್ತರ ಕನ್ನಡದ ಸಿಂಚನಾ ಜಿ ಭಟ್ ಐದನೇ ಸ್ಥಾನ ಪಡೆದರು.
ಬಾಲಕರ ವಿಭಾಗದಲ್ಲಿ, ಉತ್ತರ ಕನ್ನಡದ ಅಭಿನೀಶ ಭಟ್ ಪ್ರಥಮ, ಶಿವಮೊಗ್ಗದ ತೇಜಸ್ ಎಂ ಶೆನೋಯಿ ದ್ವಿತೀಯ, ಬಳ್ಳಾರಿಯ ನಂದನ ಎಂಎಂಬಿ ತೃತೀಯ, ಶಿವಮೊಗ್ಗದ ವಿಲಾಸ್ ಅಂದ್ರಡೆ ಚತುರ್ಥ ಹಾಗೂ ಮೈಸೂರಿನ ಹೃತ್ವಿಕ್ ಆರ್ ಐದನೇ ಸ್ಥಾನ ಪಡೆದರು.
ಈ ಸಂದರ್ಭದಲ್ಲಿ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ಕಾರವಾರ ಶೈಕ್ಷಣಿಕ ಜಿಲ್ಲರಯ ಡಿಡಿಪಿಐ ಈಶ್ವರ ನಾಯ್ಕ, ಶಾಂತೇಶ ನಾಯಕ, ನೌಕರರ ಸಂಘದ ಅಧ್ಯಕ್ಷ ಸಂಜೀವ ಕುಮಾರ ನಾಯ್ಕ, ಧಾರವಾಡ ಡಿಡಿಪಿಐ ಕಚೇರಿಯ ಕಲಬಕ್ಕನವರ್, ದೈಹಿಕ ಶಿಕ್ಷಣ ಅಧಿಕಾರಿ ಚಂದ್ರಕಾಂತ ಸಾಂಗ್ಲಿ, ದೈಹಿಕ ಶಿಕ್ಷಕ ಸುಧಾಕರ ಗುನಗಿ, ಜೈರಂಗನಾಥ, ಆರ್.ಪಿ.ಗೌಡ, ಪ್ರವೀಣ ತಳೇಕರ್ ಹಾಗೂ ಸಿಸ್ಟರ್ ಕ್ರಿಸ್ಟಿನಾ ಜೋಸೆಫ್ ಇದ್ದರು.