ಕಾರವಾರ: ಗೋವಾದಿಂದ ಅಕ್ರಮವಾಗಿ ಮದ್ಯವನ್ನು ಕರ್ನಾಟಕಕ್ಕೆ ಸಾಗಿಸುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮ ಮದ್ಯ, ಸಾಗಾಟಕ್ಕೆ ಬಳಸಿದ್ದ ಕಾರಿನೊಂದಿಗೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ಗುರುವಾರ ತಾಲೂಕಿನ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ನಡೆದಿದೆ. ಕುಮಟಾ ತಾಲ್ಲೂಕಿನವರಾದ ಕೃಷ್ಣಾ ಕೆ. ನಾಯ್ಕ, ಗಣೇಶ ಎಲ್. ಮೇಸ್ತ್ರಿ, ಕೀರ್ತಿ ಜಿ. ನಾಯ್ಕ ಆರೋಪಿಗಳಾಗಿದ್ದಾರೆ.
ಈ ಮೂವರು ತಮ್ಮ ಮಹಿಂದ್ರಾ ಕಂಪನಿಯ ಕಾರಿನಲ್ಲಿ 30.25 ಲೀ. ವಿವಿಧ ಬ್ರಾಂಡ್ ನ ವಿಸ್ಕಿಯನ್ನು ಅಕ್ರಮವಾಗಿ ಗೋವಾದಿಂದ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ತಾಲ್ಲೂಕಿನ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ತಡೆದು ತಪಾಸಣೆ ನಡೆಸಿ ಆರೋಪಗಳನ್ನು ವಶಕ್ಕೆ ಪಡೆದಿದ್ದಾರೆ. ಮದ್ಯದ ಮೌಲ್ಯ ಸುಮಾರು 8630 ರೂ. ಗಳಾಗಿದ್ದು ಕಾರಿನ ಮೌಲ್ಯ ಸುಮಾರು 12 ಲಕ್ಷ ರೂ ಸೇರಿ ಒಟ್ಟಾರೆಯಾಗಿ 12,8630 ರೂ. ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