ಕಾರವಾರ: ಬಸ್‌ನಿಂದ ಇಳಿದು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವ, ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರ ಅಂಕೋಲಾ ಪಟ್ಟಣದ ದಿನಕರ ದೇಸಾಯಿ ರಸ್ತೆಯಲ್ಲಿ ಸಂಭವಿಸಿದೆ.
ಗೋಕರ್ಣ ಕಾರ್ ಸ್ಟ್ರೀಟ್ ಬಳಿಯ ನಿವಾಸಿ ಮಹಾಬಲೇಶ್ವರ ಜಿ. ನಂಬಿಯಾರ (61) ಮೃತ ದುರ್ದೈವಿ. ಈತ ಅನಾರೋಗ್ಯ ಸಮಸ್ಯೆಯಂದ ಅಂಕೋಲಾದ ಖಾಸಗಿ ಆಸ್ಪತ್ರೆಗೆ ಆಗಾಗ ಬಂದು ಡಯಾಲಿಸಿಸ್ ಮತ್ತಿತರ ಚಿಕಿತ್ಸೆಗೆ ಒಳಪಡುತ್ತಿದ್ದ ಎನ್ನಲಾಗಿದೆ. ಅದೇ ರೀತಿ ಈ ದಿನ ಸಹ ಗೋಕರ್ಣದಿಂದ ಬಸ್‌ನಲ್ಲಿ ಅಂಕೋಲಾಕ್ಕೆ ಬಂದಿಳಿದು, ಆಸ್ಪತ್ರೆಯತ್ತ ನಡೆದುಕೊಂಡು ಹೋಗುತ್ತಿರುವಾಗ ದಾರಿ ಮಧ್ಯೆ ಕುಸಿದು ಬಿದ್ದು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕರಿಂದ ಅಂಕೋಲಾ ಪೋಲೀಸ್ ಠಾಣೆಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಎಚ್. ಸಿ. ದಿವಾಕರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.