ಕಾರವಾರ: ಜಿಲ್ಲೆಯಲ್ಲಿ ಬೂತ್ ಮಟ್ಟದಲ್ಲಿ ಇನ್ನಷ್ಟು ಶಕ್ತಿ ತುಂಬಲು ಜ. 2 ರಿಂದ 12 ರವರೆಗೆ ಬೂತ್ ವಿಜಯ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಎನ್.ಎಸ್ ಹೆಗಡೆ ಹೇಳಿದರು.
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಪಕ್ಷವನ್ನು ಬಲಪಡಿಸಲಾಗುತ್ತಿದೆ. ಡಬಲ್ ಎಂಜಿನ್ ಸರ್ಕಾರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದೆ. ಆದರೆ ಪಕ್ಷವನ್ನು ಇನ್ನಷ್ಟು ಸದೃಢ ಮಾಡುವ ಮತ್ತು ಕೆಳ ಮಟ್ಟದಿಂದಲೂ ಶಕ್ತಿ ತುಂಬುವ ನಿಟ್ಟಿನಲ್ಲಿ ಜ.2 ರಿಂದ ಹತ್ತು ದಿನ ಬೂತ್ ವಿಜಯ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಇದರ ಮುಖ್ಯ ಉದ್ದೇಶ ಸಂಘಟನಾತ್ಮಕವಾಗಿ ಮತಗಟ್ಟೆಯಲ್ಲಿ ಪಕ್ಷವನ್ನು ಸದೃಡ ಮಾಡುವುದು, ಬೂತ್ ಸಮಿತಿ ರಚನೆ ಮಾಡುವುದು, ಈಗಿರುವ ಬೂತ್ ಸಮಿತಿ ಪರೀಶೀಲನೆ ಮಾಡಿ ಶಕ್ತಿ ತುಂಬಲಾಗುತ್ತದೆ. ಪೇಜ್ ಪ್ರಮುಖರ ನಿಯುಕ್ತಿ, ವಾಟ್ಸಪ್ ಗ್ರೂಪ್ ರಚನೆ ಮಾಡಿ ಪಕ್ಷದ ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಲಾಗುತ್ತದೆ. ಮನ್ ಕೀ ಬಾತ್ ಯಶಸ್ವಿಗೆ ಭಾಗವಹಿಸಲು ಪ್ರೇರಪಣೆ ಮಾಡುವುದರ ಜೊತೆಗೆ ಪ್ರತಿ ಮನೆಗಳ ಮೇಲೆ ಧ್ವಜ ಹಾರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಇನ್ನು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಜಿಲ್ಲೆಗೆ ಬಾರದ ಸೀಮೆಎಣ್ಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಉಡುಪಿ, ಮಂಗಳೂರಿಗೆ ಬಂದಿದೆ. ಆದರೆ ಜಿಲ್ಲೆಗೆ ಮಾತ್ರ ಇನ್ನು ಲಭ್ಯವಾಗಿಲ್ಲ. ಈ ಬಗ್ಗೆ ಮೀನುಗಾರಿಕಾ ಸಚಿವರಿಗೆ ತಿಳಿಸಿದ್ದು ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಈ ವೇಳೆ ಬಿಜೆಪಿ ಮುಖಂಡರಾದ ಮನೋಜ್ ಭಟ್, ನಾಗೇಶ ಕುರಡೇಕರ್, ರೇಷ್ಮಾ ಮಾಳಸೇಕರ್ ಇದ್ದರು.