ಚಿಕ್ಕಮಗಳೂರು: ತಾಲ್ಲೂಕಿನ ಬೆರಣ ಗೋಡು ಗ್ರಾಮದ ರಸ್ತೆ ಅಭಿ ವೃದ್ದಿಪಡಿಸು ವಂತೆ ಆಗ್ರಹಿಸಿ ಗ್ರಾಮಸ್ಥರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರು ನಗರದ ತಾಲ್ಲೂಕು ಕಚೇರಿಯಿಂದ ಆಜಾದ್‌ಪಾರ್ಕ್‌ವ ರೆಗೆ ಮೆರವಣಿಗೆ ತೆರಳಿ ಪ್ರತಿಭಟಿಸಿದರು. ಬೆರಣಗೋಡು ಗ್ರಾಮದಲ್ಲಿ ಸು ಮಾರು ೧೩೦ ಕ್ಕೂ ಮನೆಗಳಿದ್ದು ಪ್ರತಿ ದಿನ ಕೂಲಿಕಾರ್ಮಿಕರು, ಶಾಲಾ ಮಕ್ಕಳು, ಆರೋಗ್ಯ ಸರಿಯಿಲ್ಲದವರು ಹಾಗೂ ಇನ್ನೂ ಅನೇಕ ಮಂದಿ ಕೆಲಸಗಳಿಗಾಗಿ ಪ್ರತಿದಿನ ಸಂಚರಿಸುವ ಮುಖ್ಯರಸ್ತೆ ಸುಮಾರು ೮ ಕಿ.ಮೀ ನಷ್ಟು ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ಆರೋಪಿಸಿದರು.
ರಸ್ತೆ ಅವ್ಯವಸ್ಥೆಯಿಂದಾಗಿ ಬಹಳಷ್ಟು ಮಂದಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತೆರಳಲಾಗದೇ ಪ್ರಾಣವನ್ನು ಕಳೆದುಕೊಂಡಿರುವ ಸಂದರ್ಭಗಳು ಇವೆ. ಕೆಲಸ ಕಾರ್ಯಗಳಿಗೆ ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ಬಂದು ಹೋಗುವ ರಸ್ತೆ ಕೂಡಾ ಇದಾಗಿದ್ದು ಓಡಾಡಲು ಅಸಾಧ್ಯವಾಗಿದೆ.
ಈ ಸಮಸ್ಯೆಯನ್ನು ಹಲವು ಬಾರಿ ಚುನಾಯಿತ ಪ್ರತಿನಿಧಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯನ್ನು ಸರಿ ಪಡಿಸದಿದ್ದರೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಲು ಹಿಂಜರಿಯುವುದಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.