ಚಿಕ್ಕಮಗಳೂರು: ಜೆಡಿಎಸ್‌ನ ಪಂಚರತ್ನ ಯೋಜನೆಗಳೇ ನಾಡಿನ ಸಮಸ್ತ ಜನತೆಯ ಭವಿಷ್ಯವನ್ನು ಉಜ್ವಲಗೊಳಿಸುವ ಮೂಲಕ ಸದೃಢ ರಾಜ್ಯ ನಿರ್ಮಾಣಕ್ಕೆ ಶಕ್ತಿಯಾಗಲಿದೆ ಎಂದು ಚಿಕ್ಕಮಗಳೂರು ವಿಧಾನಸಭಾ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಹೇಳಿದರು.
ತಾಲ್ಲೂಕಿನ ಹೀರೆಗೌಜ ಗ್ರಾ.ಪಂ. ವ್ಯಾಪ್ತಿಯ ಕರಿಸಿದ್ದನಹಳ್ಳಿ, ಕೆಂಗೆನಹಳ್ಳಿ, ಕುರಿ ಚಿಕ್ಕನಹಳ್ಳಿ ಗ್ರಾಮದ ಮನೆಗಳಿಗೆ ಮಂಗಳವಾರ ಸಂಜೆ ಭೇಟಿ ನೀಡಿ ಪಂಚರತ್ನ ಯೋಜನೆ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿ ಅವರು ಮಾತನಾಡುತ್ತಿದ್ದರು.
ಜೆಡಿಎಸ್‌ನ ಜನಪರ ಕಾರ್ಯಕ್ರಮಗಳು ಇಂದಿಗೂ ಗ್ರಾಮೀಣ ಪ್ರದೇಶದ ನಿವಾಸಿಗಳು ಮರೆತಿಲ್ಲ. ರೈತರಿಗಾಗಿ ವಿವಿಧ ಸೌಲಭ್ಯವನ್ನು ಒದಗಿಸಿ ದುರ್ಬಲರಾದವರಿಗೆ ಕೈಹಿಡಿಯುವ ಕೆಲಸವನ್ನು ಅಧಿಕಾರ ಹೊಂದಿ ದ್ದರೂ, ಇಲ್ಲದಿದ್ದರೂ ಹೆಚ್.ಡಿ.ಕೆ. ಮಾಡಿಕೊಂಡು ಬಂದಿದ್ದಾರೆ. ಆ ನಿಟ್ಟಿನಲ್ಲಿ ಜೆಡಿಎಸ್‌ಗೆ ಕ್ಷೇತ್ರದಲ್ಲಿ ಮತದಾ ರರು ಆರ್ಶೀವಾದ ಮಾಡಿ ಜಯಶಾಲಿಯನ್ನಾಗಿಸಬೇಕು ಎಂದು ಮನವಿ ಮಾಡಿದರು.
ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ವೃದ್ದರಿಗೆ ಸಾಕಷ್ಟು ಅಭಿವೃದ್ದಿ ಯೋಜನೆಗಳನ್ನು ಅನುಷ್ಟಾನಕ್ಕೆ ತಂದು ಮನೆಮಾತಾಗಿದ್ದರು. ಜೊತೆಗೆ ಗ್ರಾಮವಾಸ್ತವ್ಯ ಮಾಡುವ ಮೂಲಕ ರೈತರ ಸಮೀಪದಲ್ಲಿ ಇದ್ದುಕೊಂಡು ಅವರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲಾಗಿತ್ತು ಎಂದು ತಿಳಿಸಿದರು.
ಇಷ್ಟೆಲ್ಲಾ ಸೇವೆಗಳನ್ನು ಎಲ್ಲಾ ಸಂದರ್ಭದಲ್ಲೂ ನೀಡುವವರಿಗೆ ಜಿಲ್ಲೆ ಹಾಗೂ ರಾಜ್ಯದಲ್ಲಿ ಮತದಾರರು ಜೆಡಿಎಸ್‌ಗೆ ಪೂರ್ಣಪ್ರಮಾಣದ ಅಧಿಕಾರವನ್ನು ಒದಗಿಸಿದ್ದಲ್ಲಿ ಸರ್ವತೋಮುಖ ಬೆಳವಣಿಗೆಗೆ ಕಟಿಬದ್ದವಾಗಿ ದುಡಿಯುವ ಭರವಸೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಉಮೇಶ, ಜಯಣ್ಣ, ಚಿಕ್ಕೆಗೌಡ, ಪ್ರಕಾಶ್, ಲಕ್ಷ್ಮೀಶ, ಯುವ ಜನತಾದಳ ಮುಖಂಡರುಗಳು ಸಚಿನ್, ಅಜಿತ್, ಪ್ರಸನ್ನ ಹಾಗೂ ಗ್ರಾಮಸ್ಥರು ಬಾಗವಹಿಸಿದ್ದರು.