ಚಿಕ್ಕಮಗಳೂರು: ಮೇ.೧೦ರಂದು ನಡೆಯುವ ವಿಧಾನಸಭಾ ಚುನವಾಣೆಗೆ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಸಿ.ಟಿ.ರವಿ ಅವರು ಇಂದು ಸಹಸ್ರಾರು ಬೆಂಬಲಿಗರೊಂದಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.
ಬೆಳಿಗ್ಗೆ ಬಸವನಹಳ್ಳಿ ಮುಖ್ಯ ರಸ್ತೆಯ ತಮ್ಮ ನಿವಾಸದಿಂದ ಕಾಮಧೇನು ಗಣಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಹೋಮ, ಹವನದಲ್ಲಿ ಭಾಗವಹಿ ಸಿದರು. ನಂತರ ತಾಲ್ಲೂಕು ಕಚೇರಿವರೆಗೆ ಬೆಂಬಲಿ ಗರೊಂದಿಗೆ ಕಾಲ್ನಡಿಗೆಯಲ್ಲೇ ತೆರಳಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಅವರ ಪತ್ನಿ ಪಲ್ಲವಿ ಸಿ.ಟಿ.ರವಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ .ಕಲ್ಮರುಡಪ್ಪ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಈಶ್ವರಳ್ಳಿ ಮಹೇಶ್, ರಾಜ್ಯ ಸಫಾಯಿ ಕರ್ಮ ಚಾರ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಜೊತೆಗಿದ್ದರು.ಕ್ಷೇತ್ರದ ಎಲ್ಲಾ ಹೋಬಳಿಗಳಿಂದಲೂ ಆಗಮಿಸಿದ್ದ ಸಹಸ್ರಾರು ಮುಖಂಡರು, ಕಾರ್ಯಕರ್ತರು ಸಿ.ಟಿ.ರವಿ ಅವರ ಪರವಾಗಿ ಘೋಷಣೆ ಹಾಕಿದರು.
ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಸಿ.ಟಿ.ರವಿ ಎಂದು ಕೂಗಿದರು. ಅಲ್ಲಲ್ಲಿ ಪಟಾಕಿ ಸಿಡಿಸಿ, ಕುಣಿದು ಸಂಭ್ರಮಿಸಿದರು.
ಇನ್ನೂ ಕೆಲವರು ಸಿ.ಟಿ.ರವಿ ಅವರ ಗೆಲುವಿಗೆ ಪ್ರಾರ್ಥಿಸಿ ತಮ್ಮ ಊರು ಗಳ ಗ್ರಾಮದೇವರಿಗೆ ಪೂಜೆ ಸಲ್ಲಿಸಿ ತಂದಿದ್ದ ಪ್ರಸಾದವನ್ನು ರವಿ ಅವರಿಗೆ ತಲುಪಿಸಿದರು. ಮಾರ್ಗದುದ್ದಕ್ಕೂ ಹಲವು ಮಂದಿ ಸಿ.ಟಿ.ರವಿ ಅವರಿಗೆ ಹಾರ ಹಾಕಿ ಶುಭ ಕೋರಿದರು.
ಇದೇ ವೇಳೆ ಶಾಸಕರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆ ದರು. ನಾಮಪತ್ರ ಸಲ್ಲಿಸುವ ವೇಳೆ ಯಾವುದೇ ಒತ್ತಡ, ಉದ್ವೇಗಗಳಿಲ್ಲದೆ ನಿರಾಳರಾಗಿದ್ದ ಸಿ.ಟಿ.ರವಿ ಉಮೇದು ವಾರಿಕೆ ಸಲ್ಲಿಸಿದ ನಂತರ ತಾಲ್ಲೂಕು ಕಚೇರಿ ಆವರಣದಲ್ಲಿನ ಮರದ ಕೆಳಗೆ ನಿಂತು ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ಫೊಟೋ ತೆಗೆಸಿಕೊಂಡರು.
ಕಿಡ್ನಿ ಸ್ಟೋನ್ಸ್ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಸಿ.ಟಿ.ರವಿ ಆಸ್ಪತ್ರೆಯಿಂದ ಮನೆಗೆ ಬಂದಿದ್ದರು. ತಮ್ಮ ಸ್ವಗ್ರಾಮ ಚಿಕ್ಕಮಾಗರವಳ್ಳಿಗೆ ತೆರಳಿ ಗ್ರಾಮ ದೇವತೆಗೆ ಪೂಜೆ ಸಲ್ಲಿಸಿದರು ನಂತರ ತಮ್ಮ ತಾಯಿ ಹೊನ್ನಮ್ಮ ಅವರಿಂದ ಆಶೀರ್ವಾದ ಪಡೆದು ನಂತರ ಚಿಕ್ಕ ಮಗಳೂರಿಗೆ ಆಗಮಿಸಿದರು.