News Kannada
Wednesday, October 04 2023
ಚಿಕಮಗಳೂರು

ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಆರ್ಥಿಕತೆ ಬಲಿಷ್ಠವಾಗಿ ಮುನ್ನಡೆಯುತ್ತಿದೆ- ಜೆ.ಪಿ.ನಡ್ಡಾ

India's economy is moving strong under the leadership of Narendra Modi: JP Nadda
Photo Credit : News Kannada

ಚಿಕ್ಕಮಗಳೂರು: ಇಡೀ ವಿಶ್ವ ಆರ್ಥಿಕ ಸಂಕಷ್ಠ ಎದುರಿಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಮ್ಮ ಆರ್ಥಿಕತೆ ಬಲಿಷ್ಠವಾಗಿ ಮುನ್ನಡೆಯುತ್ತಿದೆ. ಭಾರತ ಇಂದು ಬೇಡುವ ದೇಶವಲ್ಲ ಕೊಡುವ ದೇಶವಾಗಿ ಮಾರ್ಪಾಡಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಹೇಳಿದರು.

ಅವರು ಇಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ವೃತ್ತಿಪರರು ಹಾಗೂ ಚಿಂತಕರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ ೯ ವರ್ಷದಲ್ಲಿ ದೇಶದ ಆರ್ಥಿಕ ಹಾಗೂ ಸಮಾಜಿಕ ಚಿತ್ರಣ ಬದಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬರುವ ಮುಂಚೆ ದೇಶದ ಆರ್ಥಿಕ ನೀತಿಗಳು ಪಾರ್ಶ್ವವಾಯುವಿನಿಂದ ಪೀಡಿತವಾಗಿದ್ದವು. ಅತೀ ಹೆಚ್ಚು ಭ್ರಷ್ಟಾಚಾರದ ದೇಶ ಎನಿಸಿತ್ತು. ಭಾರತೀಯರು ಮತ್ತೊಬ್ಬರ ಅನುಕರಣೆ ಮಾಡುವವರು, ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶ ಸುರಕ್ಷಿತವಾಗಿಲ್ಲ ಎನ್ನುವ ಭಾವನೆಗಳಿದ್ದವು. ೯ ವರ್ಷ ಗಳಿಂದ ಈಚೆಗೆ ದೇಶ ಅಂತರಾ ಷ್ಟ್ರೀಯ ಮಟ್ಟದಲ್ಲಿ ಸುರಕ್ಷತೆ ಹೊಂದಿದೆ. ಪ್ರಧಾನ ಮೋದಿ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತಿರುವ ನಿರ್ಣಾಯಕ ರಾಜಕೀಯ ನೀತಿಗಳು ವಿಶ್ವ ಮಾನ್ಯತೆಗಳಿಸಿವೆ. ಭ್ರಷ್ಠಾಚಾರ ಮುಕ್ತ ಬಲಿಷ್ಠ ನಾಯಕತ್ವದಲ್ಲಿ ದೇಶ ಮುನ್ನಡೆಯುತ್ತಿದೆ ಎಂದರು.

ಕೊರೋನಾ ಪರಿಣಾಮ ಹಾಗೂ ಉಕ್ರೇನ್ ಯುದ್ಧದಂತಹ ಸನ್ನಿವೇಶಗಳಿಂದಾಗಿ ವಿಶ್ವದ ಆರ್ಥಿಕತೆ ತೊಂದರೆಯಲ್ಲಿದೆ. ಆದರೆ ಇದೆಲ್ಲದರ ಹೊರತಾಗಿ ಮೋದಿ ನೇತೃತ್ವದಲ್ಲಿ ಭಾರತ ಆರ್ಥಿಕವಾಗಿ ಬಲಿಷ್ಠ ರೀತಿಯಲ್ಲಿ ಮುನ್ನಡೆಯುತ್ತಿರುವುದು ಸಂತೋಷದ ವಿಚಾರ ಎಂದರು.

ಇದು ಮಾತಿಗಾಗಿ ಹೇಳುತ್ತಿರುವ ವಿಚಾರವಲ್ಲ. ಭಾರತದ ಜಿಡಿಪಿ ಬೆಳವಣಿಗೆ ಇಂದು ಶೇ.೭.೪ ರಲ್ಲಿ ನಿಂತಿದೆ. ಇದೇ ವೇಳೆ ಅಮೇರಿಕಾ ಶೇ.೨.೩ ರಲ್ಲಿ ನಿಂತಿದೆ. ಚೈನಾ ಶೇ.೩.೩ ರಲ್ಲಿ ನಿಂತಿದೆ. ಅಂದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತಲೂ ಭಾರತ ಆರ್ಥಿಕತೆಯಲ್ಲಿ ಮುನ್ನಡೆ ಸಾಧಿಸುತ್ತಿದೆ ಎಂದರು.

ಈಗ ಬಡತನ ರೇಖೆಗಿಂತ ಕಡಿಮೆ ಇರುವವ ಸಂಖ್ಯೆ ಭಾರತದಲ್ಲಿ ಶೇ೧ಕ್ಕಿಂತ ಕಡಿಮೆ ಆಗಿದೆ. ಅಂದರೆ ದೇಶದಲ್ಲಿ ಯಾರೂ ಹಸಿದುಕೊಂಡು ಮಲಗುವುದಿಲ್ಲ. ಇದು ಭಾರತವನ್ನು ಬಲಿಷ್ಠಗೊಳಿಸಿದೆ ಎಂದು ತಿಳಿಸಿದರು.

ಕೊರೋನಾ ಸಂದರ್ಭದಲ್ಲೂ ನಮ್ಮ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಸ್ಥಗಿತವಾಗಲಿಲ್ಲ. ರೈಲು ಯೋಜನೆಗಳು, ರೈಲ್ವೆ ವಿದ್ಯುದೀಕರಣ ಕಾರ್ಯಗಳು, ವಿಮಾನ ನಿಲ್ದಾಣಗಳ ನಿರ್ಮಾಣ ಕಾರ್ಯಗಳು ಸ್ಥಗಿತಗೊ ಳ್ಳಲಿಲ್ಲ. ಇದೆಲ್ಲವೂ ಮುಂದುವರಿದರೆ ನಮ್ಮ ಬಡ ಜನರಿಗೆ ಉದ್ಯೋಗ ಲಭಿಸುತ್ತದೆ ಹಾಗೂ ಭಾರತದ ಆರ್ಥಿಕ ವ್ಯವಸ್ಥೆ ವೇಗಗತಿಯಲ್ಲಿ ಸಾಗುತ್ತದೆ ಎನ್ನುವುದು ಪ್ರಧಾನಿ ಮೋದಿ ಅವರ ಆಲೋಚನೆಯಾಗಿತ್ತು. ಇದರ ಪರಿಣಾಮ ಬ್ಯಾಂಕ್ ಠೇವಣಿ ದರ ಶೇ.೧೮ ರಷ್ಟು ವೃದ್ಧಿಯಾಗಿದ್ದನ್ನು ಗಮನಿಸಬೇಕು ಎಂದರು.

ಕೊರೋನಾ ಲಸಿಕೆ ಹಾಕುವಲ್ಲಿ ಅಮೇರಿಕಾದ ಸಾಧನೆ ಶೇ.೭೬, ಯೂ ರೋಪ್ ಸಾಧನೆ ಶೇ.೬೯ ಆದರೆ ನಾವಾರೂ ಇಂದು ಮಾಸ್ಕ್ ಧರಿಸದೆ ಎಲ್ಲರೂ ಒಟ್ಟಿಗೆ ಸೇರಲು ಸಾಧ್ಯ ವಾಗಿದ್ದು ಮೋದಿ ಅವರು ದೇಶದ ೧೩೦ ಕೋಟಿ ಜನರಿಗೆ ಉಚಿತ ಲಸಿಕೆ ನೀಡಿದ್ದು ಕಾರಣವಾಗಿದೆ ಎಂದರು.

