News Kannada
Sunday, October 01 2023
ಚಿಕಮಗಳೂರು

ಬಿಜೆಪಿ ಸೇರ್ಪಡೆಗೊಂಡವರನ್ನು ಪಕ್ಷಕ್ಕೆ ಬರಮಾಡಿಕೊಂಡ ಸಿ.ಟಿ.ರವಿ

We have no reason to criticise our opponents when it comes to development issues: CT Ravi
Photo Credit : News Kannada

ಚಿಕ್ಕಮಗಳೂರು: ಅಭಿವೃದ್ಧಿ ವಿಷಯದಲ್ಲಿ ಚರ್ಚೆಗೆ ಬಂದರೆ ನಮ್ಮ ವಿರೋಧಿಗಳಗೆ ಟೀಕೆ ಮಾಡಲು ವಸ್ತುಗಳೇ ಇಲ್ಲ. ಅಧಿಕಾರವನ್ನು ಅಭಿವೃದ್ಧಿಗೆ ಸಾಧನ ಎಂದು ಭಾವಿಸಿದ್ದೇವೆ. ದುರುಪ ಯೋಗ ಪಡಿಸಿಕೊಂಡು ಯಾರಿ ಗೂ ತೊಂದರೆ ಕೊಡುವ ಕೆಲಸ ವನ್ನು ನಾವು ಮಾಡಿಲ್ಲ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡವರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

ಬಿಜೆಪಿ ಸೈದ್ಧಾಂತಿಕವಾಗಿರುವ ಆಂಧೋಲನ, ಅದು ಜಾತಿ ಕೇಂದ್ರಿತವಲ್ಲ, ಹಿಂದುತ್ವದ ತತ್ವವನ್ನು ಪ್ರತಿಪಾದಿಸುವಂತಹದ್ದು, ಅಭಿವೃದ್ಧಿಗೆ ಆಧ್ಯತೆ ಕೊಡುವಂತಹದ್ದು, ೨೦ ವರ್ಷದ ಹಿಂದಿನ ಚಿಕ್ಕಮಗಳೂರಿಗೂ ಇಂದಿನ ಚಿಕ್ಕಮಗಳೂರಿಗೂ ಎಷ್ಟು ಬದಲಾವಣೆ ಆಗಿದೆ ಎನ್ನುವುದು ಎಲ್ಲರ ಅನುಭವಕ್ಕೆ ಬರುತ್ತದೆ. ಸಾವಿ ರಾರು ಕೋಟಿ ರೂ. ಅನುದಾನ ತಂದು ಕೆಲಸ ಮಾಡಿದ್ದೇವೆ ಎಂದರು.

ರಸ್ತೆಗಳ ಅಭಿವೃದ್ಧಿ, ಮೆಡಿಕಲ್ ಕಾಲೇಜು, ಕೆರೆ ತುಂಬಿಸುವ ಯೋಜನೆ, ಸಮುದಾಯ ಭವನ ಗಳು, ದೇವಸ್ಥಾನಗಳ ನಿರ್ಮಾಣ, ದುರಸ್ಥಿ, ಬಸವನಹಳ್ಳಿ, ಕೋಟೆ ಕೆರೆ ಅಭಿವೃದ್ಧಿ, ಜಲ್ಲಾಧಿಕಾರಿ ಕಚೇರಿ ಸಂಕೀರ್ಣ, ಸಂಗೊಳ್ಳಿ ರಾಯಣ್ಣ ಪ್ರತಿ ಸ್ಥಾಪನೆ, ಹೀಗೆ ದಶ ದಿಕ್ಕುಗಳಲ್ಲೂ ಅಭಿವೃದ್ಧಿ ಆಗುತ್ತಿದೆ. ಇದಲ್ಲದೆ ಇನ್ನೊಬ್ಬರಿಗೆ ತೊಂದರೆ ಕೊಡದೇ ಇರುವ ನಮ್ಮ ನಡವಳಿಕೆ, ಎಲ್ಲರನ್ನೂ ನಮ್ಮವನೆಂದು ಪರಿಗಣಿಸಿ, ಎಲ್ಲರನ್ನೂ ಜೊತೆಗೆ ಕರೆದೊಯ್ಯುವ, ಜಾತಿ ಬೇಧಕ್ಕೆ ಜಾಗ ಕೊಡದಿರುವುದು ನಮ್ಮ ನಡವಳಿಕೆ, ಕ್ರಿಯಹಾಶೀಲv ಹಾಗೂ, ಚಟುವಟಿಕೆ ವಿಚಾರದಲ್ಲಿ ನಮ್ಮ ಹತ್ತಿರಕ್ಕೂ ಬರಲು ವಿರೋಧಿಗಳಿಗೆ ಸಾಧ್ಯವಿಲ್ಲ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ, ಬಿಜೆಪಿ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವ ತತ್ವದಡಿ ಕೆಲಸ ಮಾಡುತ್ತಿದೆ. ಬಿಜೆಪಿ ಅಸ್ಥಿತ್ವಕ್ಕೆ ಬಂದಾಗಿನಿಂದ ಈ ವರೆಗೆ ಈ ನಿಲುವಿನಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ ಕಟಿಬದ್ಧವಾಗಿ ಕೆಲಸ ಮಾಡುತ್ತಿರುವ ಪಕ್ಷ ಎಂದರು.

ರಾಷ್ಟ್ರೀಯತೆ ವಿದಾರದಲ್ಲಿ ಬಿಜೆಪಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಅಲ್ಲದೆ ತತ್ವ ಸಿದ್ಧಾಂತಕ್ಕೂ ಬದ್ಧ, ಅಭಿವೃದ್ಧಿಗೂ ಬದ್ಧರಾದವರು ಶಾಸಕ ಸಿ.ಟಿ.ರವಿ ಅವರು, ಪಕ್ಕದ ಹಾಸನ, ಶಿವಮೊಗ್ಗ ಜಿಲ್ಲೆಗಳು ಅಭಿವೃದ್ಧಿ ಹೊಂದಿದ ಜಿಲ್ಲೆಗಳಾಗಿವೆ. ಅಲ್ಲಿ ಪ್ರಭಾವಿ ನಾಯಕತ್ವ ಇರುವುದೇ ಕಾರಣ. ಆ ಸಾಲಿನಲ್ಲಿ ಈಗ ಪ್ರಭಾವಿ ರಾಜಕಾರಣಿಯಾಗಿ ನಮ್ಮ ಶಾಸಕ ಸಿ.ಟಿ.ರವಿ ಅವರು ಹೊರಹೊಮ್ಮಿದ್ದಾರೆ ಎಂದರು.

ಸಿ.ಟಿ.ರವಿ ಅವರು ಇರುವು ದರಿಂದಲೇ ಇಂದು ಕೆರೆಗಳನ್ನು ತುಂಬಿಸುವ ಕಾಮಗಾರಿ ನಡೆಯು ತ್ತಿದೆ. ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹಲವಾರು ಅಭಿವೃದ್ಧಿ ಕೆಲಸಗಳಾಗುತ್ತಿವೆ. ಜೊತೆಗೆ ಸರ್ವ ಧರ್ಮ ಸಮಭಾವ ಎನ್ನುವುದನ್ನು ಅವರು ಕೇವಲ ಮಾತಿಗಷ್ಟೇ ಅಲ್ಲ ಆಚರಣೆಯಲ್ಲಿ ತೋರಿಸಿದ್ದಾರೆ ಎಂದರು.

ರವಿ, ನಾಗೇಶ್, ಗುಂಡಣ್ಣ, ದಿನೇಶ್ ಹರೀಶ್, ಮರಿಸ್ವಾಮಿ ಸೇರಿದಂತೆ ಇತರರು ಬಿಜೆಪಿ ಸೇರ್ಪಡೆಗೊಂಡರು. ಬಿಜೆಪಿ ನಗರಾಧ್ಯಕ್ಷ ಮಧುಕುಮಾರ ರಾಜ್ ಅರಸ್, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾಜಿ ಜಿ.ಪಂ.ಸದಸ್ಯ ಹಿರಗಯ್ಯ, ತಾ.ಪಂ. ಮಾಜಿ ಅಧ್ಯಕ್ಷರುಗಳಾದ ಕನಕರಾಜ್ ಅರಸ್, ನೆಟ್ಟೆಕೆರೆಹಳ್ಳಿ ಜಯಣ್ಣ, ಮುಖಂಡರುಗಳಾದ ಕೋಟೆ ರಂಗನಾಥ್ ಇತರರು ಇದ್ದರು.

See also  ಮೈಸೂರು: ಮೈಸೂರಿನಲ್ಲಿ ಪ್ಲಾಸ್ಟಿಕ್ ನಿಷೇಧ ಜಾಗೃತಿ ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು