ಕಾರವಾರ: ಯಲ್ಲಾಪುರ ಪಟ್ಟಣದ ಕಾಳಮ್ಮನಗರದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ‘ಹೆಬ್ಬಾರ್ ಯಲ್ಲಾಪುರ ಪ್ರೀಮಿಯರ್ ಲೀಗ್ ಸೀಜನ್ 2 2022 – 23’ ( ಲೇದರಬಾಲ್ ಕ್ರಿಕೆಟ್ ಪಂದ್ಯಾವಳಿ) ಸಮಾರೋಪ ಸಮಾರಂಭ ನಡೆಯಿತು.
ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ್ ಅವರು ಪಾಲ್ಗೊಂಡು, ವಿಜೇತ ತಂಡಕ್ಕೆ ಬಹುಮಾನವನ್ನು ವಿತರಿಸಿದರು. ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲಿ ನಡೆದ ಹೆಬ್ಬಾರ್ ಪ್ರೀಮಿಯರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನ ಒಂದು ಲಕ್ಷ ರೂ., ದ್ವಿತೀಯ ಬಹುಮಾನ 75 ಸಾವಿರ ರೂ. ತೃತೀಯ ಬಹುಮಾನ 15 ಸಾವಿರ ರೂ. ಹಾಗೂ ಚತುರ್ಥ ಬಹುಮಾನ 10 ಸಾವಿರ ರೂ. ಪ್ರಾಯೋಗಿಸಲಾಗಿತ್ತು.
ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್, ಯುವ ನಾಯಕರಾದ ವಿವೇಕ ಹೆಬ್ಬಾರ್, ಉದ್ಯಮಿ ಬಾಲಕೃಷ್ಣ ನಾಯಕ ಮುಂತಾದವರು ನಗದು ಬಹುಮಾನ, ಟ್ರೋಫಿಗಳನ್ನು ಪ್ರಾಯೋಜಿಸಿದ್ದರು.
ಈ ಸಂದರ್ಭದಲ್ಲಿ ಸಚಿವರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ್ ಪ್ರಮುಖರಾದ ವಿಜಯ ಮಿರಾಶಿ, ಪ್ರಕಾಶ ಹೆಗಡೆ, ಬಾಲಕೃಷ್ಣ ನಾಯಕ, ಪತ್ರಕರ್ತರಾದ ನಾಗರಾಜ ಮದ್ಗುಣಿ, ತಾಲೂಕಾ ಪಂಚಾಯತ ಮಾಜಿ ಸದಸ್ಯರಾದ ನಾಗರಾಜ ಕವಡಿಕೆರೆ ಹಾಗೂ ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ನ ಪದಾಧಿಕಾರಿಗಳು, ಕ್ರೀಡಾಪಟುಗಳು ಇದ್ದರು.