News Kannada
Friday, March 31 2023

ಚಿಕಮಗಳೂರು

ಚಿಕ್ಕಮಗಳೂರು: ನಿಗದಿತ ಗುರಿ ಸಾಧಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ವಿ.ಸೋಮಣ್ಣ

Chikkamagaluru: Minister V Somanna lashes out at officials for not achieving the target
Photo Credit : News Kannada

ಚಿಕ್ಕಮಗಳೂರು,: ವಿವಿಧ ವಸತಿ ಯೋಜನೆಗಳಡಿ ಯಲ್ಲಿ ನಿಗಧಿತ ಗುರಿ ಸಾಧಿಸದಿರುವ ಅಧಿಕಾರಿಗಳನ್ನು ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಖಾತೆ ಸಚಿವ ವಿ.ಸೋಮಣ್ಣ ಅವರು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ವಿವಿಧ ವಸತಿ ಯೋಜನೆಗಳ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಒಂದು ಹಂತದಲ್ಲಿ ಅಧಿಕಾರಿಗಳನ್ನು ಗೌಡ, ಪರಶು, ಬಿಳಿ ಗಿರಿ ಎಂದು ಏಕವಚನದಲ್ಲೇ ಸಂಬೋಧಿಸಿ ಚಳಿ ಬಿಡಿಸಿದರು.

ಉಳಿದಿರುವುದು ಇನ್ನು ಮೂರೇ ತಿಂಗಳು ಈ ಅವಧಿಯಲ್ಲಿ ವಸತಿ ಯೋಜನೆ ಪೂರ್ಣಗೊಳಿಸಬೇಕಿದೆ. ಯೋಜನೆ ಮುಗಿಸಲು ಎಷ್ಟು ಹಣ ಬೇಕು ಅದನ್ನು ಬಿಡುಗಡೆ ಮಾಡಲು ಸಿದ್ದ. ಅಧಿಕಾರಿಗಳು ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರೆ ಕಾಲಮಿತಿಯೊಳಗೆ ಗುರಿ ಸಾಧಿಸಲು ಸಾಧ್ಯವಿದೆ ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಕೊಳಚೆ ನಿರ್ಮೂಲನಾ ಮಂಡಳಿ ಯಿಂದ ನಗರಕ್ಕೆ ೮೦೦ ಮನೆ ಮಂ ಜೂರಾಗಿವೆ. ಅದರಲ್ಲಿ ೧೨೦ ಮನೆ ಕೆಲಸ ಮಾತ್ರ ಪ್ರಾರಂಭಿಸಲಾಗಿದೆ, ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ೧೫೧೧ ಜಿ ಪ್ಲಸ್ ೨ ಮನೆಗಳ ನಿರ್ಮಾಣಕ್ಕೆ ಟೆಂಡರ್ ಆಗಿದೆ. ಇದರಲ್ಲಿ ೬೦೦ ಮನೆಗಳನ್ನು ೨೦೨೨ ಕ್ಕೆ, ಉಳಿಕೆ ಮನೆಗಳನ್ನು ೨೦೨೪ ಕ್ಕೆ ಮುಗಿಸ ಬೇಕಿರುವ ಕರಾರಿದೆ. ಆದರೆ, ಈವರೆಗೆ ಶೇ.೨೫ ರಷ್ಟು ಮನೆ ಪೂರ್ಣಗೊಂಡಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

ಜೊತೆಗೆ ಡೊಂಗ್ರಿ ಗರೇಶಿಯಾ ಸಮುದಾಯದ ೬೯ ಮನೆಗಳು ಮಂಜೂರಾಗಿದ್ದರೂ ಇನ್ನೂ ಕಾಮಗಾರಿಯೇ ಆರಂಭವಾಗಿಲ್ಲ. ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರನ್ನು ಬಿ ವರ್ಗದಿಂದ ಸಿ ವರ್ಗಕ್ಕೆ ಸೇರಿಸಲಾಗಿದೆ ಇದನ್ನು ಸರಿಪಡಿಸಬೇಕು. ಅಜ್ಜನಹಟ್ಟಿ ನಿವೇಶನ ರಹಿತರ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದ ಅವರು ಇಲ್ಲಿ ಗುತ್ತಿಗೆದಾರರೆ ಸಮಸ್ಯೆಯಾಗಿದ್ದಾರೆ ಇದಕ್ಕೆ ಒಂದು ಆದೇಶ ಮಾಡಿ ಎಂದರು.

ಸಮಸ್ಯೆಗಳನ್ನು ಆಲಿಸಿದ ಸಚಿವ ಸೋಮಣ್ಣ ಅವರು ಸಂಬಂಧಿಸಿದ ಅಧಿಕಾರಿಗಳನ್ನು ಏಕವಚನದಲ್ಲೇ ಕರೆದು ಇಷ್ಟು ದಿನ ಕತ್ತೆ ಮೇಯಿಸುತ್ತಿದ್ದೀರೇನ್ರಿ ಎಂದು ಪ್ರಶ್ನಿಸಿದರು. ಅಧಿಕಾರಿಗಳ ಸಮಜಾಯಿಷಿ ಒಪ್ಪದ ಸಚಿವರು ಗುತ್ತಿಗೆದಾರ ಶ್ರೀಕಾಂತ್ ಬಂಡಿ ಅವರನ್ನು ಎಲ್ಲಿದ್ದರೂ ಕರೆ ದುಕೊಂಡು ನಾಳೆಯೇ ಬೆಂಗಳೂರಿಗೆ ಬರಬೇಕು ಎಂದು ತಾಕೀತು ಮಾಡಿದರು.

ರಾಜ್ಯದಲ್ಲಿ ೧ ಲಕ್ಷ ನಿವೇಶನ ಹಂಚಿಕೆಮಾಡಿದೇವೆ. ಮೂರು ವಸತಿ ಯೋಜನೆಗಳನ್ನು ಒಂದೇ ಸೂರಿನಡಿ ಸೇರಿಸಿ ಆಸರೆ ಎಂದು ನಾಮಕರಣ ಮಾಡಿದ್ದೇವೆ. ಗ್ರಾಮೀಣ ಭಾಗದಲಿದ್ದ್ಲ ೩೭ ಸಾವಿರ ಆದಾಯ ಮಿತಿಯನ್ನು ೧.೨೦ ಲಕ್ಷಕ್ಕೆ, ನಗರದಲ್ಲಿ ೩ ಲಕ್ಷಕ್ಕೆ ಹೆಚಿಸಿದ್ದೇವೆ ಎಂದು ಸರಕಾರದ ಸಾಧನೆ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ೨೦ ವರ್ಷದಲ್ಲಿ ಒಂದೇ ಒಂದು ನಿವೇಶನ ನೀಡಿಲ್ಲ. ಸರಕಾರಿ ಜಾಗವೆಲ್ಲ ಡೀಮ್ಡ್ ಆಗಿದೆ. ೪/೧ ನೊಟಿಫಿಕೇಶನ್ ಆಗಿದೆ ಬಡವರಿಗೆ ನಿವೇಶನ ನೀಡಲು ಜಾಗವೇ ಇಲ್ಲ ಎಂದಾಗ ಶೃಂಗೇರಿ ತಾ.ಪಂ. ಅಧ್ಯಕ್ಷರು ಇದಕ್ಕೆ ದನಿಗೂಡಿಸಿದರು. ಎಕರೆಗೆ ೨೫ ಲಕ್ಷದಂತೆ ಭೂಮಿ ಖರೀದಿ ಮಾಡಲು ೪ ಕೋಟಿ ಅನುದಾನ ಬಿಡುಗಡೆ ಮಾಡುತ್ತೇನೆ. ಭೂಮಿ ಎಲ್ಲಿದೆ ಹುಡುಕಿ ಎಂದು ಸಚಿವರು ಹೇಳಿದರು.

See also  ನಾಗರಹೊಳೆಯಲ್ಲಿ ಬುಡಕಟ್ಟು ಯುವಕನ ಮೇಲೆ ಹುಲಿ ದಾಳಿ

ಜಿ.ಪಂ. ಸಿಇಒ ಜಿ.ಪ್ರಭು ಮಾತನಾಡಿ ಜಿಲ್ಲೆಯಲ್ಲಿ ನಿವೇಶನ ನೀಡಲು ೧೦೯ ಎಕರೆ ಲಭ್ಯವಿದೆ. ಅದರಲ್ಲಿ ೭೯ ಎಕರೆ ಅಭಿವೃದ್ಧಿಪಡಿಸಲಾಗಿದೆ ಎಂದರು. ಶಾಸಕ ಬೆಳ್ಳಿ ಪ್ರಕಾಶ್, ಎಡಿಸಿ ಬಿ.ಆರ್.ರೂಪ ಮತ್ತಿತರೆ ಅಧಿಕಾರಿಗಳು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು