News Karnataka Kannada
Thursday, April 25 2024
ಚಿಕಮಗಳೂರು

ಚಿಕ್ಕಮಗಳೂರಿನಿಂದ ಬೆಂಗಳೂರಿಗೆ 6 ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭ

6 electric buses from Chikmagalur to Bengaluru launched
Photo Credit : News Kannada

ಚಿಕ್ಕಮಗಳೂರು: ಕರ್ನಾಟಕ ಸಾರಿಗೆ ಸಂಸ್ಥೆ ಬದಲಾವಣೆಗೆ ಮುಂದಾಗಿದ್ದು, ಎಲೆಕ್ಟ್ರಿಕ್ ಬಸ್‌ಗಳ ಕಡೆ ಮುಖ ಮಾಡಿದೆ. ಚಿಕ್ಕಮಗಳೂರಿನಿಂದ ಬೆಂಗಳೂ ರಿಗೆ 6 ಎಲೆಕ್ಟ್ರಿಕ್ ಬಸ್ ಸೇವೆಯನ್ನು ಕಲ್ಪಿಸ ಲಾಗಿದೆ. ಎಲೆಕ್ಟ್ರಿಕ್ ಬಸ್ ನಲ್ಲಿ ಪ್ರಯಾಣ ಮಾಡಿದ ಪ್ರಯಾಣಿಕರು ತಡೆರಹಿತ ಪ್ರಯಾಣಕ್ಕೆ ಸಂತಸ ಹೊರಹಾಕುತ್ತಿದ್ದಾರೆ.

ಎಲೆಕ್ಟ್ರಿಕ್ ಬಸ್ ಪ್ರಯಾಣದ ಅನುಕೂಲ: ಬೆಂಗಳೂರಿಗೆ ೬ಎಲೆಕ್ಟ್ರಿಕ್ ಬಸ್ ಸೇವೆಯ ಮೂಲಕ ಬೆಂಗಳೂರು-ಚಿಕ್ಕಮಗಳೂರು ಸಂಪರ್ಕದ ನಡುವೆ ಬರುವ ಹಾಸನ-ಬೇಲೂರು ಪ್ರಯಾಣಿಕರಿಗೂ ಸುಖಾಸೀನ ಎಲೆಕ್ಟ್ರಿಕ್ ಬಸ್ ಪ್ರಯಾಣದ ಅನುಕೂಲ ಸಿಕ್ಕಂತಾಗಿದೆ. ದುಬಾರಿ ಇಂಧನ ಬೆಲೆ ಹಾಗೂ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅಮೂಲಾಗ್ರ ಬದಲಾವಣೆಯಾಗುತ್ತಿದ್ದು, ಪೇಟ್ರೋಲ್, ಡಿಸೇಲ್ ಬೈಕ್, ಕಾರು ಹಾಗೂ ಆಟೋಗಳ ಜಾಗವನ್ನು ಎಲೆಕ್ಟ್ರಿಕ್ ಬೈಕ್ ಕಾರು ಮತ್ತು ಆಟೋಗಳು ಆವರಿಸಿಕೊಳ್ಳುತ್ತಿದೆ.

ಈ ಹಿಂದೆ ಚಿಕ್ಕಮಗಳೂರಿನಿಂದ ಬೆಂಗ ಳೂರಿಗೆ 6 ವೋಲ್ವೊ ಬಸ್ ಸಂಚಾರ ನಡೆಸುತ್ತಿದ್ದವು. ವೋಲ್ವೊ ಬಸ್‌ಗಳ ಬದಲಾಗಿ ಸದ್ಯ ಇವಿ ಪವರ್ ಪ್ಲೇಸ್ ಎಂಬ ಎಲೆಕ್ಟ್ರಿಕ್ ಬಸ್‌ಗಳು ಸಂಚಾರ ಆರಂಭಿಸಿವೆ. ಚಿಕ್ಕಮಗ ಳೂರು-ಬೆಂಗಳೂರು ಸೇವೆ ನೀಡುವ ಜೊತೆಗೆ ಹಾಸನ-ಬೇಲೂರು ಪ್ರಯಾಣಿಕರಿಗೂ ಸೇವೆ ಒದಗಿಸುತ್ತಿವೆ. ವೋ ಲ್ವೊ ಬಸ್‌ ನಂತೆ  ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿರುವ ಈ ಬಸ್‌ಗಳ ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ನಿತ್ಯ ಬೆಳಿಗ್ಗೆ ೫ ಗಂಟೆಯಿಂದ ಸಂಚಾರ ಆರಂಭ: ಬೆಂಗಳೂರಿನಿಂದ ನಿತ್ಯ ಬೆಳಿಗ್ಗೆ ೫ಗಂಟೆ ಯಿಂದ ಸಂಚಾರ ಆರಂಭಿಸುವ ಆರು ಇವಿ ಪವರ್ ಪ್ಲೇಸ್ ಬಸ್‌ಗಳ ರಾತ್ರಿ 12ಗಂಟೆಯ ವರೆಗೂ ಪ್ರಾಯಾಣಿಕರ ಸೇವೆ ಸಲ್ಲಿಸಲಿವೆ. ಬೆಂಗಳೂರು-ಚಿಕ್ಕಮಗಳೂರು ಸಂಚಾರ ಕಲ್ಪಿಸುವ ಎಲೆಕ್ಟ್ರಿಕ್  ಬಸ್‌ಗಳ  ಬ್ಯಾಟರಿ ಚಾರ್ಚ್ಗಾಗಿ ನಗರದ ಕೆಎಸ್‌ಆರ್ಟಿಸಿ ಡಿಪೋದಲ್ಲಿ ಎರಡು ಚಾರ್ಜರ್ ಘಟಕಗಳನ್ನು ಸ್ಥಾಪಿಸಲಾಗಿದ್ದು, ಏಕಕಾಲದಲ್ಲಿ ಎರಡು ಬಸ್‌ಗಳ ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ. ಒಮ್ಮೆ ಬ್ಯಾಟರಿ ಚಾರ್ಜ್ ಮಾಡಲು ಎರಡು ಗಂಟೆಗಳ ಕಾಲಾವಕಾಶ ಬೇಕಾಗಿದ್ದು, ಒಮ್ಮೆ ಚಾರ್ಜ್ ಮಾಡಿದಲ್ಲಿ ೩೦೦ ಕಿ.ಮೀ. ಸಾಗುವ ಸಾಮರ್ಥ್ಯ ವನ್ನು ಹೊಂದಲಾಗಿದೆ. ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ಎಸಿ, ಪುಶ್ಬ್ಯಾಕ್ ಸೀಟ  ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಸ್‌ನ ಒಳಬದಿ ಮತ್ತು ಹಿಂಬದಿಯಲ್ಲಿ ಸಿಸಿ ಕ್ಯಾಮಾರವನ್ನು ಅಳವಡಿಸಲಾಗಿದೆ.

ಟಿ.ವಿ., ಸೇರಿದಂತೆ ಮೊಬೈಲ್ ಚಾರ್ಜರ್ ವ್ಯವಸ್ಥೆಯನ್ನು ಪ್ರತೀ ಆಸನದಲ್ಲಿ ಕಲ್ಪಿಸಲಾಗಿದೆ. ಬಸ್ ನ ಶಬ್ಧವು ಕಡಿಮೆಯಾಗಿದೆ. ತಡೆರಹಿತ ಪ್ರಯಾಣಕ್ಕೆ ಹೇಳಿ ಮಾಡಿಸಿದ ಬಸ್ ಇದಾಗಿದೆ. ೪೫ ಆಸನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಒಟ್ಟಾರೆ ವೋಲ್ವೊ  ಬಸ್ ಗೆ ಯಾವುದೇ ಸೌಲಭ್ಯ ಕಡಿಮೆ ಇಲ್ಲದಂತೆಎಲೆಕ್ಟ್ರಿಕ್ ಬಸ್ ಗಳನ್ನು ವಿನ್ಯಾಸಗೊಳಿಸಿದ್ದು, ಜನಾಕರ್ಷಕ ವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು