ಕಾರವಾರ: ಸಮಾಜದಲ್ಲಿ ಎಲ್ಲರು ಸಮಾನರು. ಎಲ್ಲರಿಗೂ ಸಮಾನ ಹಕ್ಕುಗಳಿಗೆ. ಅದನ್ನು ತಿಳಿಸುವುದೇ ಸಂವಿಧಾನ ಎಂದು ಕಾರವಾರ ಉಪವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ ಹೇಳಿದರು.
ನಗರದ ದಿವೇಕರ್ ಕಾಲೇಜಿನಲ್ಲಿಶನಿವಾರ ನೆಹರು ಯುವ ಕೇಂದ್ರದ ವತಿಯಿಂದ ಆಯೋಜಿಸಿದ್ದ ಸಂವಿಧಾನದಿನಾಚರಣೆಯಲ್ಲಿ ಮಾತನಾಡಿದರು.
ಎಲ್ಲ ಧರ್ಮಗ್ರಂಥಗಳ ಗ್ರಂಥವೆ ಭಾರತದ ಸಂವಿಧಾನ. ಅದರಲ್ಲಿ ಅಷ್ಟು ಅಂತಹ ವಿಷಯಗಳು ಅಡಗಿವೆ. ಅದರಲ್ಲಿ ಬಹುತೇಕ ವಿಷಯಗಳು ವಿದ್ಯಾರ್ಥಿಗಳಿಗೆ ಗೊತ್ತಿಲ್ಲ. ಅದನ್ನು ಓದಿ ತಿಳಿದುಕೊಂಡು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಇಂದಿನ ವಿದ್ಯಾರ್ಥಿನಿಗಳ ಕೈಯಲ್ಲಿ ದೇಶದ ಮುಂದಿನ ಭವಿಷ್ಯವಿದೆ. ಅದನ್ನು ಅರಿತು ಸಂವಿಧಾನದ ತಿರುಳು ಸಾಮಾಜಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರಭಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅರವಿಂದ ಕಲಗುಜ್ಜಿ ಮಾತನಾಡಿ, ಸಂವಿಧಾನ ನಮಗೆ ಬದುಕುವ ಹಕ್ಕು ನೀಡುತ್ತದೆ. ಧರ್ಮಗ್ರಂಥ ಓದುವಂತೆ ಸಂವಿಧಾನಓದುವ ಅಗತ್ಯವಿದೆ ಎಂದರು. ಸಹ ಪ್ರಾಧ್ಯಾಪಕ ಎಸ್.ವಿ. ವಸ್ತ್ರದ ಉಪನ್ಯಾಸ ನೀಡಿದರು.
ದಿವೇಕರ್ ಕಾಲೇಜ್ಪ್ರಾಶುಪಾಲ ಕೇಶವ ಕೆ.ಜಿ. ಜಿಲ್ಲಾ ಯುವ ಅಧಿಕಾರಿ ಯಶವಂತ ಯಾದವ ಇದ್ದರು.