News Karnataka Kannada
Thursday, March 28 2024
Cricket
ಚಿಕಮಗಳೂರು

ಮದ್ಯದಂಗಡಿ ಧ್ವಂಸ ಮಾಡಿದ ಮಹಿಳೆಯರು

Photo Credit :

ಚಿಕ್ಕಮಗಳೂರು : ಮಹಿಳೆಯರ ಗುಂಪೊಂದು ಮದ್ಯದಂಗಡಿ ಧ್ವಂಸ ಮಾಡಿರುವ ಘಟನೆ ಜಿಲ್ಲೆಯ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ.

ಮಹಿಳೆಯರು ಮದ್ಯದಂಗಡಿಯ ಒಳಗೆ ನುಗ್ಗಿ ಪಿಠೋಪಕರಣಗಳನ್ನು ಧ್ವಂಸ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಎರಡು ಬಾರಿ ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವುದಕ್ಕೆ ಮಹಿಳೆಯರು ವಿರೋಧ ಮಾಡಿದ್ದರು.ಆದರೂ ಮದ್ಯದಂಗಡಿ ತೆರೆಯಲಾಗಿತ್ತು. ಹೀಗಾಗಿ ಸುತ್ತಮುತ್ತಲಿನ ಗ್ರಾಮಗಳ ಸುಮಾರು 50ಕ್ಕೂ ಅಧಿಕ ಮಹಿಳೆಯರು ಹಾಗೂ ಸ್ಥಳೀಯರು ಮದ್ಯದಂಗಡಿ ಬಂದ್ ಮಾಡಿಸಲು ನಿರ್ಧರಿಸಿದ್ದರು.

ಬಾರ್ ತೆರೆದರೆ ನಮ್ಮ ಕುಟುಂಬದ ಪುರುಷರು ಎಲ್ಲವನ್ನೂ ಮದ್ಯಕ್ಕೆ ಖರ್ಚು ಮಾಡುತ್ತಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು. ಮದ್ಯದಂಗಡಿಯನ್ನು ಮುಚ್ಚುವಂತೆ ಮಹಿಳೆಯರು ಒತ್ತಾಯಿಸಿದ್ದಾರೆ. ಆದರೆ, ಒಪ್ಪದಿದ್ದಾಗ ಮದ್ಯದಂಗಡಿ ಒಳಗೆ ನುಗ್ಗಿ ಪಿಠೋಪಕರಣ ಧ್ವಂಸ ಮಾಡಿದ್ದಾರೆ. ಗುಂಪು ಒಳಗೆ ನುಗ್ಗುವ ಮೊದಲು ಮದ್ಯದ ಬಾಟಲಿಗಳನ್ನು ಸ್ಥಳಾಂತರಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು