ಕಾರವಾರ: ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಾಕಷ್ಟು ಕಾಮಗಾರಿಗಳನ್ನು ನೀಡುತ್ತಿದೆ. ನಮ್ಮ ಲಯೋಲ ವಿಕಾಸ ಒಕ್ಕೂಟದ ಸದಸ್ಯರು ಇದರ ಸದುಪಯೋಗ ಪಡೆಯಬೇಕು ಎಂದು ಲಯೋಲ ವಿಕಾಸ ಕೇಂದ್ರದ ಫಾದರ್ ಅನೀಲ್ ಡಿಸೋಜಾ ಅಭಿಪ್ರಾಯಪಟ್ಟರು.
ಮುಂಡಗೋಡ ತಾಲೂಕಿನ ಲಯೋಲ ವಿಕಾಸ ಕೇಂದ್ರದಲ್ಲಿ ಎಲ್ವಿಕೆ ಒಕ್ಕೂಟದಿಂದ ಆಯೋಜಿಸಿದ್ದ ನರೇಗಾ ಮಾಹಿತಿ ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನರೇಗಾ ಯೋಜನೆಯಡಿ ಇರುವ ಸೌಲಭ್ಯಗಳ ಬಗ್ಗೆ ಇಂದು ಮಾಹಿತಿ ಪಡೆದಿದ್ದಿರಿ. ಈ ತರಬೇತಿ ಕೇವಲ ಕೇಳುವುದಕ್ಕೆ ಸಿಮೀತವಾಗಿರದೆ, ಸಂಬಂಧಪಟ್ಟ ಗ್ರಾಮ ಪಂಚಾಯತ್ ಸಂಪರ್ಕಿಸಿ ಕಾಮಗಾರಿ ಪಡೆಯುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ಜೊತೆಗೆ ತಮ್ಮ ಸುತ್ತಲಿನವರಿಗೂ ಯೋಜನೆಯ ಮಾಹಿತಿ ತಲುಪಿಸಿ ಯೋಜನೆಯ ಯಶಸ್ಸಿಗೆ ಕೈಜೋಡಿಸಬೇಕು.
ನರೇಗಾ ಯೋಜನೆಯ ರೂಪುರೇಷೆಗಳು, ಉದ್ದೇಶ, ಉಪಯೋಗ ಹಾಗೂ ಕಾಮಗಾರಿಗಳ ಸಂಪೂರ್ಣ ಮಾಹಿತಿ ಕುರಿತು ತಾಲೂಕು ಪಂಚಾಯತ್ ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ವಿವರಿಸಿದರು. ಕೂಲಿಕಾರರಿಗೆ ಅವಶ್ಯಕವಿರುವ ಇ-ಶ್ರಮ್ ಹಾಗೂ ಆಭಾ ಕಾರ್ಡ ಪ್ರತಿಯೊಬ್ಬರು ಪಡೆಯಬೇಕೆಂದರು.
ಈ ಸಂದರ್ಭದಲ್ಲಿ ಒಕ್ಕೂಟದ ಕಾಂಚನಾ ತಹಸೀಲ್ದಾರ್, ಶಾಂತವ್ವ ವಾಲ್ಮೀಕಿ, ಮಂಗಳಾ ಮೊರೆ, ಕಾತೂರು ಹಾಗೂ ಚೌಡಳ್ಳಿ ಗ್ರಾಮದ ಒಕ್ಕೂಟದ ಎಲ್ಲಾ ಸದಸ್ಯರು ಭಾಗಿಯಾಗಿದ್ದರು.