ಚಿಕ್ಕಮಗಳೂರು: ಭಾರತೀಯ ಜನತಾ ಪಾರ್ಟಿ ಯಲ್ಲಿ ಲಿಂಗಾಯಿತ ವೀರಶೈವ ಸಮಾಜದವರಿಗೆ ಪ್ರಾಮುಖ್ಯತೆ ಕೊಟ್ಟಿಲ್ಲಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಹುಟ್ಟಿಸುತ್ತಿರುವುದು ಸತ್ಯಕ್ಕೆ ದೂರವಾದುದು ಎಂದು ಜಿಲ್ಲಾ ಸಹಕಾರ ಬ್ಯಾಂಕ್‌ನ ನಿರ್ದೇಶಕ ಎಂಎಸ್.ನಿರಂಜನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು ಸಾಮಾಜಿಕ ಜಾಲ ತಾಣದಲ್ಲಿ ವಿಕೃತ ಮನಸ್ಸಿನ ಕೆಲವರು ಸುಳ್ಳು ಸುದ್ಧಿ ಹರಿಬಿಟ್ಟಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಕಿರುವಂತಹ ಪತ್ರಿಕೆಯ ತುಣುಕು ಯಾವ ಪತ್ರಿಕೆಯದು, ಯಾವ ದಿನಾಂಕದಂದು ಆ ಪತ್ರಿಕೆಯಲ್ಲಿ ಹೇಳಿಕೆ ಕೊಟ್ಟಿದ್ದಾರೆಂದು ಯಾವುದೇ ಮಾಹಿತಿ ಇರುವುದಿಲ್ಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಹಾಗು ಪಕ್ಷದ ಮುಖಂಡರು ಸೈಬರ್ ಕ್ರೈಮ್ ವೃತ್ತ ನೀರಿಕ್ಷಕರಿಗೆ ದೂರು ನೀಡಿದ್ದಾರೆ ಎಂದರು.
ಶಾಸಕ ಸಿ.ಟಿ.ರವಿ ನಾಲ್ಕು ಬಾರಿ ಶಾಸಕರಾಗಿ ಎಲ್ಲಾ ಜನಾಂಗದವ ರನ್ನು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಲದೇ, ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜಕಾರಣ ಮಾಡುತ್ತಿರುತ್ತಾರೆ. ಹಾಗೂ ಕ್ಷೇತ್ರದಲ್ಲಿ ಎಲ್ಲಾ ಜನಾಂಗದವರಿಗೂ ಚುನಾ ವಣೆ ಮತ್ತು ನಾಮಿನೇಷನ್‌ಗಳಲ್ಲಿ ಪ್ರಾತಿನಿಧ್ಯ ನೀಡಿರುತ್ತಾರೆ.
ಈ ಹಿಂದೆ ಶ್ರೀಕಂಠಪ್ಪನವರು ೨೦೦೪ ರಲ್ಲಿ ಸ್ಪರ್ಧಿಸಿ ಗೆದ್ದ ಲೋಕ ಸಭಾ ಚುನಾವಣೆಯಲ್ಲಿ ಚಿಕ್ಕಮಗ ಳೂರು ಕ್ಷೇತ್ರದ ಶಾಸಕರಾಗಿದಂತಹ ಸಿ.ಟಿ.ರವಿಯವರು ಈ ಕ್ಷೇತ್ರದಿಂದ ೨೪,೮೭೦ ಮತಗಳ ಅಂತರದ ಮತಗ ಳನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಅದೇ ರೀತಿ ತರೀಕೆರೆ ಶಾಸಕ ಸುರೇಶ್ ಮತ್ತು ಕಡೂರು ಶಾಸಕ ಬೆಳ್ಳಿ ಪ್ರಕಾಶ್‌ರವರನ್ನು ಪಕ್ಷಕ್ಕೆ ಸೇರ್ಪ ಡೆ ಮಾಡಿಕೊಂಡು ಅವರನ್ನು ಶಾಸಕರನ್ನಾಗಿ ಮಾಡುವಲ್ಲಿ ಹಾಗೂ ಹಾಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಡಿ.ಎಸ್.ಸುರೇಶ್‌ರವರು ಮತ್ತು ಅಫೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಬೆಳ್ಳಿ ಪ್ರಕಾಶ್‌ರವರು ಆಯ್ಕೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂ ಚಾಯಿತಿಗಳಲ್ಲಿ ಎಲ್ಲಾ ಸಮುದಾಯ ದವರಿಗೆ ಪ್ರಾತಿನಿಧ್ಯ ಕೊಡಿಸುವಲ್ಲಿ ಸಿ.ಟಿ.ರವಿಯವರ ಪಾತ್ರ ಅಪಾರವಾ ದುದು. ಈ ರೀತಿಯ ಹೇಳಿಕೆಗಳನ್ನು ಶಾಸಕ ಸಿ.ಟಿ.ರವಿ ಕೊಟ್ಟಿರುವುದಿಲ್ಲ. ಚುನಾವಣೆ ಹತ್ತಿರ ಬಂದಂತಹ ಸಂದರ್ಭದಲ್ಲಿ ಈ ರೀತಿಯ ಅಪಪ್ರ ಚಾರವನ್ನು ಮಾಡುವುದು ಯಾರಿ ಗೂ ಶೋಭೆ ತರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಚಟ್ನಳ್ಳಿ ಮಹೇಶ್, ಬೀಕನ ಹಳ್ಳಿ ಸೋಮಶೇಖರ್, ಮಂಜುನಾ ಥ್, ಏಕಾಂತರಾಮು ಉಪಸ್ಥಿತ ರಿದ್ದರು.