See also  ಮೀಸಲು ಕ್ಷೇತ್ರ ಮೂಡಿಗೆರೆಯಲ್ಲಿ ಈ ಭಾರಿ ಟಿಕೆಟ್ ಹಂಚಿಕೆಗೆ ಪೈಪೋಟಿ

ಇಂದು ಅಮೇರಿಕಾದಲ್ಲಿ ಕೋ ವಿಡ್ ಸರ್ಟಿಫೀಕೇಟ್ ಕಾಗದದಲ್ಲಿ ಕೊಡಲಾಗುತ್ತಿದೆ. ಆದರೆ ಭಾರತದಲ್ಲಿ ಲಸಿಕೆ ಹಾಕಿಸಿಕೊಂಡ ೧೫ ನಿಮಿಷದಲ್ಲಿ ನಿಮ್ಮ ಮೊಬೈಲ್‌ನಲ್ಲಿ ನಿಮ್ಮ ಸರ್ಟಿಫಿಕೇಟ್ ಲಭಿಸುತ್ತದೆ. ಇದು ಡಿಜಿಟಲ್ ಭಾರತ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ನಮ್ಮದೇ ದೇಶದಲ್ಲಿ ಫಲ್ಸ್ ಪೋಲಿಯೋವನ್ನು ರಾಷ್ಟ್ರೀಯ ಕಾರ್ಯಕ್ರಮವಾಗಿಸಲು ೨೮ ವರ್ಷ ಗಳು ಬೇಕಾದವು. ಇದಲ್ಲದೆ ಟಿಬಿ ಇನ್ನಿತರೆ ಮಾರಕ ರೋಗಗಳಿಗೆ ಲಸಿಕೆ ಕಂಡು ಹಿಡಿಯಲು ೨೦ ರಿಂದ ೩೦ ವರ್ಷಗಳು ಹಿಡಿದವು. ಆದರೆ ಕೊರೋನಾ ೨೦೨೦ರ ಜನವರಿ ಯಲ್ಲಿ ಭಾರತಕ್ಕೆ ಕಾಲಿಟ್ಟಿತು. ಅದೇ ವರ್ಷ ಏಪ್ರಿಲ್ ನಲ್ಲಿ ಪ್ರಧಾನಿಗಳು ಕೊ ರೋನಾ ಟಾಸ್ಕ್‌ಫೋರ್ಸ್ ರಚಿಸಿದರು. ಅದಾದ ಕೇವಲ ೯ ತಿಂಗಳಲ್ಲಿ ಒಂದಲ್ಲ, ಎರಡು ರೀತಿಯ ಲಸಿಕೆಗಳನ್ನು ಸಂಶೋಧಿಸಲಾಯಿತು. ಇಂದು ೧೦೦ ದೇಶಗಳಿಗೆ ಕೊರೋನಾ ಲಸಿಕೆ ಪೂರೈಸಿದ್ದೇವೆ. ಅದರಲ್ಲಿ ೪೮ ರಾಷ್ಟ್ರಗಳಿಗೆ ಉಚಿತವಾಗಿ ಪೂರೈಸಲಾಗಿದೆ ಇದು ಇಂದಿನ ಭಾರತ ಎಂದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರ ಣ್ ಸಿಂಗ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರು ಡಪ್ಪ, ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಸದಸ್ಯ ನವೀನ್, ಶಾಸಕರುಗಳಾದ ಡಿ.ಎಸ್. ಸುರೇಶ್, ಬೆಳ್ಳಿ ಪ್ರಕಾಶ್, ಎಂ.ಪಿ. ಕುಮಾರ ಸ್ವಾಮಿ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಗಿರೀಶ್ ಪಟೇಲ್, ಚನ್ನಬಸಪ್ಪ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು