ಚಿಕ್ಕಮಗಳೂರು: ದತ್ತಜಯಂತಿ ಮತ್ತಿತರೆ ಸಂದರ್ಭದಲ್ಲಿ ಮುಸಲ್ಮಾನ ಸಮುದಾ ಯದ ವಿರೋಧಿ ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್ ಬೆಂಬಲಿಗ ಎಚ್.ಡಿ.ತಮ್ಮಯ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ತಮ್ಮ ಸಮುದಾಯ ಈ ಬಾರಿ ಚುನಾವಣೆಯಲ್ಲಿ ಮತನೀಡುವಾಗ ಪರ್‍ಯಾಯ ಆಲೋ ಚನೆ ಮಾಡಬೇಕಾಗುತ್ತದೆ ಎಂದು ಚಿಕ್ಕಮಗಳೂರು ಮುಸ್ಲೀಂ ಅಸೋಸಿ ಯೇಶನ್ ಎಚ್ಚರಿಸಿದೆ.
ಅಸೋಸಿಯೇಶನ್ ಕಾರ್ಯ ದರ್ಶಿ ರಸೂಲ್‌ಖಾನ್ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ತಮ್ಮಯ್ಯ ಬಿಟ್ಟು ಯಾರಿಗೆ ಟಿಕೆಟ್ ನೀಡಿದರೂ ಮುಸ್ಲಿಂ ಸಮುದಾಯ ಮತಹಾಕ ಲಿದೆ. ಆದರೆ, ದತ್ತಜಯಂತಿ ವೇಳೆ ಸಮುದಾಯದ ವಿರುದ್ಧ ಮಾತನಾ ಡಿದ ವ್ಯಕ್ತಿಗೆ ಟಿಕೆಟ್ ನೀಡಿದರೆ ಕ್ಷೇತ್ರ ದ ೩೭ ಸಾವಿರ ಮಂದಿ ಸಮುದಾ ಯದ ಮತದಾರರು ಯೋಚಿಸಿ ಮತನೀಡಲು ಬೇರೆ ನಿರ್ಧಾರ ಮಾಡಬೇಕಾಗುತ್ತದೆ ಎಂದರು.
ಮೊದಲಿನಿಂದಲೂ ಶೇ.೯೦ ರಷ್ಟು ಮುಸ್ಲೀಂರು ಕಾಂಗ್ರೆಸ್ಸಿಗೆ ಮತ ನೀಡುತ್ತಿದ್ದು ನಮ್ಮ ಸಮುದಾಯದ ಸಗೀರ್ ಅಹ್ಮದ್ ಮೂರು ಬಾರಿ ಗೆದ್ದು ಉತ್ತಮ ಆಡಳಿತ ನಡೆಸಿದ್ದಾರೆ. ಈಗ ಸ್ಪರ್ಧಿಸಲು ಸಮರ್ಥರಾಗಿರುವ ಸಿ.ಎನ್.ಅಕ್ಮಲ್ ಅವರಿಗೆ ಟಿಕೆಟ್ ನೀಡಿದರೆ ನಾವೆಲ್ಲಾ ಬೆಂಬಲಿಸು ತ್ತೇವೆ. ಒಂದು ವೇಳೆ ಅರ್ಜಿ ಸಲ್ಲಿಸಿ ರುವ ಇತರೆ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡಿದರೂ ನಮ್ಮ ಅಭ್ಯಂತರವಿಲ್ಲ. ಆದರೆ, ಮುಸಲ್ಮಾನರ ವಿರುದ್ಧ ಇಲ್ಲ ಸಲ್ಲದ ಹೇಳಿಕೆ ನೀಡಿ, ದತ್ತಜಯಂತಿ ವೇಳೆ ಮುಸ್ಲಿಮರನ್ನು ನಿಂದಿಸಿದ ವ್ಯಕ್ತಿಗೆ ಟಿಕೆಟ್ ನೀಡಿದರೆ ಅದಕ್ಕೆ ನಮ್ಮ ವಿರೋಧವಿದೆ. ವಿವಿಧ ಮಸೀದಿಗಳ ಗುರುಗಳ ನೇತೃತ್ವದಲ್ಲಿ ಸಭೆ ಸೇರಿ ಪರ್‍ಯಾಯ ನಿರ್ಧಾರದ ಬಗ್ಗೆ ಚರ್ಚಿಸಬೇಕಾಗುತ್ತದೆ ಎಂದು ಹೇಳಿದರು. ಮುಖಂಡರಾದ ಇರ್ಫಾ ನ್, ಸಲ್ಮಾನ್,ಹಾಫೀಜ್, ನವೀದ್ ಪಾಷ,ಅಜ್ಮಲ್‌ಪಾಷ ಮತ್ತಿತರರಿದ್ದರು.