News Kannada
Sunday, April 02 2023

ಚಿಕಮಗಳೂರು

ಚಿಕ್ಕಮಗಳೂರು: ಬಡವರು-ರೈತರ ಬದುಕು ಹಸನಾಗಲು ಜೆಡಿಎಸ್ ಅಧಿಕಾರಕ್ಕೆ ತನ್ನಿ- ಹೆಚ್.ಡಿ.ಕೆ

JD(S) should come to power to make the lives of the poor and farmers easier, says HDK
Photo Credit : News Kannada

ಚಿಕ್ಕಮಗಳೂರು: ೨೦೨೩ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದರೆ ಬಡವರ, ರೈತರ ಬದುಕನ್ನು ಹಸನುಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಕುಮಾರಸ್ವಾಮಿ ಅವರನ್ನು ನಗರದ ಎಐಟಿ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರು ಸ್ವಾಗತಿಸಿದ್ದು ಹನುಮಂತಪ್ಪ ವೃತ್ತದ ಬಳಿ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ತೆರೆದ ವಾಹನದಲ್ಲಿ ನಗರದ ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್‌ವರೆಗೆ ಕರೆದೊಯ್ಯಲಾಯಿತು.

ನಗರದ ಆಜಾದ್‌ಪಾರ್ಕ್‌ನಲ್ಲಿ ಮಾತನಾಡಿದ ಅವರು ಕಳೆದ ೭೪ ದಿನಗಳಿಂದ ಪಂಚರತ್ನ ರಥಯಾತ್ರೆಯು ರಾಜ್ಯಾದ್ಯಂತ ಸಂಚರಿಸುತ್ತಿದ್ದು ದಿನದ ೧೬ ಗಂಟೆಗಳ ಕಾಲ ಇದಕ್ಕಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ರಾಜ್ಯ ಪ್ರತಿ ಕುಟುಂಬಗಳ ಆಶೀರ್ವಾದ ಪಡೆದು ಬಡವರ, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುವುದ ಕ್ಕಾಗಿಯೇ ಪಂಚರತ್ನ ಯಾತ್ರೆ ಕೈಗೊಳ್ಳಲಾಗಿದೆ ಎಂದರು.
ಪಂಚರತ್ನ ಯಾತ್ರೆ ಕೈಗೊಳ್ಳಲು ಯಾವುದೇ ಬುದ್ದಿಜೀವಿಗಳು ನೀಡಿದ ಸಲಹೆ ಅಲ್ಲ, ಪ್ರತಿದಿನ ರಾಜ್ಯದ ಮೂಲೆ ಮೂಲೆಗಳಿಂದ ಬಡವರ್ಗದವರು ಸಮಸ್ಯೆಗಳನ್ನು ಹೇಳಿಕೊ ಂಡು ಬರುತ್ತಾರೆ. ಅದರ ಅನುಭವದ ಮೇಲೆ ಈ ರಥಯಾತ್ರೆ ಕೈಗೊಳ್ಳಲಾ ಗಿದೆ ಎಂದರು.

ಕಿಡ್ನಿ, ಹೃದಯ ಸಂಬಂದಿ ಕಾಯಿಲೆ, ಕ್ಯಾನ್ಸರ್ ಪೀಡಿತರು ವಿದ್ಯಾ ಭ್ಯಾಸಕ್ಕಾಗಿ ನೆರವಿಗಾಗಿ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ನಮ್ಮ ಬಳಿ ಬರುತ್ತಾರೆ. ಒಬ್ಬ ವ್ಯಕ್ತಿಯಿಂದ ಸಹಾಯ ಮಾಡಲು ಸಾಧ್ಯವಾಗು ವುದಿಲ್ಲ. ಈ ಸಮಸ್ಯೆಗಳನ್ನು ಪರಿಹರಿ ಸಲು ೫ ವರ್ಷಗಳ ಕಾಲ ನಮಗೆ ಅಧಿಕಾರ ನೀಡಿದರೆ, ಬಡಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ೧ ರಿಂದ ೧೨ನೇ ತರಗತಿಯವರೆಗೆ ಇಂಗ್ಲೀಷ್ ವಿದ್ಯಾಭ್ಯಾಸವನ್ನು ಉಚಿತವಾಗಿ ದೊರಕಿಸಿಕೊಡಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೩೦ ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿ ಗುಣಮಟ್ಟದ ಚಿಕಿತ್ಸೆ ದೊರಕಿಸಿಕೊಡಲಾಗುವುದು ಎಂದರು.

೩೫ರಿಂದ ೪೦ ಲಕ್ಷದ ವರೆಗೆ ಖರ್ಚಾಗುವ ಕಾಯಿಲೆಗಳಿಗೆ ಸರಕಾ ರದ ವತಿಯಿಂದಲೇ ಹಣದೊರಕಿಸಿ ಕೊಡಲಾಗುವುದು. ರೈತರ ರಸಗೊ ಬ್ಬರ ಬೆಲೆ ಕಡಿತಗೊಳಿಸಲಾಗುವುದು. ಬಿಜೆಪಿ ಸರಕಾರ ಅಡಿಕೆಯನ್ನು ಭೂ ತಾನ್ ನಿಂದ ಆಮದು ಮಾಡಿಕೊ ಳ್ಳಲು ಪ್ರಯತ್ನಿಸುತ್ತಿದೆ. ಇದರಿಂದ ನಮ್ಮ ರೈತರಿಗೆ ಬಹಳಷ್ಟು ತೊಂದರೆ ಯಾಗಲಿದೆ. ರೈತರುಗಳು ಎಚ್ಚರಿಗೆ ವಹಿಸಬೇಕಿದೆ. ಭೂಮಿ ಇಲ್ಲದವರಿಗೆ ಭೂಮಿ, ಯುವಕರಿಗೆ ತರಬೇತಿ ನೀಡಿ ೧೦ ಲಕ್ಷದ ವರೆಗೆ ಸಾಲ ನೀಡಿ ಸ್ವಂತ ಉದ್ಯೋಗ ಕಲ್ಪಿಸಿಕೊಡಲಾ ಗುವುದು. ೫ ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದರು.

೬೫ ವರ್ಷದವರಿಗೆ ಪ್ರತಿ ತಿಂಗಳು ೫ ಸಾವಿರ ಮಾಸಾಶಾನ ನೀಡಲಾ ಗುವುದು. ವಿದವೆಯರಿಗೆ ಮದುವೆ ಯಾಗದ ಮಹಿಳೆಯರಿಗೆ ಪ್ರತಿ ತಿಂಗಳು ಎರಡೂವರೆ ಸಾವಿರ ಮಾ ಸಶಾನ ನೀಡಲಾಗುವುದು, ಬಂಜಾರ ಸಮಾಜದವರು ತೊಡುವ ಉಡುಗೆ ಗಳನ್ನು ತಯಾರಿಕೆಗೆ ಆದ್ಯತೆ ನೀಡಲಾಗುವುದು. ಸವಿತಾ ಸಮಾಜ, ವಿಶ್ವಕರ್ಮ, ಮಡಿವಾಳ, ಮುಂತಾದ ಸಣ್ಣ ಸಣ್ಣ ಸಮುದಾಯಗಳ ಅಭಿ ವೃದ್ದಿಯ ಬದುಕಿಗೆ ಶ್ರಮಿಸಲಾಗುವುದು. ಇದಕ್ಕಾಗಿ ೨.೫ ಲಕ್ಷ ಕೋಟಿ ರೂಗಳ ಬಂಡವಾಳ ಶೇಖರಣೆಯ ಗುರಿ ಹೊಂದಲಾಗುವುದು ಎಂದರು.

See also  ಚಿಕ್ಕಮಗಳೂರು: ಹಬ್ಬದ ಸಡಗರಕ್ಕೆ ಕಾರಣವಾದ ಕಂದಾಯ ಸಚಿವರ ಗ್ರಾಮವಾಸ್ತವ್ಯ

ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಸ್.ಎಲ್. ಭೋಜೇಗೌಡರಿಗೆ ಮಂತ್ರಿ ಸ್ಥಾನ ನೀಡಲಾಗುವುದು. ಧರ್ಮೇಗೌಡರ ಪುತ್ರ ಸೋನಾಲ್ ಗೌಡರನ್ನು ರಾಜ ಕಾರಣದಲ್ಲಿ ಮೇಲೆತ್ತುವ ಕಾರ್ಯ ಮಾಡಲಾಗುವುದು. ಇದರಿಂದಾಗಿ ಮಾಜಿ ಶಾಸಕರಾಗಿದ್ದ ಎಸ್.ಆರ್. ಲಕ್ಷ್ಮಯ್ಯ, ಧರ್ಮೇಗೌಡರಿಗೆ ನೀಡಿರುವ ಮಾತನ್ನು ತಾವುಗಳು ಉಳಿಸಿ ಕೊಂಡಂತಾಗಲಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ, ಜೆಡಿಎಸ್ ಅಭ್ಯರ್ಥಿ ತಿಮ್ಮಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್ ಮತ್ತಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು