News Kannada
Monday, February 06 2023

ಉತ್ತರಕನ್ನಡ

ಕಾರವಾರ: ಬೀದಿ ವ್ಯಾಪಾರಿಗಳ ಸಮಸ್ಯೆ ಬಗೆಹರಿಸಲು ಸಭೆ

Karwar: Meeting to resolve issues of street vendors
Photo Credit : By Author

ಕಾರವಾರ: ನಗರದಲ್ಲಿ ಬೀದಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ನಗರಸಭೆ ಕಚೇರಿಯಲ್ಲಿ ಬೀದಿ ವ್ಯಾಪಾರಿಗಳು ಹಾಗೂ ನಗರಸಭೆ ಅಧ್ಯಕ್ಷರು, ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ ಮಾತನಾಡಿದ ಬೀದಿಬದಿಯಲ್ಲಿ ಕುಳಿತು ಹಣ್ಣು, ಹೂವು, ತರಕಾರಿ ಮಾರಾಟ ಮಾಡುತಿರುವುದರಿಂದ ಜನರ, ವಾಹನಗಳ ಓಡಾಟಕ್ಕೆ ತೊಂದರೆ ಆಗುತ್ತಿದ್ದ ಕಾರಣದಿಂದಾಗಿ ಹೊಸ ಮಾರುಟಕ್ಟೆಯನ್ನು ನಿರ್ಮಾಣ ಮಾಡಿಕೊಡಲಾಗಿದೆ ಕಿರು ರಸ್ತೆಯಲ್ಲೇ ವ್ಯಾಪಾರಿಗಳು ಕುಳಿತುಕೊಳ್ಳುವುದರಿಂದ ತೊಂದರೆ ಆಗುತ್ತದೆ. ಅದರ ಬದಲು ಮಾರುಟಕ್ಟೆಯಲ್ಲಿ ಎಲ್ಲರೂ ಕುಳಿತರೆ ವ್ಯಾಪರಿಗಳಿಗೂ, ಜನರಿಗೂ ಸಮಸ್ಯೆ ಆಗುವುದಿಲ್ಲ ಎಂದರು.

ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಬ್ಬಾಸ್ ಮಾತನಾಡಿ, ಹೊಸದಾಗಿ ನಿರ್ಮಾಣ ಮಾಡಿದ ಮಾರುಟಕ್ಟೆಯಲ್ಲಿ ವ್ಯಾಪಾರ ಆಗುತ್ತಿಲ್ಲ. ಮಾರುಕಟ್ಟೆಯಲ್ಲಿ ವ್ಯಾಪಾರ ಆಗುವಂತೆ ಮಾಡಿದರೆ ನಾವು ಅಲ್ಲಿ ಕುಳಿತುಕೊಳ್ಳಲು ಸಿದ್ಧರಿದ್ದೇವೆ. ಕೆಲವರು ಮಾರುಟಕಟ್ಟೆ ಇದ್ದರೂ ಹೊರಗೆ ಕುಳಿತುಕೊಳ್ಳುತ್ತಾರೆ. ಇದರಿಂದ ಹೆಚ್ಚಿನ ಜನರು ಅಲ್ಲಿಗೆ ತೆರಳುತ್ತಾರೆ.

ಮಾರುಕಟ್ಟೆಯಲ್ಲಿ ಇರುವವರಿಗೆ ವ್ಯಾಪಾರವೇ ಆಗುವುದಿಲ್ಲ ಎಂದರು. ನಗರಸಭೆ ಪೌರಾಯುಕ್ತ ಆರ್. ಪಿ. ನಾಯ್ಕ, ಮಾರುಕಟ್ಟೆ ನಿರ್ಮಾಣವಾದಾಗ ರೊಟೆಷನ್ ಆಧಾರದ ಮೇಲೆ ವ್ಯಾಪಾರಿಗಳಿಗೆ ಕುಳಿತುಕೊಳ್ಳಲು ಸಲಹೆ ನೀಡಲಾಗಿತ್ತು. ಆದರೆ ಆ ರೀತಿ ಮಾಡಿಲ್ಲ ಎಂದರು. ಅಬ್ಬಾಸ ಮಾತನಾಡಿ, ಸರಕಾರ ಸೂಚನೆ ಮೇರೆಗೆ ಪಟ್ಟಣ ಮಾರಾಟ ಸಮಿತಿ ರಚನೆ ಮಾಡಲಾಗಿದೆ.

ಸರಕಾರ ಆದೇಶದಂತೆ ಬೀದಿಬದಿ ವ್ಯಾಪಾರಗಿಳಿಗೆತರಬೇತಿ ನೀಡಬೇಕು. ಆದರೆ ತರಬೇತಿಯನ್ನೇ ಕೊಟ್ಟಿಲ್ಲ. ಸಭೆಗೆ ಹಾಜರಾಗುವ ಸದಸ್ಯರಿಗೆ ಭತ್ಯೆ ನೀಡಬೇಕು. ಅದನ್ನು ನೀಡಿಲ್ಲ. ಸರಕಾರದಿಂದ ಬರುವ ಸೌಲಭ್ಯ ಯಾವುದು ಬೀದಿಬದಿ ವ್ಯಾಪಾರಿಗಳಿಗೆ ಸಿಗುತ್ತಿಲ್ಲ ಎಂದು ಆಕ್ರೊಶ ಹೊರಹಾಕಿದರು. ಅಧ್ಯಕ್ಷ ಪಿಕಳೆ, ಈ ಬಗ್ಗೆ ಪ್ರತ್ಯೇಕ ಸಭೆ ಮಾಡಿ ಚರ್ಚೆ ಮಾಡೋಣ ಎಂದರು.

ಬೀದಿಬದಿ ವ್ಯಾಪಾರಸ್ಥರೊಂದಿಗೆ ಸ್ಥಳದ ಬಗ್ಗೆ ದೀರ್ಘ ಚರ್ಚೆ ನಡೆಸಿ ಎಲ್ಲರ ಸಲಹೆ ಪಡೆಯಲಾಯಿತು. ತರಕಾರಿ, ಬಟ್ಟೆ, ಹೂವು, ಹಣ್ಣು ಒಳಗೊಂಡು ಎಲ್ಲಾ ರೀತಿಯ ಬೀದಿಬದಿ ವ್ಯಾಪಾರಸ್ಥರು ಈಗಿರುವ ಹೊಸ ಮಾರುಕಟ್ಟೆ ಜೊತೆಗೆ ಲೈಬ್ರರಿ ರಸ್ತೆಯಲ್ಲಿ ಕುಳಿತುಕೊಂಡು ವ್ಯಾಪಾರ ವಹಿವಾಟು ಮಾಡಲು ಒಪ್ಪಿಗೆ ನೀಡಿದರು. ವ್ಯಾಪಾರಿಗಳು ಹೆಚ್ಚಾದಲ್ಲಿ ಎಂ.ಜಿ.ರಸ್ತೆಯಲ್ಲಿ ಅವಕಾಶ ನೀಡಲು ನಗರಸಭೆಯವರು ಒಪ್ಪಿಗೆ ಸೂಚಿಸಿದರು. ಇದರ ಹೊರತಾಗಿ ಯಾರೂ ಬೀದಿಬದಿ ವ್ಯಾಪಾರಿಗಳು ನಗರದ ಇತರೆ ರಸ್ತೆಗಳಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಬಾರದು ಎಂದು ವ್ಯಾಪಾರಿಗಳು ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರಸಭೆ ಉಪಾಧ್ಯಕ್ಷ ಪಿ.ಪಿ.ನಾಯ್ಕ, ರೇಷ್ಮಾ ಮಾಳ್ಸೇಕರ, ಪ್ರೇಮಾನಂದ ಗುನಗ, ಮಾಲಾ ಹುಲಸ್ವಾರ್ ಮೊದಲಾದವರು ಸಭೆಯಲ್ಲಿದ್ದರು.

See also  ಕಾರವಾರ: ಸತೀಶ ಜಾರಕಿಹೊಳಿ ವಿರುದ್ಧ ಎಸ್ಪಿ ಕಚೇರಿ ಬಳಿಕ ಬಿಜೆಪಿಗರಿಂದ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು