News Karnataka Kannada
Friday, April 26 2024
ಉತ್ತರಕನ್ನಡ

ಕಾರವಾರ: ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್

The Congress has won four seats in the district.
Photo Credit : News Kannada

ಕಾರವಾರ: ವಿಧಾನಸಭೆ ಚುಣಾವಣೆಯಿಂದ ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗಿದೆ. ಜಿಲ್ಲೆಯಲ್ಲಿ ನಾಲ್ಕು ಕಾಂಗ್ರೆಸ್, ಎರಡು ಕ್ಷೇತ್ರವನ್ನು ಬಿಜೆಪಿ ಗೆಲ್ಲುವ ಮೂಲಕ ಈ ಸಲ ಬಿಜೆಪಿ ತನ್ನ ಮೂರು ಸ್ಥಾನವನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಹೆಚ್ಚುವರಿಯಾಗಿ ಮೂರು ಸ್ಥಾನ ತನ್ನಾಗಿಸಿಕೊಂಡಿದೆ.

ಶಿರಸಿಯಲ್ಲಿ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿದ್ದ ಸತತ ಆರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೋಲುಂಡಿದ್ದಾರೆ. ಇದೇವೇಳೆ ಸತತ ಸೋಲು ಅನುಭವಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಗೆಲುವಿನ ನಗೆ ಬೀರಿದ್ದಾರೆ. ಕಾರವಾರದಲ್ಲಿ ಸತೀಶ್ ಸೈಲ್, ಭಟ್ಕಳದಲ್ಲಿ ಮಂಕಾಳು ವೈದ್ಯ, ಶಿರಸಿಯಲ್ಲಿ ಭೀಮಣ್ಣ ನಾಯ್ಕ, ಹಳಿಯಾಳದಲ್ಲಿ ಆರ್. ವಿ. ದೇಶಪಾಂಡೆ (ಕಾಂಗ್ರೆಸ್) ಹಾಗೂ ಕುಮಟಾದಲ್ಲಿ ದಿನಕರ ಶೆಟ್ಟಿ, ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್ (ಬಿಜೆಪಿ) ಗೆಲುವು ಸಾಧಿಸಿದ್ದಾರೆ.

ವಿಧಾನಸಭಾ ಅಧ್ಯಕ್ಷರಾಗಿದ್ದ ಕಾಗೇರಿಯವರು ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಾರಿ 68175 ಮತಗಳನ್ನ ಪಡೆದಿದ್ದು, ಭೀಮಣ್ಣ ನಾಯ್ಕ (76887) ಮತಗಳನ್ನು ಪಡೆದು 8712 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಸತೀಶ ಸೈಲ್ಅವರು 76305 ಮತಗಳನ್ನು ಪಡೆದರೆ ಬಿಜೆಪಿಯ ರೂಪಾಲಿ ನಾಯ್ಕ ಅವರು 73890 ಮತಗಳನ್ನು ಪಡೆದು 2415 ಮತಗಳಿಂದ ಪರಾಭಗೊಂಡರು. ಜೆಡಿಎಸ್ ಅಭ್ಯರ್ಥಿ 2864 ಮತಗಳನ್ನು ಪಡೆದರು.

ಭಟ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ಅಭ್ಯರ್ಥಿ ಮಂಕಾಳ ವೈದ್ಯ ಅವರು ಬಿಜೆಪಿ ಶಾಸಕರಾಗಿದ್ದ ಸುನೀಲ ನಾಯ್ಕ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯ ಅವರು 99603 ಮತಗಳನ್ನು ಪಡೆದು 32657 ಮತಗಳಿಂದ ಭರ್ಜರಿ ಗೆಲವು ಸಾಧಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿ ಸುನೀಲ ನಾಯ್ಕ 66946 ಮತಗಳನ್ನು ಪಡೆದರು. ಕುಮಟಾ-ಹೊನ್ನಾವರ ಕ್ಷೇತ್ರದಲ್ಲಿ ಹಾವು-ಏಣಿ ಆಟದಲ್ಲಿ ಅಂತೂ ಇಂತೂ ಬಿಜೆಪಿಯ ದಿನಕರ ಶೆಟ್ಟಿ ಅವರು ಜೆಡಿಎಸ್ನ ಸೂರಜ ನಾಯ್ಕ ಸೋನಿ ವಿರುದ್ಧ ಪ್ರಯಾಸದ ಗೆಲುವು ಕಂಡಿದ್ದಾರೆ.

ಬಿಜೆಪಿಯ ದಿನಕ ಶೆಟ್ಟಿ 59966 ಮತಗಳನ್ನು ಪಡೆದು ಕೇವಲ 663 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಸೂರಜ ನಾಯ್ಕ ಸೋನಿ ಅವರು 59293 ಮತಗಳನ್ನು ಪಡೆದು ಸೋಲು ಅಭವಿಸಿದ್ದಾರೆ. ಕೊನೆಯ ಸುತ್ತಿನ ವರೆಗಗೂ ಮುನ್ನಡೆಯಲ್ಲಿದ್ದ ಸೋನಿ ಅವರು ಕೊನೆಯ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು. ಕಾಂಗ್ರೆಸ್ ಅಭ್ಯರ್ಥಿ ನಿವೇದಿತಾ ಆಳ್ವ ಅವರು 19272 ಮತಗಳನ್ನು ಪಡೆದು ನಿರಾಶಾದಾಯಕ ಪ್ರದರ್ಶನ ನೀಡಿದರು.

ಹಳಿಯಾಳ- ಜೊಯಿಡಾ- ದಾಂಡೇಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ 9ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಆದರೆ ಈ ಸಲ ಅವರು ಗೆಲುವು ಪ್ಯಾಸದ ಗೆಲುವು ಎಂದು ಹೇಳಬಹುದು. ಅನೇಕ ಸುತ್ತುಗಳಲ್ಲಿ ಹಿಂದುಳಿದಿದ್ದ ಅವರು ಹಾವು ಏಣಿಯಾಟದಲ್ಲಿ ಕೊನೆಯ ಕೆಲವು ಸುತ್ತುಗಳಲ್ಲಿ ಮುನ್ನಡೆ ಸಾಧಿಸಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 56912 ಮತಗಳನ್ನು ಪಡೆದು ದೇಶಪಾಂಡೆಯವರು 3584 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಸುನೀಲ್ ಹೆಗಡೆ 53328 ಮತಗಳನ್ನ ಪಡೆದರು.

ದೇಶಪಾಂಡೆಯವರು ಕೇವಲ ಒಂದು ಸಲ ಮಾತ್ರ ಸೋಲು ಕಂಡಿದ್ದಾರೆ. ಅದು ಸಹ ಸುನಿಲ ಹೆಗಡೆ ಅವರ ವಿರುದ್ಧ ಸೋಲು ಕಂಡಿದ್ದರು. ಯಲ್ಲಾಪುರ ಕ್ಷೇತ್ರದಲ್ಲಿ ಸಚಿವರಾಗಿದ್ದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ ಕಾಂಗ್ರೆಸ್ಅಭ್ಯರ್ಥಿ ವಿ. ಎಸ್. ಪಾಟೀಲ ವಿರುದ್ಧ 3759 ಮತಗಳಿಂದ ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ 73952 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ 70193 ಮತಗಳನ್ನು ಪಡೆದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು