ಚಿಕ್ಕಮಗಳೂರು: ಜಾತಿ ನೋಡಿ ಕೆಲಸ ಮಾಡುವವನು ನಾನಲ್ಲ. ಪಕ್ಷ ಬೇಧ, ಹಾಗೂ ಜಾತಿ ಬೇದವಾಗಿ ಅಭಿವೃದ್ಧಿ ಕೆಲಸ ಮಾಡಿದವರಿಗೆ ಮತದಾರರು ಮನ್ನಣೆ ನೀಡಬೇಕೆಂದು ಶಾಸಕ ಸಿ.ಟಿ.ರವಿ ಮನವಿ ಮಾಡಿದರು.
ಅವರು ಟಿಪ್ಪು ನಗರದ ವಾರ್ಡ್‌ಗೆ ೯೦ ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ ಚಿಕ್ಕಮಗಳೂರು ನಗರದ ಅಭಿವೃದ್ಧಿಗಾಗಿ ೭೦ ಕೋಟಿ ವಿಶೇಷ ಅನುದಾನವನ್ನು ತಂದು ನಗರದ ಎಲ್ಲಾ ವಾರ್ಡ್‌ಗಳಲ್ಲಿಯೂ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದ್ದು, ತೇಗೂರು ರಸ್ತೆಬಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ೬೩೦ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಮೊದಲನೇ ಕಾಮಗಾರಿಯ ಉದ್ಘಾಟನೆಯನ್ನು ಮೇ ತಿಂಗಳಿನಲ್ಲಿ ನೆರೆವೇರಿಸಲಾಗುವುದು, ಕಡೂರು, ಚಿಕ್ಕಮಗಳೂರು ರಸ್ತೆ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಚಿಕ್ಕಮಗಳೂರು, ಬೇಲೂರು, ಹಾಸನ ಚತುಸ್ಪದ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೇ ಪ್ರಾರಂಭವಾಗಿದೆ . ಚಿಕ್ಕಮಗಳೂರಿನಿಂದ ಹಾಸನ ರೈಲ್ವೆ ಯೋಜನೆ ಕಾಮಗಾರಿ ಪ್ರಾರಂಭದ ಹಂತದಲ್ಲಿದೆ ಎಂದರು.
ಮೂರು ಹೆಲಿಕ್ಯಾಫ್ಟರ್‌ಗಳು ಏಕ ಕಾಲದಲ್ಲಿ ನಿಲ್ದಾಣವಾಗುವ ೭೫ ಕೋಟಿ ರೂ ವೆಚ್ಚದಲ್ಲಿ ಲಘು ವಿಮಾನ ನಿಲ್ದಾಣ ಜಿಲ್ಲೆಗೆ ಮಂಜೂರು ಮಾಡಲಾಗಿದೆ, ನೂತನ ವಿಶ್ವ ವಿದ್ಯಾಲಯ ಮತ್ತು ಟೆಕ್ಸ್ ಟೈಲ್ ಪಾರ್ಕ್ ನಿಮಾಣ ಮಾಡಲಾ ಗುವುದು ಇದರಿಂದ ಜಿಲ್ಲೆಯ ಅನೇಕ ಜನರಿಗೆ ಉದ್ಯೋಗ ಸಿಗುತ್ತದೆ, ಸ್ಲಮ್ ಬೋರ್ಡ್‌ನಿಂದ ಈಗಾಗಲೆ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ ಅಭಿವೃದ್ಧಿಯಲ್ಲಿ ಮುನ್ನಡೆಯನ್ನು ಸಾಧಿಸಿರುವ ಶಾಸಕ ಸಿ.ಟಿ.ರವಿ ರವರು ಮುಂದಿನ ಮುಖ್ಯ ಮಂತ್ರಿಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಇದ್ದಾರೆ, ಯಾವುದೇ ಬೇಧ-ಭಾವ ತೊರದೆ ನಗರದ ೩೫ ವಾರ್ಡ್‌ಗಳಿಗು ವಿವಿಧ ಕಾಮಗಾರಿಗಳಿಗೆ ಅನುದಾನವನ್ನು ನೀಡಿದ್ದಾರೆ, ಟಿಪ್ಪು ನಗರದ ವಾರ್ಡ್‌ಗಳಿಗೆ ೯೦ ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಇಂದು ಚಾಲನೆಯನ್ನು ನೀಡಲಾಗಿದೆ, ಸಾರ್ವಜನಿಕರಿಗೆ ಅನುಕೂಲ ಆಗುವಂತೆ ನಗರದ ೪ ಮುಖ್ಯ ರಸ್ತೆಗಳಾದ ರಾಮನಹಳ್ಳಿ, ಕಡೂರು, ಬೇಲೂರು ಮತ್ತು ಮೂಗ್ತಿಹಳ್ಳಿ ರಸ್ತೆ ನಾಲ್ಕು ಪಥದ ರಸ್ತೆಯನ್ನಾಗಿಸಿ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ವೆಂಕಟೇಶ್, ನಗರಸಭೆ ಸದಸ್ಯರಾದ ಜಾವಿದ್, ಸುಜಾತಶಿವಕುಮಾರ್, ಮಾಜಿ ಅಧ್ಯಕ್ಷ ಮುತ್ತಯ್ಯ, ನರಸಿಂಹ, ಉಪಾಧ್ಯಕ್ಷ ಅಬ್ಸರ್ ಅಹಮದ್, ಶಂಕರ್ ಮತ್ತಿತರರು ಹಾಜರಿದ್ದರು.