ಕಾರವಾರ: ಜಿಲ್ಲೆಯಲ್ಲಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಪ್ರಯುಕ್ತ ಮತದಾನ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ವ್ಯವಸ್ಥೆಗಳನ್ನು ಕಲ್ಪಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮತಗಟ್ಟೆ ಸಿಬ್ಬಂದಿ ಡೇಟಾಬೇಸ್ ರಚನೆ ಸಂಪರ್ಕ ಮತ್ತು ಸಹಾಯ ಕೇಂದ್ರ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ 2023 ರ ದೃಷ್ಟಿಯಿಂದ ಚುನಾವಣಾ ಸಿಬ್ಬಂದಿಗಳ ಡೇಟಾಬೇಸ್ ಸಿದ್ಧಪಡಿಸುವ ಅವಶ್ಯಕತೆ ಇದೆ ಎಂದರು.
ಜಿಲ್ಲೆಯಲ್ಲಿ 1435 ಮತಗಟ್ಟೆ ಕೇಂದ್ರಗಳಿದ್ದು ಪ್ರತಿ ಮತಗಟ್ಟೆಗೆ 4 ರಿಂದ 5 ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕಾಗಿರುತ್ತದೆ ಹೀಗಾಗಿ ಕಚೇರಿ ಸಿಬ್ಬಂದಿಗಳ ಪೂರ್ಣ ಮಾಹಿತಿಯನ್ನು ನೀಡಲು ಸೂಚಿಸಿದರು.
ಬಳಿಕ ಜಿಲ್ಲಾ ಪಂಚಾಯತ್ ಎನ್ಐಸಿ ಅಧಿಕಾರಿ ಶ್ರೀಕಾಂತ ಜೋಶಿ ಅವರು ಕಾರ್ಯಗಾರದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಗಾರದಲ್ಲಿ ಮತಗಟ್ಟೆ ಸಿಬ್ಬಂದಿಗಳ ಡಾಟಾಬೇಸ್ ರಚನೆ, ತಂತ್ರಾಂಶದಲ್ಲಿ ಸಿಬ್ಬಂದಿಗಳ ಡಾಟಾಬೇಸ್ ಅಳವಡಿಸುವುದರ ಬಗ್ಗೆ, ಚೆಕ್ ಲಿಸ್ಟ್ ಗಳ ರಚನೆ, ಕಚೇರಿಯಿಂದ ವರ್ಗಾವಣೆಗೊಂಡ ಅಧಿಕಾರಿಗಳ ಹೆಸರುಗಳನ್ನು ತಂತ್ರಾಂಶಗಳಿಂದ ಹೇಗೆ ತೆಗೆಯಬೇಕು, ಹೊಸ ಸಿಬ್ಬಂದಿಗಳ ಸೇರ್ಪಡೆ ಮುತಾದುಗಳ ಬಗ್ಗೆ ಕಾರ್ಯಗಾರದಲ್ಲಿ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.