News Kannada
Tuesday, May 30 2023
ಚಿಕಮಗಳೂರು

ಸೆರೆಮನೆಯ ಖೈದಿಗಳಿಂದ ಮೂಡಿ ಬಂದಿರುವ ಸುಂದರ ಉದ್ಯಾನವನ

A beautiful park created by prison inmates
Photo Credit : News Kannada

ಚಿಕ್ಕಮಗಳೂರು: ಜೈಲುಗಳೆಂದರೆ ಶಿಕ್ಷೆ ಅನುಭವಿಸುವ ಸ್ಥಳವೆಂಬ ಭಾವನೆ ಜನಸಾಮಾನ್ಯ ದಾಗಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ರತ್ನಗಿರಿಬೋರೆ ಸಮೀಪದಲ್ಲಿರುವ ಜಿಲ್ಲಾಕಾರಾಗೃಹಕ್ಕೆ ಆಧುನಿಕ ಸ್ಪರ್ಶ ದೊರೆತಿದ್ದು, ಕಾರಾಗೃಹ ವಾಸಿಗಳ ಮನಪರಿವರ್ತಿಸುವ ಸುಂದರತಾಣವಾಗಿ ಹೊರಹೊಮ್ಮಿದೆ.

ಕಾರಾಗೃಹದೊಳಗೆ ಕಾಲಿಟ್ಟೊಡನೆ ಸೆರೆಮನೆ ಎಂಬ ಭಾವನೆ ದೂರವಾಗಿ ಎಲ್ಲೋ ನಗರ ಅಥವಾ ದೊಡ್ಡ ಪಟ್ಟಣದಲ್ಲಿರುವ ಹೊಸ ಉದ್ಯಾನವನಕ್ಕೊ ಅಥವಾ ಗಿರಿಶ್ರೇಣಿಯಲ್ಲಿ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಿರುವ ಭಾವನೆ ಮೂಡಲಿದೆ.

ಸೆರೆಮನೆಯ ಖಾಲಿ ಜಾಗದಲ್ಲಿ ಗಿರಿಶಿಖರ ನಿರ್ಮಾಣಗೊಂಡಿದೆ. ಬೆಟ್ಟದ ಮೇಲೆ ದೇವಾಲಯವಿದೆ. ಕೆಳಗಿನಿಂದ ಮೇಲೆ ಪುಟಿದೇಳುವ ಕಾರಂಜಿ ಇದೆ. ವಿವಿಧ ಬಣ್ಣಗಳ ಹೂವುಗಳು ಅರಳಿನಿಂತಿದೆ. ಶಿಕ್ಷಣವೇ ಶಕ್ತಿ, ಅರಿವೆ ಗುರು ಎನ್ನುವ ಶಾಲೆಯೊಂದು ತಲೆ ಎತ್ತಿದೆ. ಗ್ರಾಮೀಣ ಸೊಗಡನ್ನು ಬಿಂಬಿಸಲಾಗಿದೆ. ತಾಯಿ, ಮಗುವಿನ ಪ್ರೀತಿಯನ್ನು ತೋರಿಸಲಾಗಿದೆ.

ಕಾರಾಗೃಹದೊಳಗೆ ಕಾಲಿಟ್ಟರೆ ಮೊಬೈಲನ್ನು ನಿಗದಿತ ಸ್ಥಳದಲ್ಲಿಡಬೇಕಾಗುತ್ತದೆ. ಖೈದಿಗಳಿಗೆ ತಂದಿರುವ ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಆಧುನಿಕ ತಂತ್ರಜ್ಞಾನದಿಂದ ಪರಿಶೀಲನೆ ಮಾಡಲಾಗುತ್ತದೆ. ಅವುಗಳೆಲ್ಲ ಪೂರ್ತಿ ಯಾಗಿ ಸ್ಕ್ಯಾನ್‌ಆದ ಮೇಲೆ ಜೈಲಿನ ಆವರಣ ಸಾಗುವ ಮಾರ್ಗದರ್ಶಿ ಕವಿಗಳು, ದಾರ್ಶನಿಕರ ಹೇಳಿರುವ ಮನಪರಿವರ್ತನೆ, ನೀತಿಬೋಧನೆ, ಸುಂದರ ಬದುಕುರೂಪಿಸುವ,ಕಟ್ಟಿಕೊಳ್ಳುವಂತಹ ಬರಹಗಳು ಕಂಡುಬರುತ್ತವೆ.

ಜಿಲ್ಲಾಕಾರಾಗೃಹ ಅಧೀಕ್ಷಕರ ಕಚೇರಿ, ಸೂಪರಿಡೆಂಟ್ ಕಚೇರಿ ಸಿಗುತ್ತದೆ. ಈ ಕಚೇರಿಯ ಹೊರಾಂಡವನ್ನು ನೋಡಿದವರಿಗೆ ಕಾರಾಗೃಹ ಸಂಪೂರ್ಣವಾಗಿ ಬದಲಾವಣೆಗೊಂಡಿರುವುದು ತಕ್ಷಣ ತಿಳಿಯುತ್ತದೆ. ವಿವಿಧಜಾತಿಯ ಹೂವುಗಳ ಅರಳಿನಿಂತು ಗಾಳಿಬೀಸಿದೊಡನೆ ತಲೆದೂಗುವ ಮೂಲಕ ಜೈಲಿಗೆ ಬಂದವರಿಗೆ ಸ್ವಾಗತಕೋರುತ್ತವೆ. ಸಸ್ಯರಾಶಿಗಳಿವೆ.
ಕಾರಾಗೃಹದ ಖಾಲಿ ಜಾಗದಲ್ಲಿ ಉದ್ಯಾನವನ ನಿರ್ಮಾಣಗೊಂಡಿದೆ. ಬಾವಿ, ಕಾರಂಜಿನಿರ್ಮಾಣವಾಗಿದೆ. ಇಲ್ಲಿರುವ ಸುಂದರ ಪರಿಸರ ಕಣ್ತುಂಬಿಕೊಳ್ಳಲು ಅರಾಮವಾಗಿ ಕುಳಿತುಕೊಳ್ಳಲು ಬೆಂಚ್ಹಾಕಲಾಗಿದೆ.

ಹಳೇ ಫ್ಯಾನನ್ನು ಎತ್ತರದ ಕಂಬಕ್ಕೆ ಕಟ್ಟಿದ್ದು, ಗಾಳಿಬಂದಾಗ ತಿರುಗುತ್ತದೆ. ಗಾಳಿಯಂತ್ರದ ಅಣಕು ಪ್ರದರ್ಶನಗೊಂಡಿದೆ. ಇದರಿಂದ ವಿದ್ಯುತ್ ತಯಾರಿಸಬಹುದೆಂಬತಿಳುವಳಿಕೆಯನ್ನು ನೀಡಿದಂತಾಗಿದೆ.

ಈ ಕಾರಾಗೃಹದಲ್ಲಿ ಹಳ್ಳಿಯ ಜನಜೀವನದ ದರ್ಶನ ಮಾಡಿಸಲಾಗಿದೆ. ಹುಲ್ಲಿನ ಮನೆ ನಿರ್ಮಾಣಗೊಂಡಿದೆ. ಮಹಿಳೆಯೋರ್ವರು ಮನೆಯ ಮುಂದೆ ಮರದಲ್ಲಿ ವಸ್ತುಗಳನ್ನು ವಪ್ಪಮಾಡುತ್ತಿದ್ದರೆ, ಮನೆಯೊಡಯ ಹೆಗಲ ಮೇಲೆ ನೇಗಿಲುಹೊತ್ತು ಹೊಲಗದ್ದೆ ಊಳಲು ತೆರಳುತ್ತಿರುವುದು, ಕೋಳಿಯೊಂದು ಮೇವಿಗೆ ಹುಡುಕುತ್ತಿರುವುದು, ಪಕ್ಕದಲ್ಲೇ ಶಾಲೆ ಶಿಕ್ಷಣವೇ ಶಕ್ತಿ, ಅರಿವೇ ಗುರು ನಾಮಫಕಹೊಂದಿರುವ ಶಾಲೆಯೊಂದು ತಲೆಎತ್ತಿದೆ. ಸಹೋದರ ನೊಬ್ಬ ಸಹೋದರಿಯನ್ನು ಕೈಹಿಡಿದು ಶಾಲೆಗೆ ಕರೆದೊಯ್ಯುತ್ತಿರುವುದನ್ನು ಕಾಣಬಹುದು.

ಮಹಿಳಾ ಕಾರಾಗೃಹದ ಮುಂಭಾಗದಲ್ಲಿ ಕೊಳದಲ್ಲಿ ಈಜಾಡಲು ಬಾತುಕೋಳಿರೆಡಿಯಾಗಿದ್ರೆ ಮತ್ತೊಂದಡೆ ಮಹಿಳೆಯೊಬ್ಬರು ಕೊಡದಲ್ಲಿ ನೀರುಮೊಗೆದು ಸೊಂಟಕ್ಕೆ ಎತ್ತಿಕೊಳ್ಳುತ್ತಿರುವುದು, ತಾಯಿಬಂದಾಗ ಹಸಿವನ್ನು ನೀಗಿಸಿಕೊಳ್ಳಲು ಕರುವೊಂದು ಹುಸುವಿನ ಹೆಚ್ಚಲಿಗೆ ಬಾಗಿಹಾಕಿ ಹಾಲುಕುಡಿಯುವ ದೃಶ್ಯ ನಿರ್ಮಾಣ ಗೊಂಡಿದ್ದು, ತಾಯಿಮಗುವಿನ ಸಂಬಂಧವನ್ನು ಸೂಚ್ಯವಾಗಿ ತಿಳಿಸಿಕೊಡಲಾಗಿದೆ.

ಅಡುಗೆ ಮನೆಮುಂಭಾಗದಲ್ಲಿ ಮತ್ತೊಂದು ಉದ್ಯಾನವಿದ್ದು ಕೊಳದ ಮೇಲೆ ಆದಿಶೇಷನನ್ನು ನಿರ್ಮಿಸಿದ್ದು, ಹೆಡೆಯ ಕೆಳಗಡೆ ಕೃಷ್ಣಕೊಳಲನೂದುತ್ತಿರುವುದು, ಅದರ ಪಕ್ಕದಲ್ಲಿ ನವಿಲು, ಹಂಸವೂ ಇದೆ. ಕೊಳೆ ದಂಡೆಯ ಮೇಲೆ ಉದ್ದನೆಯ ಕೊಳಲಿನ ಮಾದರಿ ಇಡಲಾಗಿದೆ. ಅಲಂಕಾರಿಕಾ ಕಾಫಿಬೊಡ್ಡೆಗಳು ಉದ್ಯಾನದ ಅಂದಹೆಚ್ಚಿಸಿವೆ. ಝುಳುಝಳು ನೀನಾದದೊಂದಿಗೆ ಹರಿಯುವ ಜಲಪಾತದ ಸ್ವಲ್ಪ ದೂರದಲ್ಲಿ ತಾಯಿಮಗುವಿಗೆ ಕಾಲುಣಿಸು ತ್ತಿರುವುದನ್ನು ನೋಡಬಹುದಾಗಿದೆ.

See also  ಭುವನೇಶ್ವರ: ಒಡಿಸ್ಸಾದಲ್ಲಿ ಪರಿವರ್ತನೆಯ ಹೊಸ ಯುಗ ಆರಂಭವಾಗಿದೆ ಎಂದ ಸಿಎಂ

ಇನ್ನೊಂದೆಡೆ ಘರ್ಜಿಸುವ ವ್ಯಾರ್ಘನನ್ನು ಕಾಣಬಹುದು. ಕನ್ನಡ ನಕ್ಷೆ ಅದರ ಮುಂದೆ ಭುವನೇಶ್ವರಿಯ ಚಿತ್ರವಿದೆ. ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ, ಮಾಣಿಕ್ಯಾಧಾರ, ದೇವಿರಮ್ಮನಬೆಟ್ಟ, ಹೆಬ್ಬೆಜಲಪಾತವನ್ನೇ ಸೃಷಿ ಮಾಡಿದ್ದಾರೆ.

ಜೈಲಿನಲ್ಲಿರುವ ನಿರುಪಯುಕ್ತ ವಸ್ತುಗಳನ್ನು ಬಳಸಿ ಈ ಸುಂದರ ಉದ್ಯಾನ ನಿರ್ಮಾಣಗೊಂಡಿದೆ. ಇವುಗಳನ್ನೆಲ ನಿರ್ಮಾಣಕ್ಕೆ ಹೊರಗಿನಿಂದ ಯಾರನ್ನೂ ಕರೆಸಿಲ್ಲ ಇಲ್ಲಿರುವ ಕಾರಾಗೃಹವಾಸಿಗಳ ಕೌಶಲವನ್ನು ಬಳಸಿಕೊಳ್ಳಲಾಗಿದೆ.

ಈ ಕಾರಾ ಗೃಹದಲ್ಲಿ ೩೦೦ಕ್ಕೂ ಹೆಚ್ಚು ಖೈದಿಗಳು ಇದ್ದು ಅಧೀಕ್ಷಕ ಶ್ರೀಶೈಲಾ ಎಸ್.ಮೇಟಿಯವರು ಉತ್ತಮ ರೀತಿಯಲ್ಲಿ ನಿರ್ವಹಣೆ ಜೊತೆಗೆ ಮತ್ತಷ್ಟು ಆಕರ್ಷಕ ರೂಪ ಕೊಡುತ್ತಿದ್ದಾರೆ. ಒಟ್ಟಾರೆಯಾಗಿ ಕಾರಾಗೃಹ ಮನಪರಿ ವರ್ತನೆಯಾಗುವ ತಾಣವಾಗಿದೆ. ಖೈದಿಗಳನ್ನು ಭೇಟಿಗೆ ಬರುವ ಜನರು ಇಲ್ಲಿನ ವಾತಾವರಣವನ್ನು ನೋಡಿ ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು