ಚಿಕ್ಕಮಗಳೂರು: ಚುನಾವಣೆ ದಿನಾಂಕ ನಿಗದಿಯಾದ ದಿನದಿಂದಲೂ ಗ್ರಾಮಕ್ಕೆ ಇದುವರೆಗೂ ಭೇಟಿ ನೀಡಲು ಯಾವುದೇ ರಾಜಕೀಯ ಪಕ್ಷದ ನಾಯಕರೂ ಬಂದಿಲ್ಲ ಎಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಂಡುಗುಳಿ ಗ್ರಾಮಸ್ಥರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಪ್ರತಿಷ್ಠಿತ ಕಣವಾದ ಜೋಗಣ್ಣನಕೆರೆ ಕ್ಷೇತ್ರದ ಯಾವುದೇ ಭಾಗಕ್ಕೂ ಇದುವರೆಗೂ ಯಾವುದೇ ಪಕ್ಷದ ನಾಯಕರು ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಗ್ರಾಮದಲ್ಲಿ ಚುನಾವಣೆ ನಿಗದಿಯಾದ ದಿನದಿಂದಲೂ ಯಾವೊಬ್ಬ ಯಾವುದೇ ಪಕ್ಷದ ರಾಜಕೀಯ ಮುಖಂಡರು ಗ್ರಾಮಕ್ಕೆ ಬಂದು ಗ್ರಾಮದ ಸಮಸ್ಯೆ, ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿಲ್ಲ ನಮ್ಮ ಗ್ರಾಮವನ್ನು ಬಿಟ್ಟು ಎಲ್ಲಾ ಕಡೆ ವಿವಿಧ ಪಕ್ಷದ ಮುಖಂಡರು ಸಂಚರಿಸಿ ಗ್ರಾಮದ ಕುಂದು ಕೊರತೆ ಆಲಿಸುತ್ತಾ ಬರುತ್ತಿದ್ದು ಅಲ್ಲದೆ ವಿವಿಧ ಪಕ್ಷದ ನಾಯಕರು ನಾವೇನಾದರೂ ಈ ಬಾರಿ ಶಾಸಕರಾದರೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡುತ್ತಿದ್ದಾರೆ.
ನಮ್ಮ ಗ್ರಾಮದ ಬಳಿ ಯಾವುದೇ ರಾಜಕೀಯ ನಾಯಕರು ಕೂಡ ಬಂದು ಮುಕ್ತವಾಗಿ ಗ್ರಾಮಸ್ಥರ ಬಳಿ ಬೆರೆತಿಲ್ಲ. ನಾವು ಯಾವುದೇ ತಮ್ಮ ಮತವನ್ನು ಯಾವುದೇ ನಿಗದಿತ ಪಕ್ಷಕ್ಕೆ ಸೀಮಿತಗೊಳಿಸಿಲ್ಲ. ನಮ್ಮ ಗ್ರಾಮದ ಕಷ್ಟಗಳಿಗೆ ಸ್ಪಂದಿಸಲು ಬರದಂತಹ ಯಾವು ದೇ ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ಮತವನ್ನು ಕೊಡುವುದಿಲ್ಲ. ಬದಲಾಗಿ ಇಲ್ಲಿನ ಜನ ಹಾಗೂ ಗ್ರಾಮಸ್ಥರು ಸ್ವತಂತ್ರ ಅಥವಾ ನೂತನ ಪಕ್ಷದ ಅಭ್ಯರ್ಥಿಗಳಿಗೆ ನಮ್ಮ ಮತವನ್ನು ನೀಡುತ್ತೇವೆ ಎಂದು ಜನತೆ ಪ್ರತಿಕ್ರಿಯೆ ನೀಡಿದ್ದಾರೆ.