News Kannada
Friday, February 03 2023

ಉತ್ತರಕನ್ನಡ

ಕಾರವಾರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಗುತ್ತಿಗೆದಾರರ ಸಂಘಕ್ಕೆ ನೀಡುವಂತೆ ಒತ್ತಾಯ

Photo Credit : By Author

ಕಾರವಾರ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರೆಯಲಾಗುವ ಟೆಂಡರ್‌ಗಳಲ್ಲಿ ಎಸ್‌ಸಿ-ಎಸ್‌ಟಿ ಗುತ್ತಿಗೆದಾರರಿಗೆ ನೀಡಲಾಗುವ ಟೆಂಡರ್‌ಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಗುತ್ತಿಗೆದಾರರ ಸಂಘಕ್ಕೆ ನೀಡುವಂತೆ ಸಂಘದ ಅಧ್ಯಕ್ಷ ದೀಪಕ ಕುಡಾಳಕರ ಒತ್ತಾಯಿಸಿದ್ದಾರೆ.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಗ್ರಾಪಂ, ನಗರಸಭೆ ಮುಂತಾದ ಕಡೆ ಕರೆಯಲಾಗುವ ಟೆಂಡರ್‌ಗಳಲ್ಲಿ ಎಷ್ಟು ಕಾಮಗಾರಿಗಳು ಪ.ಜಾ. ಹಾಗೂ ಪ.ಪಂ. ಗುತ್ತಿಗೆದಾರರಿಗೆ ಬಂದಿರುತ್ತದೆ ಎನ್ನುವುದುನ್ನು ಮೊದಲೇ ತಿಳಿಸಬೇಕಾಗುತ್ತದೆ. ಆದರೆ ಹೀಗಾಗದೇ ಕಾಮಗಾರಿಗಳನ್ನು ಯಾರೋ ಮುಗಿಸಿಕೊಂಡು ಬಳಿಕ ಇದನ್ನು ಇಂತಹವರು ಮಾಡಿದ್ದಾರೆ ಎಂದು ಯಾವುದೋ ಒಬ್ಬ ಎಸ್‌ಸಿ ಅಥವಾ ಎಸ್‌ಟಿ ಗುತ್ತಿಗೆದಾರರ ಹೆಸರನ್ನು ಸೇರಿಸಲಾಗುತ್ತದೆ. ಹೀಗೇ ಎಷ್ಟೋ ಬಾರಿ ಇಂತಹ ಕಾಮಗಾರಿ ತನ್ನ ಹೆಸರಿನಲ್ಲಿ ನಡೆದಿದೆ ಎನ್ನುವುದು ಗುತ್ತಿಗೆದಾರರಿಗೇ ಗೊತ್ತಿರುವುದಿಲ್ಲ. ಬಳಿಕ ಕಾಮಗಾರಿ ಕಳಪೆ ಆದಾಗ ಇದು ಎಸ್.ಸಿ. ಎಸ್.ಟಿ. ಗುತ್ತಿಗೆದಾರರ ಮೇಲೆ ಆರೋಪ ಬರುತ್ತದೆ. ಇನ್ನು ಕೆಲವೆಡೆ ಒಬ್ಬರಿಗೆ 3-4 ಕಾಮಗಾರಿ ಸಿಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಾಮಗಾರಿಗೆ ಟೆಂಡರ್ ಕರೆಯುವಾಗ ನಮ್ಮ ಸಂಘಕ್ಕೆ ತಿಳಿಸಿದರೆ ಒಂದೊAದು ಕಾಮಗಾರಿಗಳನ್ನು ಒಬ್ಬೊಬ್ಬರಿಗೆ ನೀಡಿ ಸಮನಾಗಿ ಹಂಚಲು ಸಾಧ್ಯವಾಗುತ್ತದೆ ಎಂದರು.

ಈ ಬಗ್ಗೆ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದೆ. ಸಂಬAಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದರು.

ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಆಯ್ಕೆ:
ಪ.ಜಾತಿ ಮತ್ತು ಪ.ಪಂಗಡ ಗುತ್ತಿಗೆದಾರರ ಸಂಘದ ಸಭೆ ನಡೆಸಿ ನೂತನವಾಗಿ ಸಮಿತಿಯನ್ನು ರಚಿಸಲಾಗಿದೆ. ದೀಪಕ ಕುಡಾಲಕರ ಅವರು ಸಂಘದ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಚಂದ್ರಕಾAತ ಆಗೇರ ಹಾಗೂ ತಿಮ್ಮಾರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಎಲಿಶಾ ಯಲಕಪಾಟಿ, ಖಜಾಂಚಿಯಾಗಿ ಧರ್ಮರಾಯ ಮುಡಸಾಲಿ, ಸಹ ಕಾರ್ಯದರ್ಶಿಯಾಗಿ ಕೃಷ್ಣ ಮಲಸಮುದ್ರ, ಸಹಖಜಾಂಚಿಯಾಗಿ ರಾಜು ವಡ್ಡರ, ಉಳಿದಂತೆ ಸದಸ್ಯರಾಗಿ ಪ್ರಕಾಶ ವಡ್ಡರ, ಚಿನ್ನಾ ಯಲಕಪಾಟಿ, ಲಲಿತಾ, ಟೋನಿ, ರಾಜೇಂದ್ರ, ಅಕ್ಷಯ, ಸುಭಾಷ, ಆನಂದು, ಬಸವರಾಜ, ಬೋಜರಾಜ, ದುಂಡಪ್ಪ ಹಾಗೂ ಶಾಂತಾ ಅವರು ನೇಮಕಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

See also  ಮಂಗಳೂರು: ಪಂಪವೆಲ್ ನಿಂದ ಬಲ್ಮಠದವರೆಗೆ ವಾಕಥಾನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು