ಚಿಕ್ಕಮಗಳೂರು: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ೨೦೨೩ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ೩ನೇ ದಿನವಾದ ಇಂದು (ಏಪ್ರಿಲ್ ೧೭ ರಂದು) ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೯ ನಾಮಪತ್ರ ಸಲ್ಲಿಕೆಯಾಗಿದೆ.
೧೨೩ – ಶೃಂಗೇರಿ, ವಿಧಾನ ಸಭಾ ಕ್ಷೇತ್ರಕ್ಕೆ ಜಾತ್ಯಾತೀತ ಜನತಾ ದಳದಿಂದ ಸುಧಾಕರ್ ಎಸ್. ಶೆಟ್ಟಿ, ಭಾರತೀಯ ಜನತಾ ಪಕ್ಷದಿಂದ ಡಿ.ಎನ್. ಜೀವರಾಜ್ ಮೊದಲ ದಿನ ೩ ನಾಮಪತ್ರ ಸಲ್ಲಿಸಿದ್ದು, ಇಂದು ಮತ್ತೊಂದು ನಾಮಪತ್ರ ಸಲ್ಲಿಸಿದ್ದಾರೆ.
೧೨೪ ಮೂಡಿಗೆರೆ, ವಿಧಾನ ಸಭಾ ಕ್ಷೇತ್ರದಿಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ನಯನ ಜ್ಯೋತಿ ಜಾವರ್, ಜಾತ್ಯಾತೀತ ಜನತಾ ದಳದಿಂದ ಎಂ.ಪಿ. ಕುಮಾರ ಸ್ವಾಮಿ, ಬಹುಜನ ಸಮಾಜ ಪಕ್ಷದಿಂದ ರಮೇಶ್ ಎಲ್.ಬಿ., ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ರಮೇಶ ಎ., ಭಾರತೀಯ ಜನತಾ ಪಕ್ಷದಿಂದ ದೀಪಕ್ ದೊಡ್ಡಯ್ಯ ನಾಮಪತ್ರ ಸಲಿಸಿದ್ದಾರೆ.
೧೨೫ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಿಂದ ಇಂದು ೮ ನಾಮಪತ್ರಗಳು ಸಲ್ಲಿಕೆಯಾಗಿವೆ. ಬಿಎಸ್‌ಪಿ ಯಿಂದ ಸುಧಾ ಕೆ.ಬಿ., ಉತ್ತಮ ಪ್ರಜಾಕೀಯ ಪಕ್ಷದಿಂದ ಯತೀಶ್ ಬಿ.ಜೆ., ಭಾರತೀಯ ಜನತಾ ಪಕ್ಷದಿಂದ ಸಿ.ಟಿ. ರವಿ ೩ ನಾಮಪತ್ರ ಸಲ್ಲಿಸಿದ್ದು,
ಮುನಿಯಾ ಭೋವಿ, ಶಶಿಧರ ಬಿ.ಜಿ., ಅಫ್ಜಲ್ ಪಾಷ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ೧೨೬ ತರೀಕೆರೆ ವಿಧಾನ ಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷ ದಿಂದ ಡಿ.ಎಸ್. ಸುರೇಶ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಜಿ.ಹೆಚ್. ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ್ದಾರೆ.
೧೨೭ ಕಡೂರು ವಿಧಾನ ಸಭಾ ಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಪಕ್ಷದಿಂದ ಲೋಹಿತ ಜಿ.ಟಿ., ಕರ್ನಾಟಕ ರಾಜ್ಯ ಪ್ರಗತಿ ಪಕ್ಷದಿಂದ ಕೆ.ಎಸ್. ಉಮೇಶ್ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ.