News Kannada
Wednesday, February 01 2023

ಉತ್ತರಕನ್ನಡ

ಕಾರವಾರ: ಬಿಣಗಾದಲ್ಲಿ ಅಪಘಾತ, ಬಾಲಕಿ ಸಾವು

Karwar: Girl dies in accident in Binaga
Photo Credit : By Author

ಕಾರವಾರ: ಚಲಿಸುತ್ತಿದ್ದ ಬೈಕ್ಗೆ ಸೀಬರ್ಡ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಗಳು ಸ್ಥಳದಲ್ಲಿಯೇ ಮೃತಪಟ್ಟು ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಬಿಣಗಾ ಬಳಿ ಶನಿವಾರ ನಡೆದಿದೆ.

ಬಿಣಗಾದ ಲವಿಟಾ ಜಾರ್ಜ್ ಫೆರ್ನಾಂಡೀಸ್ (೧೩) ಮೃತ ಬಾಲಕಿ. ಈಕೆಯ ತಂದೆ ಜಾರ್ಜ್ ಫರ್ನಾಂಡೀಸ್ (೪೧) ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸ ವರ್ಷದ ಹಿನ್ನಲೆಯಲ್ಲಿ ಬಟ್ಟೆ ಖರೀದಿಗೆ ಬೈಕ್ ಮೇಲೆ ನಗರಕ್ಕೆ ತೆರಳಲು ಮುಖ್ಯ ರಸ್ತೆ ದಾಟಿ ಮುಂದೆ ಚಲಿಸುತ್ತಿದ್ದರು. ಇದೇ ವೇಳೆಗೆ ಬೆಂಗಳೂರಿನಿಂದ ಕಾರವಾರಕ್ಕೆ ವೇಗವಾಗಿ ಆಗಮಿಸುತ್ತಿದ್ದ ಸೀಬರ್ಡ್ ಬಸ್ ಹಿಂಬದಿಯಿಂದ ಡಿಕ್ಕಿಯಾಗಿದೆ.

ಘಟನೆಯಲ್ಲಿ ಬಾಲಕಿ ತಲೆ ರಸ್ತೆಗೆ ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗಂಭೀರ ಗಾಯಗೊಂಡಿದ್ದ ಬಾಲಕಿ ತಂದೆಯನ್ನು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಘಟನೆಯಿಂದ ಆಕ್ರೋಶಗೊಂಡ ಸ್ಥಳಿಯರು ಹೆದ್ದಾರಿ ತಡೆದು ಕೆಲ ಕಾಲ ಪ್ರತಿಭಟನೆ ನಡೆಸಿದರು. ಅರೆಬರೆ ಕಾಮಗಾರಿ ನಡೆಯುವ ಬಗ್ಗೆ ಅರಿವಿದ್ದರು ಬಸ್ಚಾಲಕರು ವೇಗವಾಗಿ ಚಲಿಸುತ್ತಾರೆ. ಇದರಿಂದ ಈ ಭಾಗದಲ್ಲಿ ಪದೆ ಪದೆ ಅಪಘಾತವಾಗುತ್ತಿದೆ.

ಇದೀಗ ಬಾಳಿ ಬದುಕಬೇಕಾದ ಬಾಲಕಿ ಸಾವನ್ನಪ್ಪಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಅಲ್ಲದೆ ಸೀಬರ್ಡ್ ಬಸ್ ಮಾಲಕರು ಸ್ಥಳಕ್ಕೆ ಆಗಮಿಸಿ ಅಪಘಾತಗೊಂಡ ಜಾರ್ಜ್ ಫರ್ನಾಂಡಿಸ್ ಅವರಿಗೆ ಸೂಕ್ತ ಚಿಕತ್ಸೆ ಕೊಡಿಸಬೇಕು. ಅಲ್ಲದೆ ಮೃತ ಬಾಲಕಿ ಕುಟುಂಬಕ್ಕೆ ಪರಿಹಾರ ನೀಡಬೇಖು ಎಂದು ಆಗ್ರಹಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಪ್ರತಿಭಟನಾಕಾರರ ಮನವೊಲಿಸಿ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂದೆ ಪಡೆಯಲಾಗಿದೆ.

See also  ಉಜಿರೆ: ಸೋಲಿನ ಕಲಿಕೆಯಿಂದ ಗೆಲುವು ನಿಶ್ಚಿತ- ಮುರಳಿ ಕೃಷ್ಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು