News Kannada
Sunday, March 03 2024
ಉತ್ತರಕನ್ನಡ

ವಿವಿಧ ಯೋಜನೆಗೆ ಜಮೀನು ನೀಡಿದವರು ನಿರುದ್ಯೋಗಿಗಳಾಗಿದ್ದಾರೆ: ಸತೀಶ್ ಸೈಲ್

Those who have given land for various projects are unemployed: Satish Sail
Photo Credit : News Kannada

ಕಾರವಾರ: ಕಾರವಾರ-ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಸತೀಶ್ ಸೈಲ್ ಅವರು ಸೋಮವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದರು.

ಆರಂಭದಲ್ಲಿ ಕೋಡಿಭಾಗದ ಖಾಪ್ರಿ ದೇವಸ್ಥಾನದಲ್ಲಿ ಬಿ ಪಾರ್ಮ್ ಇಟ್ಟು ಪೂಜೆ ಸಲ್ಲಿಸಿ ಬಳಿಕ ಕುಟುಂಬಸ್ಥರು ಸೇರಿದಂತೆ ಸಾವಿರಾರು ಸಂಖ್ಯೆಯ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿದರು. ಅಲ್ಲದೆ ಮಾರ್ಗ ಮಧ್ಯದಲ್ಲಿ ಹೆಂಜಾ ನಾಯ್ಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ನಗರಸಭೆ ಆವರಣದಲ್ಲಿದ್ದ ಚುನಾವಣಾ ಕಚೇರಿಗೆ ಆಗಮಿಸಿದ ಅವರು ಪತ್ನಿ ಕಲ್ಪನಾ ಸತೀಶ್ ಸೈಲ್, ರಾಜು ತಾಂಡೇಲ್ ಸೇರಿದಂತೆ ಐವರು ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಶಾಸಕ ಸತೀಶ್ ಸೈಲ್ ರಾಜ್ಯದ ಗಡಿಭಾಗವಾದರೂ ಇಲ್ಲಿನ ಜನ ತಮ್ಮೆಲ್ಲ ಜಮೀನನ್ನು ವಿವಿಧ ಯೋಜನೆಗಳಿಗೆ ನೀಡಿದ್ದಾರೆ. ಆದರೆ ಯಾರೊಬ್ಬರಿಗೂ ಉದ್ಯೋಗ ಇಲ್ಲದಂತಾಗಿದೆ. ಬೆರೆ ಯಾವುದೋ ರಾಜ್ಯದಿಂದ ಉದ್ಯೋಗಿಗಳನ್ನು ತರಲಾಗುತ್ತಿದೆ. ಇದೇ ಕಾರಣಕ್ಕೆ ನಾವು ಉದ್ಯೋಗ ಸೃಷ್ಟಿಗೆ ಕೈಗಾರಿಕೆಗಳನ್ನು ತರಲು ಪ್ರಯತ್ನ ನಡೆಸುತ್ತೇನೆ ಎಂದರು.

ಜೊತೆಗೆ ಸೂಪರ್  ಸ್ಪೆಶಾಲಿಟಿ  ಆಸ್ಪತ್ರೆಗೆ ನನ್ನದೆ ಸ್ವಂತ ಜಾಗ ನೀಡುವುದಾಗಿ ತಿಳಿಸಿದ್ದರು ಸರ್ಕಾರ ಸ್ಥಾಪನೆಗೆ ಮುಂದಾಗಿಲ್ಲ. ಆದರೆ ಮುಂದೆ ಅದನ್ನು ಸ್ಥಾಪಿಸಲು ಸರ್ಕಾರ ಮಟ್ಟದಲ್ಲಿ ಪ್ರಯತ್ನ ನಡೆಸುತ್ತೇನೆ. ಜೊತೆಗೆ ನಮ್ಮ ಈ ಹಿಂದಿನ ಅವಧಿಯಲ್ಲಿನ ಅದೆಷ್ಟೊ ಬ್ರಿಜ್ ಅರೆಬರೆಯಾಗಿದ್ದು ಅದನ್ನು ಪೂರ್ಣಗೊಳಿಸುತ್ತೇನೆ. ಆದರೆ ಯಾವುದೇ ಸುಳ್ಳಿನ ಭರವಸೆ ನೀಡುವುದಿಲ್ಲ ಎಂದರು.

ಪರೇಶ್ ಮೇಸ್ತಾ ತಂದೆ ತಮಗೆ ಅನ್ಯಾಯ ಮಾಡಲಾಗಿದೆ ಎಂದು ಇದೀಗ ಹೇಳಿಲುತ್ತಿದ್ದಾರೆ. ತಮಗೆ ಯಾವುದೇ ಸಹಾಯ ಮಾಡದ ಕಾರಣ ಎಳೆನೀರು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಕಳೆದ ಬಾರಿ ಗೆಲುವಿಗೆ ಬಳಸಿಕೊಂಡವರು ಇದೀಗ ಕೈ ಬಿಟ್ಟಿದ್ದಾರೆ. ಈ ಹಿಂದೆ ಪಕ್ಷೇತರವಾಗಿ ಗೆದ್ದಾಗ ಎಷ್ಟು ಮತಗಳ ಅಂತರದ ಗೆಲುವು ದಾಖಲಿಸಿದ್ದೇನೋ ಅಷ್ಟೆ ಮತಗಳಿಂದ ಗೆಲುವು ದಾಖಲಿಸುವುದಾಗಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು