ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಿ ಸುಮಾರು ೨.೭೦ ಕೋಟಿ ರೂ. ಮೌಲ್ಯದ ಚಿನ್ನಾಭರಣ, ಸೀರೆ, ಕುಕ್ಕರ್, ಮದ್ಯ, ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿ ರುವುದಾಗಿ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ನಡೆದ ಕಾರ್ಯಾಚರ ಣೆಯಲ್ಲಿ ತರೀಕೆರೆ ಪಟ್ಟಣದ ಚೆಕ್ ಪೋಸ್ಟ್‌ನಲ್ಲಿ ಪಿಕ್ ವಾಹನದಲ್ಲಿ ಸಾಗಿಸುತ್ತಿದ್ದ ೨,೫೮,೧೮,೩೩೮೮ ರೂ. ಬೆಲೆಯ ೯.೩೩೨ ಕೆಜಿ ಚಿನ್ನಾಭ ರಣವನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ೫೪೬ ಗ್ರಾಂ. ತೂಕದ ಒಂದು ಚಿನ್ನದ ಬಿಸ್ಕೆಟ್ ಸಹ ಇದೆ ಎಂದು ತಿಳಿಸಿದರು.
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಿದ್ದು, ಆಭರಣ ಸಾಗಿಸುತ್ತಿದ್ದವರ ಬಳಿ ಸಿಕ್ಕ ದಾಖಲೆ ಗಳಿಗೂ, ಆಭರಣಕ್ಕೂ ವ್ಯತ್ಯಾಸಗಳಿದ್ದ ಕಾರಣ ಅದನ್ನು ವಶಕ್ಕೆ ಪಡೆದು ವಾಣಿಜ್ಯ ತೆರಿಗೆ ಅಧಿಕಾರಿಗಳಿಗೊ ಪ್ಪಿಸಲಾಗಿದೆ. ವಾಹನದ ಚಾಲಕ ಸೇರಿದಂತೆ ಇನ್ನಿಬ್ಬರನ್ನು ವಿಚಾರಣೆ ಗೊಳಪಡಿಸಲಾಗಿದೆ ತನಿಖೆ ಮುಂ ದುವರಿದಿದೆ ಎಂದು ತಿಳಿಸಿದರು.
ಶೃಂಗೇರಿ ಹಾಗೂ ಚಿಕ್ಕಮಗಳೂ ರು ಕ್ಷೇತ್ರಗಳಲ್ಲಿ ವಿಶೇಷ ಕಾರ್ಯಪಡೆ ಅಧಿಕಾರಿಗಳು ದಾಳಿ ನಡೆಸಿ ಸೂಕ್ತ ದಾಖಲೆಗಳಿಲ್ಲದ ಒಟ್ಟು ೧೧೮೩ ಸೀರೆ ಗಳು ಹಾಗೂ ೨೮೧ ಕುಕ್ಕರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪೈಕಿ ೬೬೬ ಸೀರೆಗಳನ್ನು ನಗರದ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಎದುರಿನ ಜಯನಗರ ಬಡಾ ವಣೆಯಲ್ಲಿರುವ ಲಾಜಿಸ್ಟಿಕ್‌ವೊಂದರ ಗೋದಾಮಿನಲ್ಲಿ ವಶಕ್ಕೆ ಪಡೆಯ ಲಾಗಿದೆ. ಗುಜರಾತ್ ರಾಜ್ಯದ ಸೂರ ತ್‌ನ ಫ್ಯಾಕ್ಟರಿಯೊಂದು ಇದನ್ನು ಚಂದನ್ ಕುಮಾರ್ ಜೈನ್ ಎನ್ನು ವವರ ಹೆಸರಿನಲ್ಲಿ ಕಳಿಸಿಕೊಟ್ಟಿದೆ. ಅದರಲ್ಲಿರುವ ಫೋನ್ ನಂಬರ್ ಮೂಲಕ ಆ ವ್ಯಕ್ತಿಯನ್ನು ಸಂಪರ್ಕಿ ಸಿದರೆ ಅದು ನಮಗೆ ಸಂಬಂಧಿಸಿದಲ್ಲ ಎಂದು ಉತ್ತರಿಸಿದ್ದಾರೆ ಎಂದರು.
ಈ ಸೀರೆಗಳಿಗೆ ಸಂಬಂಧಿಸಿದಂತೆ ಸರಿಯಾದ ದಾಖಲೆಗಳಿಲ್ಲದಿರುವುದು ಹಾಗೂ ಯಾರೂ ತಮ್ಮದೆಂದು ಹೇಳಿಕೊಂಡು ಮುಂದೆ ಬಾರದ ಕಾರಣ ಅದನ್ನು ಸಹ ವಶಪಡಿಸಿಕೊ0ಡು ವಾಣಿಜ್ಯ ತೆರಿಗೆ ಅಧಿಕಾರಿಗಳಿ ಗೊಪ್ಪಿಸಲಾಗಿದ್ದು ತನಿಖೆ ಮುಂದುವ ರಿದಿದೆ ಎಂದು ತಿಳಿಸಿದರು.
ಇನ್ನು ಶೃಂಗೇರಿಯಲ್ಲಿ ೨೩೬ ಸೀರೆಗಳು, ೨೮೧ ಕುಕ್ಕರ್‌ಗಳು, ಹಾಗೂ ೧೮೧ ಫ್ಯಾನ್ ಇನ್ನಿತರೆ ವಸ್ತುಗಳು ಸೂಕ್ತ ದಾಖಲೆಗಳಿಲ್ಲದ ಕಾರಣಕ್ಕೆ ವಶಕ್ಕೆ ಪಡೆಯಲಾಗಿದೆ.
ಇದಕ್ಕೆ ಸಂಬಂಧಿಸಿದ ಜಿಎಸ್‌ಟಿ ನಂಬರ್ ಕೊಪ್ಪದ ಓರ್ವ ಡೀಲರ್‌ಗೆ ಸಂಬಂಧಿಸಿದ್ದಾಗಿದೆ. ಬಿಲ್ ಬೆಂಗಳೂ ರಿನ ವ್ಯಕ್ತಿ ಹೆಸರಿನಲ್ಲಿದೆ. ಅಲ್ಲದೆ ಜಿಎಸ್‌ಟಿ ಇಲ್ಲದೆ, ಸರಿಯಾದ ಬಿಲ್ ಇಲ್ಲದೆ ಇಷ್ಟು ದೊಡ್ಡ ಪ್ರಮಾಣದ ವಸ್ತುಗಳನ್ನು ತೋಟದಲ್ಲಿ ದಾಸ್ತಾನಿ ಡುವುದು ಏಕೆ ಎನ್ನುವ ಪ್ರಶ್ನೆ ಹಿನ್ನೆಲೆ ಯಲ್ಲಿ ವಶಕ್ಕೆ ಪಡೆಯಲಾಗಿದೆ. ಅದರ ಮೇಲೆ ಯಾವುದೇ ರಾಜಕೀ ಯ ಪಕ್ಷದ ಚಿಹ್ನೆ ಕಂಡು ಬಂದಿಲ್ಲ ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದರು.
ಮಾರ್ಚ್ ೨೦ ರಿಂದ ೨೪ ರ ವರೆಗೆ ಶೃಂಗೇರಿ ತಾಲ್ಲೂಕಿನಲ್ಲಿ ೨೧೯೮೪ ರೂ. ಬೆಲೆಯ ೫೬.೪೯ ಲೀಟ ರ್ ಮದ್ಯ ಹಾಗೆಯೇ ಮೂಡಿಗೆರೆ ತಾಲ್ಲೂಕಿನಲ್ಲಿ ೨೧೩೯೫ ರೂ. ಬೆಲೆಯ ೪೯ ಲೀಟರ್, ಚಿಕ್ಕಮಗಳೂರು ತಾಲ್ಲೂಕಿನಲ್ಲಿ ೩೪೩೦೪ ರೂ. ಮೌಲ್ಯದ ೮೭ ಲೀಟರ್ ಮದ್ಯ, ತರೀಕೆರೆ ತಾಲ್ಲೂಕಿನಲ್ಲಿ ೨೫೧೮೧ ರೂ. ಮೌಲ್ಯದ ೬೭ ಲೀಟರ್ ಮದ್ಯ ಹಾಗೂ ಕಡೂರು ತಾಲ್ಲೂಕಿನಲ್ಲಿ ೨೮೬೩೨ ರೂ.ನ ೬೩ ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.
ಇದೇ ಅವಧಿಯಲ್ಲಿ ಶೃಂಗೇರಿ ತಾಲ್ಲೂಕಿನಲ್ಲಿ ೫ ಸಾವಿರ ರೂ., ಮೂಡಿಗೆರೆ ತಾಲ್ಲೂಕಿನಲ್ಲಿ ೪೦ ಸಾವಿರ ರೂ., ಚಿಕ್ಕಮಗಳೂರು ತಾಲ್ಲೂಕಿನಲ್ಲಿ ೪.೩೩ ಲಕ್ಷ ರೂ. ಮೌ ಲ್ಯದ ಗಾಂಜ ಮತ್ತು ಎಂಡಿಎಂಎ ಮಾದಕ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿ.ಪಂ.ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಜಿ.ಪ್ರಭು ಇದ್ದರು.