News Karnataka Kannada
Saturday, April 20 2024
Cricket
ಚಿಕಮಗಳೂರು

ರಸ್ತೆ ಮಧ್ಯೆ ಆಲ್ಟೋ ಕಾರು ಭಸ್ಮ– ವ್ಯಕ್ತಿ ಸಜೀವ ದಹನ

Fireincar Ckm Main 10072021
Photo Credit :

ಚಿಕ್ಕಮಗಳೂರು: ಅಲ್ಟೋ ಕಾರೊಂದು ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ಆಲ್ದೂರು ಸಮೀಪದ ವಸ್ತಾರೆ ಗ್ರಾಮದ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ.

ಆರೆನೂರು ಗ್ರಾಮದ ವಾಸಿ ರಘು ಮೃತರು. ಅವರು ಕಾಫಿ. ಟಿಂಬರ್ ವ್ಯಾಪಾರ ಮಾಡುತ್ತಿದ್ದರು.

ಚಿಕ್ಕಮಗಳೂರಿಗೆ ಹೋಗಿ ಆಲ್ದೂರಿಗೆ ಬರುವ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಘಟನೆ ಬಳಿಕ ರಸ್ತೆಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದ್ದು, ನಂತರ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಕಾರಿನಲಿದ್ದ ಮೃತದೇಹವನ್ನು ಹೊರತೆಗೆದು ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟರು.

ಸ್ಥಳಕ್ಕೆ ಆಲ್ದೂರು ಪಿಎಸ್ಐ ಶಿವರುದ್ರಮ್ಮ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು