ಕಾರವಾರ: ಜಿಲ್ಲೆಯ ಕರಾವಳಿಯ ಸಮುದ್ರಗಳಲ್ಲಿ ವಲಸೆ ಹಕ್ಕಿಗಳ ಕಲರವ ಪ್ರಾರಂಭವಾಗಿದೆ. ಕಡಲತೀರಕ್ಕೆ ಆಗಮಿಸುತ್ತಿರುವ ಸಾವಿರಾರು ಪ್ರವಾಸಿಗರನ್ನು ಸಾಲುಸಾಲಾಗಿ ಬಂದ ಪ್ರವಾಸಿ ಹಕ್ಕಿಯಾಗಿ ಸೀಗರ್ಲ್ (ಸೀ ಬರ್ಡ್ ಹಕ್ಕಿಗಳು ಆಕರ್ಷಿಸುತ್ತಿದೆ. ಹಿಂದೆ ಕರಾವಳಿಯ ದಡದ ಸಾಂಪ್ರದಾಯಿಕ ರೀತಿಯಲ್ಲಿ ಮೀನುಗಾರಿಕೆ ಹೆಚ್ಚಿನ ಪ್ರಾಮಾಣದಲ್ಲಿ ನಡೆಯುತ್ತಿತ್ತು.
ಆ ಕಾಲದಲ್ಲಿ ಸೀಗರ್ಲ್ಗಳು ಸಾವಿರಾರು ಸಂಖ್ಯೆಯಲ್ಲಿ ಕಾಣಲು ಸಮುದ್ರದ ಮೇಲೆ ಸ್ವಚ್ಛಂದವಾಗಿ ಹಾರುತ್ತಾ ಸಮುದ್ರದಲ್ಲಿ ಮೀನುಗಳ ಬೇಟಿ ಮಾಡಿ ಬಳಿಕ ವಲಸೆ ಬಂದ ಸ್ಥಳಕ್ಕೆ ಮರಳುತ್ತಿದ್ದವು. ಆದರೆ ಇತ್ತೀಚೆಗೆ ಈ ಹಕ್ಕಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಟಿಂತವಾಗಿದೆ.
ಇದಕ್ಕೆ ಮುಖ್ಯ ಕಾರಣ ಆಹಾರದ ಕೊರತೆಯೇ ಕಾರಣ ಎನ್ನಲಾಗುತ್ತಿದೆ. ಆಧುನಿಕ ರೀತಿಯ ಕಡಲ ಮೀನುಗಾರಿಕೆ ಬೆಳೆದಂತೆ, ಆಹಾರ ಕೊರತೆ ಎದುರಿಸುತ್ತಿರುವ ಸೀಗರ್ಲ್ ಸಂತತಿ ವಿನಾಶದ ಅಂಚಿನಲ್ಲಿದೆ. ಆಗೊಮ್ಮೆ ಇಗೊಮ್ಮೆ ಕಾಣಲು ಸಿಗುತ್ತಿರುವ ಈ ಸಂತತಿಯ ರಕ್ಷಣೆಯಾಗಬೇಕಾಗಿದೆ.
ಹಿಂದೆ ನಡೆಯುತ್ತಿದ್ದ ಯಾಂತ್ರೀಕೃತ ಬೋಟುಗಳ ಅವೈಜ್ಞಾನಿಕ ರೀತಿಯ ಮೀನುಗಾರಿಕೆಯಿಂದ ಕಡಲು ಬರಿದಾಗುತ್ತಿದೆ. ಇದು ಕಡಲಿನಲ್ಲಿ ಮೀನಿನ ಕ್ಷಾಮಕ್ಕೂ ಕಾರಣವಾಗುತ್ತಿದೆ. ಇನ್ನೊಂದೆಡೆ ಇದರ ದುಷ್ಪರಿಣಾಮದಿಂದ ಈ ಪಕ್ಷಿಗಳು ಪ್ರಕೃತಿದತ್ತವಾದ ಆಹಾರದಿಂದ ವಂಚಿತವಾಗುತ್ತಿದ್ದವು. ಈ ಸಮುದ್ರ ಹಕ್ಕಿಗಳು ಆಹಾರದ ತೀವ್ರ ಕೊರತೆಯಿಂದ ಕೆರೆ, ಆಣೆಕಟ್ಟುಗಳಂಥ ಹಿನ್ನೀರಿನ ನದಿ ಪಾತ್ರದ ಕಡೆ ಆಹಾರ ಹುಡುಕಿಕೊಂಡು ಹೋಗುತ್ತಿವೆ. ಸದ್ಯ ಯಾಂತ್ರಿಕೃತ ಬೋಟುಗಳಿಂದ ಅವೈಜ್ಞಾನಿಕವಾಗಿ ಮೀನುಗಾರಿಕೆ ನಡೆಸುವುದು ಸ್ಥಗೀತಗೊಂಡಿದೆ.
ಆಳಸಮುದ್ರದಲ್ಲೇ ಹೆಚ್ಚು:ಪ್ರತಿವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ಪಶ್ಚಿಮ ಕರಾವಳಿಗೆ ಬರುವ ಸೀಗರ್ಲ್ (ಸೀಬರ್ಡ್)ಹಕ್ಕಿಗಳ ನಿನಾದ ಅರಬ್ಬಿ ಸಮುದ್ರದಲ್ಲಿ ಜೋರಾಗುತ್ತಿದೆ. ಸಮುದ್ರದ ನೀರಿನ ಮೇಲೆ ಉದ್ದವಾದ ಸಾಲಿನಲ್ಲಿ ಕುಳಿತು ಹೊಂಚು ಹಾಕಿ ಮೀನು ಬೇಟೆಯಾಡುವ ಅದರ ಪರಿ ನೋಡುವುದೇ ಸೊಗಸು ಜನರ ಕಣ್ಮನ ಸೆಳೆಯಲು ಪ್ರಾರಂಭವಾಗಿದೆ. ಆಳವಾದ ಸಮುದ್ರದಲ್ಲಿ ಹೆಚ್ಚಾಗಿ ಕಂಡು ಬರುವ ಈ ಹಕ್ಕಿ ಸಂತತಿ, ಸಮುದ್ರದ ನಡುಗಡ್ಡೆಗಳಲ್ಲಿ ಗುಂಪಿನಲ್ಲಿ ವಾಸ ಮಾಡುತ್ತವೆ. ಅದಲ್ಲದೇ ಸಮುದ್ರದ ಮೇಲೆ ಸದಾ ತೇಲುತ್ತ ಮೀನು ಬೇಟೆಯಾಡುತ್ತಾ, ಹಾರಾಡುತ್ತಾ, ಇತರ ಹಕ್ಕಿಗಳ ಬೇಟೆಯಾಡಿದ ಮೀನುಗಳನ್ನು ಕಿತ್ತಾಡಿ ತಿನ್ನತ್ತ ಕಾಲ ಕಳೆಯುತ್ತವೆ. ಆಹಾರಕ್ಕಾಗಿ ನೀರಿನ ಮೇಲ್ಮೈಯಲ್ಲಿ ಮೀನಿನ ಗುಂಪು ಕಂಡು ಹಿಡಿದು ಚಾಣಾಕ್ಷತನದಿಂದ ಗುಂಪಿನ ಮೇಲೆ ಎಗರಿ ಹಿಡಿದು ಮೀನನ್ನು ನೇರವಾಗಿ ನುಂಗುವುದು ಇದರ ವಿಶೇಷತೆಯಾಗಿದೆ. ಸ್ಥಳೀಯ ಮೀನುಗಾರರ ಪ್ರಕಾರ ಎಲ್ಲಿ ಈ ಹಕ್ಕಿ ಹೆಚ್ಚಿನ ಸಂಖ್ಯೆ ಜಾಸ್ತಿಯಾಗಿ ಕಂಡು ಬರುತ್ತದೆಯೋ! ಅಲ್ಲಿ ಮೀನು ಹೆಚ್ಚಿನ ಸಂಖ್ಯೆಯಲ್ಲಿವೆ ಎನ್ನುತ್ತಾರೆ.
ವಲಸೆ ಹಕ್ಕಿ ಸೈಬೇರಿಯಾ ಮೂಲದ ಈ ಹಕ್ಕಿಗಳು ಮಾರ್ಚ್ ತಿಂಗಳ ನಂತರ ಮೂಲ ನೆಲಕ್ಕೆ ವಾಪಸಾಗುತ್ತವೆ. ನವೆಂಬರ್ ತಿಂಗಳಲ್ಲಿ ಚಳಿಗಾಲ ಆರಂಭವಾಗುತ್ತಿದ್ದಂತೆ ಭಾರತದತ್ತ ವಲಸೆ ಬರುವ ಈ ಹಕ್ಕಿಗಳು ದಿನವಿಡಿ ಸಮುದ್ರದ ನೀರಿನಲ್ಲಿ ಕಾಲ ಕಳೆಯುವ ಈ ಹಕ್ಕಿಗಳು ಸಮುದ್ರದ ದಂಡೆ ಮೇಲೆ ಬರುವುದು ಅಪರೂಪ. ನಿರ್ಜನ ಪ್ರದೇಶ ಇಷ್ಟಪಡುವ ಈ ಹಕ್ಕಿಗಳು, ಅಂತಹ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ದಂಡೆಯ ಮೇಲೆ ವಿಶ್ರಾಂತಿ ಪಡೆಯುತ್ತವೆ. ಆ ಸಮಯದಲ್ಲಿ ಸಮುದ್ರ ದಂಡೆಯ ಮೇಲೆ ಅವುಗಳ ವಿಹಾರ ಪ್ರವಾಸಿಗರಿಗೆ ಕಣ್ಮನ ಸೆಳೆಯುತ್ತದೆ. ತೇವಾಂಶ ಇರುವಲ್ಲಿ ನೀರಿನ ಸೆಲೆ ಇರುವಂತೆ, ಸೀಬರ್ಡ್ ಹಕ್ಕಿಗಳಿರುವಲ್ಲಿ ಮೀನು ಅಧಿಕ ಪ್ರಮಾಣದಲ್ಲಿ ಇರುತ್ತದೆ. ಮಾರ್ಚ್ನಿಂದ ಮೇ ತಿಂಗಳ ಕೊನೆಯಲ್ಲಿ ಬೇರೆಡೆ ವಲಸೆ ಹೋಗಲು ಆರಂಭಿಸುತ್ತವೆ. ಈ ಹಕ್ಕಿಗಳು ನವೆಂಬರ್ ತಿಂಗಳಲ್ಲಿ ಸಂತಾನೋತ್ಪತ್ತಿಗಾಗಿ ಮತ್ತೆ ಕರಾವಳಿಯತ್ತ ಮರಳುತ್ತವೆ. ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಮರಿಗಳು ದೊಡ್ಡದಾಗಿ ನೂರಾರು ಸಂಖ್ಯೆಯಲ್ಲಿ ನೋಡಲು ಸಿಗುತ್ತವೆ.