ಚಿಕ್ಕಮಗಳೂರು: ರಾಜ್ಯ ಸರಕಾರ ರೆಟ್ರೋ ರೆಫ್ಲೆಕ್ಟಿವ್ ಟ್ಯಾಪ್ ಅಂಡ್ ರಿಯರ್ ಮಾರ್ಕಿಂ ಗ್ ಪ್ಲೇಟ್ ಅಳವಡಿಕೆ ಮಾಡಬೇಕೆಂದು ಕೇಂದ್ರ ಮೋಟಾರು ವಾಹನ ಗಳ ನಿಯಮದಡಿ ಆದೇಶ ಹೊರ ಡಿಸಿದ್ದರಿಂದ ಬಡ ಸಾರಿಗೆ ವಾಹನ ಚಾಲಕರು ಸಂಕಷ್ಟಕ್ಕೆ ಸಿಲುಕಿಸುವಂತಾಗಿದೆ. ಈ ಹೊಸ ಯೋಜನೆ ಜಾರಿ ಯನ್ನು ಸರಕಾರ ಕೂಡಲೇ ರದ್ದುಪಡಿ ಸಬೇಕೆಂದು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಅಮರ್‌ನಾಥ್ ಒತ್ತಾಯಿಸಿದರು.
ಅವರು ಇಂದು ಪಟ್ಟಣದಲ್ಲಿ ಸಾರಿಗೆ ವಾಹನಗಳ ಒಕ್ಕೂಟದ ವತಿಯಿಂದ ಕ್ಯೂಆರ್ ಕೋಡ್ ರಿಫ್ಲೆ ಕ್ಟರ್ ಅಳವಡಿಕೆ ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಸರಕಾರಕ್ಕೆ ೪೦ ಸಾವಿರ ಕೋಟಿ ಹೊರೆಯಾಗುತ್ತಿದೆ. ಅದಕ್ಕಾಗಿ ಕ್ಯೊ ಆರ್ ಕೋಡ್ ಪ್ಲೇಟ್ ಅಳವಡಿಕೆಗಾಗಿ ಈ ಹೊಸ ನಿಯಮ ಜಾರಿ ಮಾ ಡಲು ಹೊರಟಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದು ಸಾರಿಗೆ ವಾಹನ ಚಾಲಕರ ಮೇಲೆ ಹೊರೆಯಾಗುವುದಿಲ್ಲವೇ ಎಂಬು ದನ್ನು ಸರಕಾರ ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ? ಕ್ಯೂಆರ್ ಕೋಡ್ ಅಳವಡಿಕೆಯ ಉಪಯೋಗ ವಾಗರೂ ಏನೆಂಬುದನ್ನು ಸರಕಾರ ವಿವಿರಣೆ ಕೊಡಬೇಕು. ಇದು ಅವೈಜ್ಞಾನಿಕ ನಿಯಮ. ಕ್ಯೊಆರ್ ಕೋಡ್ ಪ್ಲೇಟ್ ಅಳವಡಿಕೆಗೆ ಕನಿಷ್ಟ ೨೦೦ ರೂ ತಗುಲುತ್ತದೆ. ಸಣ್ಣ ವಾಹನಕ್ಕೆ ಕನಿಷ್ಟ ೨.ಸಾವಿರ, ದೊಡ್ಡ ವಾಹನಕ್ಕೆ ಕನಿಷ್ಟ ೯ಸಾವಿರ ರೂ ಯಾಕೆ ಬೇಕು? ಈ ಬಗ್ಗೆ ಸಾರಿಗೆ ಸಚಿವರು ಹಾಗೂ ಅಧಿಕಾರಿಗಳೊಂ ದಿಗೆ ನಾವು ಬಹಿರಂಗ ಚರ್ಚೆಗೆ ಸಿದ್ದವಿದ್ದೇವೆ ಎಂದು ಸವಾಲು ಹಾಕಿದ ಅವರು, ಇದೊಂದು ಹಣ ಮಾಡುವ ಹಗಲು ದರೋಡೆ ಎಂದು ದೂರಿದರು.
ಕರ್ನಾಟಕ ಟ್ಯಾಕ್ಸಿ ಡ್ರೈವರ್‍ಸ್ ಆರ್ಗನೈಜೇಷನ್ ಜಿಲ್ಲಾಧ್ಯಕ್ಷ ಪ್ರಕಾಶ್ ಮಾತನಾಡಿ, ಕೋವಿಡ್ ಸಂಕಷ್ಟ ಎದುರಿಸಿ ಈಗ ಸಾಮಾನ್ಯ ಸ್ಥಿತಿಗೆ ತಲುಪುತ್ತಿರುವ ಸಾರಿಗೆ ವಾಹನ ಮಾಲೀಕರು ಈಗ ಸರಕಾರದ ಹೊಸ ನೀತಿಯಿಂದ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಸಾರಿಗೆ ವಾಹನಗಳ ಯೋಗ್ಯತಾ ಪತ್ರ ನವೀಕರಣ ಹಾಗೂ ವಾಹನಗಳ ಪರಿವೀಕ್ಷಣೆಗೆ ಶುಲ್ಕ ಪಾವತಿಸಿದರೆ ಸಾಕಿತ್ತು. ವಾಹನ ಸ್ಥಿತಿ ಗತಿ ನೋಡಿ ಯೋಗ್ಯತಾ ಪತ್ರ ನೀಡಲಾಗುತ್ತಿತ್ತು. ಆದರೆ ಈಗ ಹೊಸ ನೀತಿಯಿಂದ ದುಪ್ಪಟ್ಟು ಹಣ ನೀಡಿ ಯೋಗ್ಯತಾ ಪತ್ರ ನವೀಕರಣಕ್ಕೆ ಕ್ಯೂಆರ್‌ಕೋಡ್ ಪ್ಲೇಟ್ ಅಳವಡಿಸ ಬೇಕಾಗಿದೆ. ಇಂತಹ ಅವೈಜ್ಞಾನಿಕ ನಿಯಮ ಕೂಡಲೇ ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಕೆಟಿಡಿಒ ಕಾರ್ಯಕಾರಿ ಮಂಡಳಿ ಸದಸ್ಯ ಸುರೇಶ್, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ನಾಗೇಶ್, ನಗರ ಅಧ್ಯಕ್ಷ ಮಹಮ್ಮದ್ ಹನೀಫ್, ಸ್ವಾಭಿಮಾನಿ ಸಂಘದ ಅಧ್ಯಕ್ಷ ಗಿರೀಶ್, ಲಾರಿ ಚಾಲಕರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಅಶೋಕ್, ಕಾರ್ಯದರ್ಶಿ ಆಶಿಕ್, ಪಿಕಪ್ ಸ್ಟಾಂಡ್ ಉಪಾಧ್ಯಕ್ಷ ಹರಿಯಣ್ಣ, ಜೈಭಾರತ್ ಗೂಡ್ಸ್ ಆಟೋ ಸಂಘದ ಅಧ್ಯಕ್ಷ ರವಿ, ಕಾಫಿನಾಡು ಟ್ಯಾಕ್ಸಿ ಸಂಘದ ಅಧ್ಯಕ್ಷ ದಿನೇಶ್ ಇದ್ದರು.