News Kannada
Wednesday, November 29 2023
ಉತ್ತರಕನ್ನಡ

ಸರ್ಕಾರಿ ಶಾಲೆಗಳನ್ನು ಕೊಲ್ಲುತ್ತಿರುವ ಸರ್ಕಾರ: ಚಕ್ರತೀರ್ಥ

Govt killing govt schools: Chakratheertha
Photo Credit : News Kannada

ಶಿರಸಿ: ಅಸಾಂವಿಧಾನಿಕವಾಗಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ ಕನ್ನಡ ಹಾಗೂ‌ ಸರಕಾರಿ ಶಾಲೆಗಳನ್ನು ಕೊಲ್ಲುವ ವ್ಯವಸ್ಥಿತ ಪ್ರಯತ್ನವಾಗುತ್ತದೆ ಎಂದು ಪಠ್ಯ ಪುಸ್ತಕ ಪುನರ್ ರಚನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದರು.

ಸೋದೆಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿ, ‘ಹಿಂದಿನ ಪಠ್ಯ ಪುಸ್ತಕದಲ್ಲಿ ಏನು ಹಾಗೂ ಯಾಕಾಗಿ ಬದಲಾವಣೆ ಮಾಡಲು ನೂತನ ಸಮಿತಿ ರಚನೆ ಎಂಬುದು ಹೇಳಿಲ್ಲ. ಸಚಿವರು, ಅಧಿಕಾರಿಗಳು ಯಾರೂ ಬದಲಾವಣೆ‌ ಕುರಿತು ನನ್ನನ್ನೂ ಈವರೆಗೂ ಕೇಳಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಪಠ್ಯ ಬದಲಾವಣೆಯ ತೀರ್ಮಾನ ಕೈಗೊಂಡಿದ್ದೂ ಸರಿಯಲ್ಲ. ಇದು ಮಕ್ಕಳ, ಪಾಲಕರಲ್ಲಿ ಗೊಂದಲ ಉಂಟಾಗಲು ಕಾರಣವಾಗುತ್ತದೆ ಎಂದರು.

ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯ ಸಮಿತಿ ರಚನೆ ಮಾಡಿದ ಪಠ್ಯ ಬದಲಾವಣೆ ಮಾಡುವಾಗ ನಾವು ಸಾರ್ವಜನಿಕವಾಗಿ ತಿಳಿಸಿದ್ದೆವು. ಕಾರಣವನ್ನೂ ಹೇಳಿದ್ದೆವು. ಈವರೆಗೆ ನನ್ನನ್ನು ಯಾರೂ ಈಗಿನ ಬದಲಾವಣೆ ಯಾಕಾಗಿ‌ ಎಂದು ಕೇಳಿಲ್ಲ. ನನ್ನ ಅಭಿಪ್ರಾಯ ಮಂಡಿಸಲು ಈಗಲೂ ಮುಕ್ತವಾಗಿದ್ದೇನೆ ಎಂದರು. ಪಠ್ಯ ಪುಸ್ತಕ ರಚನಾ ಸಮಿತಿ ಪರಿಷ್ಕರಣೆ ವಿಚಾರದಲ್ಲಿ ನಾಲ್ಕೈದು ಅಧ್ಯಕ್ಷರ ನೇಮಕಾತಿ ಆಗಿದೆ. ನಾನು ಹೇಳುವುದು ಏನೂ ಇಲ್ಲ. ಯಾವ ಕಾರಣಕ್ಕೆ?, ಯಾವುದು?, ಏನು? ಯಾಕೆ ಸೇರಿಸ್ತಾ ಇದ್ದಾರೆ ಗೊತ್ತಿಲ್ಲ ಎಂದು ಹೇಳಿದರು. ನಿರಂತರ ಮತ್ತು ಅವೈಜ್ಞಾನಿಕ ಪಠ್ಯಪುಸ್ತಕ ಪರಿಷ್ಕರಣೆಯಿಂದ ಗೊಂದಲ ಸೃಷ್ಟಿಯಾಗಿ ಪೋಷಕರು ಮತ್ತು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಪರಿಷ್ಕರಣೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಸಾಯಿಸುವ ಸಂಚು ನಡೆಯುತ್ತಿದೆ ಎಂದರು.

See also  ಏಷ್ಯನ್ ಗೇಮ್ಸ್ ನಿಂದ ಹಿಂದೆ ಸರಿದ ಕುಸ್ತಿಪಟು ವಿನೇಶ್ ಫೋಗಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು