News Karnataka Kannada
Friday, March 29 2024
Cricket
ಉತ್ತರಕನ್ನಡ

ಕಾರವಾರ: ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ ಜಪ್ತಿ, ಓರ್ವ ವಶಕ್ಕೆ

Karwar: Goa liquor illegally transported, one arrested
Photo Credit : News Kannada

ಕಾರವಾರ: ಜೊಯಿಡಾ ತಾಲೂಕಿನ ಅನಮೋಡ ಅಬಕಾರಿ ತನಿಖಾ ಠಾಣೆಯ ಮುಂಭಾಗದಲ್ಲಿ ಬುಲೆರೋ ಪಿಕ್ಅಪ್ ವಾಹನದಲ್ಲಿ ಸಾಗಿಸುತ್ತಿದ್ದ 19 ಲೀಟರ್ ಗೋವಾ ಮದ್ಯವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ದಾವಣಗೆರೆ ಜಿಲ್ಲೆಯ ಚಿಕ್ಕಕೊಗಲೂರು ನಿವಾಸಿ ಲಕ್ಷ್ಮೀಪತಿ ಆರ್. ಎಂಬುವನನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಮದ್ಯ ಹಾಗೂ ವಾಹನದ ಅಂದಾಜು ಮೌಲ್ಯ 8,33,440 ರೂ.ಗಳಾಗಿವೆ.

ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು ಹಾಗೂ ಉತ್ತರ ಕನ್ನಡ ಜಿಲ್ಲೆ ಅಬಕಾರಿ ಉಪ ಆಯುಕ್ತ ಜಗದೀಶ ಎನ್.ಕೆ. ಅವರ ನಿರ್ದೇಶನ ಮತ್ತು ಯಲ್ಲಾಪುರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಶಂಕರಗೌಡ ಪಾಟೀಲ ಮಾರ್ಗದರ್ಶನದಲ್ಲಿ ಈ ದಾಳಿ ನಡೆಸಲಾಗಿದೆ.

ಅಬಕಾರಿ ದಾಳಿಯಲ್ಲಿ ಅಬಕಾರಿ ಉಪನಿರೀಕ್ಷಕ ಬಿ. ಮಲ್ಲಣ್ಣವರ, ಪೇದೆಗಳಾದ ಎಸ್.ಬಿ.ಬನ್ಸೋಡೆ, ಎಸ್.ಡಿ.ರಾಠೋಡ, ಯು.ಎನ್.ತುಳಜಿ ಅಬಕಾರಿ ಪಾಲ್ಗೊಂಡಿದ್ದರು. ಅಬಕಾರಿ ಉಪನಿರೀಕ್ಷಕ ಟಿ.ಬಿ.ಮಲ್ಲಣ್ಣವರ ಗುರುವಾರವೇ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು, ಮೊದಲ ದಿನವೇ ಅಕ್ರಮ ಮದ್ಯ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು