ಚಿಕ್ಕಮಗಳೂರು: ವಿದ್ಯುಚ್ಚಕ್ತಿ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಇಂದು ಜಿಲ್ಲಾ ರೈತ ಸಂಘದ ಮುಖಂಡರುಗಳು ನಗರದ ಮೆಸ್ಕಾಂ ಕಚೇರಿಯ ಸಮೀಪ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಘದ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ವಿದ್ಯುಚ್ಚಕ್ತಿ ಖಾಸಗೀ ಕರಣ ದಿಂದ ರೈತರ ಬದುಕಿಗೆ ಮಾರಕವಾಗಲಿದೆ. ಜೊತೆಗೆ ಬಳಕೆದಾ ರರಿಗೆ ಇದರಿಂದ ತೊಂದರೆಯಾ ಗಲಿರುವ ಹಿನ್ನೆಲೆಯಲ್ಲಿ ಈ ಖಾಸಗೀ ಕರಣವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ವಿದ್ಯುಚ್ಚಕ್ತಿ ಬಳಕೆ ಮಾಡುವ ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್‌ಮೀಟರ್ ಅಳವಡಿಸಲು ಕ್ರಮ ಕೈಗೊಂಡಿರು ವುದನ್ನು ಕೈಬಿಡಬೇಕು, ಹಗಲು ಹೊತ್ತು ೧೨ ಗಂಟೆ ನಿರಂತರವಾಗಿ ತ್ರಿಪೇಸ್ ವಿದ್ಯುತನ್ನು ಕೃಷಿಪಂಪ್ ಸೆಟ್‌ಗಳಿಗೆ ಸರಬರಾಜು ಮಾಡ ಬೇಕು, ಪರಿವರ್ತಕಗಳು ಕೆಟ್ಟು ಹೋ ದ ಸಂದರ್ಭದಲ್ಲಿ ೭೨ ಗಂಟೆಯೊಳಗೆ ಪರಿವರ್ತಕ ಅಳವಡಿಸಬೇಕು ಎಂದು ಆಗ್ರಹಿಸಿದರು.
ನೀರಾವರಿ ಪಂಪ್‌ಸೆಟ್‌ಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಿದ ರೈತರಿಗೆ ೧೫ ದಿನಗಳಲ್ಲಿ ಸಂಪರ್ಕ ಕಲ್ಪಿಸಬೇಕು. ಅಕ್ರಮ ಸಕ್ರಮದಡಿ ಹಣ ಪಾವತಿ ಸಿರುವ ರೈತರಿಗೆ ತಕ್ಷಣ ಪರಿವರ್ತಕ ಅಳವಡಿಸಬೇಕು. ಲೈನ್‌ಮ್ಯಾನ್‌ಗಳು ದೂರು ಸ್ವೀಕರಿಸಿದ ನಂತರ ಸೂಕ್ತ ಸಮಯದಲ್ಲಿ ಲೈನ್‌ಟ್ರಬಲ್ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ವಿತರಣಾ ಮಾರ್ಗದ ನ್ಯೂನ್ಯತೆ ಯಿಂದಾಗುವ ರೈತರ ಪ್ರಾಣಹಾನಿಗೆ ಗರಿಷ್ಟ ಮಟ್ಟದ ಪರಿಹಾರ ಕೊಡಬೇಕು ಹಾಗೂ ಕೆಟ್ಟು ಹೋದ ಪರಿವರ್ತ ಕಗಳನ್ನು ೭೨ ಗಂಟೆಯೊಳಗೆ ಅಳವಡಿಸಿ ಬೆಳೆ ನಷ್ಟವಾದರೆ ವೈಜ್ಞಾನಿಕ ಪರಿಹಾರ ಕೊಡಬೇಕು ಎಂದು ಮೆಸ್ಕಾಂ ಇಲಾಖೆಯ ಕಾರ್ಯ ಪಾಲಕ ಅಭಿಯಂತರ ಮಾರುತಿ ಅವರಿಗೆ ಮುಖಂಡರುಗಳು ಒತ್ತಾಯಿ ಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಮಹೇಶ್, ಮುಖಂಡರುಗಳಾದ ಕೆ.ಕೆ.ಕೃಷ್ಣೇಗೌಡ, ಬಸವರಾಜ್, ಎಂ. ಎನ್.ಮುಳ್ಳಂಡಪ್ಪ, ಕೆ.ಸಿ.ಆನಂದ್, ವಿಜಯ್‌ಕುಮಾರ್, ಕೆಂಬಾಲಯ್ಯ, ಅಶೋಕ್ ಮತ್ತಿತರರು ಹಾಜರಿದ್ದರು.