News Karnataka Kannada
Wednesday, April 24 2024
Cricket
ಚಿಕಮಗಳೂರು

ಸಿ.ಟಿ.ರವಿ ಅಧಿಕಾರ ಕಳೆದುಕೊಂಡು ವಿಲವಿಲ ಒದ್ದಾಡುತ್ತಿದ್ದಾರೆ: ಹೆಚ್.ಡಿ.ತಮ್ಮಯ್ಯ

A new political jugalbandi of the old dostis is being witnessed
Photo Credit : News Kannada

ಚಿಕ್ಕಮಗಳೂರು: ಸಿ.ಟಿ.ರವಿ ಅವರು ಅಧಿಕಾರ ಕಳೆದುಕೊಂಡು ವಿಲವಿಲ ಒದ್ದಾಡುತ್ತಿದ್ದಾರೆ. ಮೀನನ್ನು ನೀರಿನಿಂದ ಹೊರತಗೆದಂತಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ವ್ಯಂಗ್ಯವಾಡಿದರು.

ಗ್ರಾಮೀಣ ಪ್ರದೇಶಗಳ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಗ್ರಾಮಗಳಿಗೆ ತೆರಳಿದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿ.ಟಿ.ರವಿ ಅವರು ೨೦ವರ್ಷದಿಂದ ಅಂಡಾ-ಬಂಡಾ ಅಧಿಕಾರದಲ್ಲಿ ಇದ್ದರು. ಈಗ ಅಧಿಕಾರ ಕಳೆದುಕೊಂಡು ವಿಲವಿಲ ಅಂತ ಒದ್ದಾಡುತ್ತಿದ್ದಾರೆ. ಅಧಿಕಾರ ಇದ್ದಾಗ ಅವರು ಭೂಮಿ ಮೇಲೆ ನಡೆಯುತ್ತಿರಲಿಲ್ಲ. ಆಕಾಶದ ಮೇಲೆ ಹಾರಾಡುತ್ತಿದ್ದರು. ಈಗ ಅಧಿಕಾರವಿಲ್ಲ ಹಾಗಾಗೀ ಅವರು ಮಾತನಾಡುತ್ತಿದ್ದಾರೆ ಎಂದರು.

ಸಿ.ಟಿ.ರವಿಯವರು ಬಹಿರಂಗ ಪತ್ರ ಬರೆದಿದ್ದಾರೆ. ನನಗೆ ಖುಷಿ ಇದೆ. ಸಾಮಾನ್ಯ ಜನರು, ಹಿಂದುಳಿದ ವರ್ಗದವರು, ದೀನ ದಲಿತರು ಬಡವರ ಬದುಕಿನ ಬಗ್ಗೆ ಅವರಿಗೆ ನೆನಪಿರಲಿಲ್ಲ. ೧೯ ವರ್ಷ ಬಳಿಕ ಜನರ ಬದುಕಿನ ಬಗ್ಗೆ ಎಚ್ಚರವಾಗಿದ್ದಾರೆ. ಅದಕ್ಕೆ ನನಗೆ ಸಂತೋಷವಿದೆ ಎಂದು ಹೇಳಿದರು.

ನಾನು ಕಾಫಿತೋಟದ ಶ್ರೀಮಂತ ಕುಟುಂಬದಲ್ಲಿ ನಾನು ಹುಟ್ಟಿಲ್ಲ. ನಾನು ಸಾಮಾನ್ಯ ರೈತನ ಮಗನಾಗಿದ್ದು, ಜನರ ಬಗ್ಗೆ ಅವರಿಗಿಂತ ಜಾಸ್ತಿ ನನಗೆ ಕಾಳಜಿ ಇದೆ ಎಂದ ಅವರು, ಕೆಲಸ ಚೆನ್ನಾಗಿದ್ದರೇ ಯಾರೇ ಕಂಟ್ರಾಕ್ಟರ್ ಆಗಿದ್ದರೂ ನನ್ನ ತಕರಾರಿಲ್ಲ. ಕಾಮಗಾರಿ ಚೆನ್ನಾಗಿಲ್ಲ ಎಂದರೆ ಸಂಬಂಧಿಕರೇ ಆದರೂ ನಾನು ಒಪ್ಪುವುದಿಲ್ಲ. ಕಾಮಗಾರಿ ಕಳಪೆಯಾಗಿದ್ದರೇ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಬಿಡುವುದಿಲ್ಲ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು