ಚಿಕ್ಕಮಗಳೂರು: ಬೆಂಬಲ ಬೆಲೆ ಯೋಜನೆಯ ಖರೀದಿ ಕೇಂದ್ರಗಳಲ್ಲಿ ನಡೆಯುತ್ತಿರುವ ರೈತರ ಶೋಷಣೆ ತಪ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.
ಸಂಘದ ಜಿಲ್ಲಾಧ್ಯಕ್ಷ ಗುರುಶಾಂ ತಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ. ಖರೀದಿ ವಿಳಂಬ ಮಾಡುವ ಮೂಲಕ ರೈತರನ್ನು ಸತಾಹಿಸಲಾಗುತ್ತಿದೆ. ರೈತರು ಕಾದು ಸುಸ್ತಾಗಿ ಕಡಿಮೆ ಬೆಲೆಗೆ ಮಧ್ಯವರ್ತಿಗಳಿಗೆ ಅನಿವಾ ರ್ಯವಾಗಿ ಮಾರಾಟ ಮಾಡುತ್ತಿದ್ದಾರೆ. ಮಧ್ಯವರ್ತಿಗಳು ಅದೇ ರಾಗಿಯನ್ನು ಖರೀದಿ ಕೇಂದ್ರಗಳಿಗೆ ಮಾತಾಟ ಮಾಡಿ ಕ್ವಿಂಟಾಲ್ ಒಂದಕ್ಕೆ ೧೦೦-೨೦೦ ರೂ ವರೆಗೆ ಲಾಭಗಳಿಸುತ್ತಿದ್ದಾರೆ. ಈ ವ್ಯವಹಾರ ದಲ್ಲಿ ಕೇಂದ್ರದ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋ ಪಿಸಿದರು.
ರೈತರ ಖಾತೆಗೆ ಹಣ ಜಮಾ ಮಾಡುವಾಗ ಪ್ರತಿ ಚೀಲಕ್ಕೆ ೩೦-೪೦ ರೂ.ವರೆಗೆ ಹಣ ವಸೂಲಿ ಮಾಡುತ್ತಿರು ವುದು ಲೋಕಾಯುಕ್ತರು ಓರ್ವ ಅಧಿಕಾರಿಯನ್ನು ಬಂಧಿಸುವ ಮೂಲಕ ಬೆಳಕಿಗೆ ಬಂದಿದೆ. ಚಿಕ್ಕಮ ಗಳೂರು ರಾಗಿ ಖರೀದಿ ಕೇಂದ್ರಕ್ಕೆ ೭ ಸಾವಿರ ದಿಂದ ೮ ಸಾವಿರ ಚೀಲ ರಾಗಿ ಬರುತ್ತಿದ್ದು ರೈತರಿಂದ ೨.೫೦ ಲಕ್ಷ ರೂ. ವಸೂಲಿ ಮಾಡಲಾಗು ತ್ತಿದೆ. ಈ ಬಗ್ಗೆ ಸರಕಾರ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ದರು.
ರೈತ ಮುಖಂಡರಾದ ಮಂಜು ನಾಥ, ಬಿ.ಡಿ.ಮಹೇಶ್, ಚಂದ್ರಶೇ ಖರ್ ಮತ್ತಿತರರಿದ್ದರು.