News Karnataka Kannada
Wednesday, April 24 2024
Cricket
ಚಿಕಮಗಳೂರು

ಗ್ಯಾರಂಟಿಗಳಿಗೆ ಷರತ್ತು ವಿಧಿಸಿ ಜನರಿಗೆ ಮಂಕುಬೂದಿ ಎರಚಿದ ಸರ್ಕಾರ

Cheating people by conditioning guarantees
Photo Credit : News Kannada

ಚಿಕ್ಕಮಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಚುನಾವಣೆ ಪೂರ್ವ ನೀಡಿದ್ದ ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸಿದ್ದರೂ. ವಿವಿಧ ಹಂತಗಳಲ್ಲಿ ಷರತ್ತುಗಳನ್ನು ವಿಧಿಸುವ ಮೂಲಕ ರಾಜ್ಯದ ಜನತೆಗೆ ಮಂಕುಬೂದಿ ಎರಚಿದೆ. ಷರತ್ತು ವಿಧಿಸುವುದಿಲ್ಲ ಎಂದು ಹೇಳಿ ಈಗ ಷರತ್ತು ವಿಧಿಸುವ ಮೂಲಕ ಇದು ವಚನಭ್ರಷ್ಟ ಸರ್ಕಾರ ಎಂಬುದನ್ನು ಸಾಭೀತು ಮಾಡಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹಾಗೂ ನಗರಸಭೆ ಸದಸ್ಯ ಟಿ.ರಾಜಶೇಖರ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನಾಯಕರು ಗೃಹ ಜ್ಯೋತಿ ಯೋಜ ನೆಯಡಿ ಪ್ರತೀ ಮನೆಗೆ ೨೦೦ ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿದ್ದರು. ಸದ್ಯ ೧ ವರ್ಷದ ಹಿಂದಿನ ಸರಾ ಸರಿ ತಗೆದುಕೊಂಡು ಯಾರು ಎಷ್ಟು ವಿದ್ಯುತ್ ಉಪಯೋಗಿಸುತ್ತಾರೋ ಅಷ್ಟೇ ಯೂನಿಟ್ ವಿದ್ಯುತ್ ಉಚಿತ ಎಂದು ಷರತ್ತು ವಿಧಿಸಿ ಜನರಿಗೆ ಮೋಸ ಮಾಡಿದೆ ಎಂದರು.

ಪದವೀಧರ ನಿರುದ್ಯೋಗಿಗಳಿಗೆ ತಿಂಗಳಿಗೆ ೧,೫೦೦-೩೦೦೦ ರೂ. ನೀಡುವು ದಾಗಿ ಆಶ್ವಾಸನೆ ನೀಡಿದ್ದರು. ಸರ್ಕಾರ ಬಂದ ಮೇಲೆ ೨೦೨೨-೨೦೨೩ನೇ ಸಾಲಿನಲ್ಲಿ ಉತ್ತೀರ್ಣರಾದ ಪದವೀದರ ಯುವಕ, ಯುವತಿಯರಿಗೆ ಮಾತ್ರ ಎಂದು ಷರತ್ತು ವಿಧಿಸಿದೆ.

೨೦೨೦-೨೦೨೧, ೨೦೨೧-೨೦೨೨ ಸಾಲಿನಲ್ಲಿ ತೇರ್ಗಡೆಯಾದ ಪದವೀದರರು ನಮಗೂ ಈ ನಿರುದ್ಯೋಗ ಭತ್ಯೆ ಬರುತ್ತದೆ ಎಂದು ಭಾವಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿದ್ದರು. ಈಗ ಹಾಕಿರುವ ಈ ಷರತ್ತಿನಿಂದ ಹಿಂದಿನ ಸಾಲಿನಲ್ಲಿ ತೇರ್ಗ ಡೆಯಾದ ನಿರುದ್ಯೋಗಿ ಪದವೀದರರಿಗೆ ಅನ್ಯಾಯವಾಗಿದೆ ಎಂದು ದೂರಿದರು.

ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೂಢೀಕರಣ ಹೇಗೆ ಮಾಡ ಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯನವರು ಸ್ಪಷ್ಟನೆ ನೀಡಿಲ್ಲ. ಈ ಸಂಬಂಧ ರಾಜ್ಯ ಸರ್ಕಾರ ರಾಜ್ಯದ ಜನರಿಗೆ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು. ಪೆಟ್ರೋಲ್, ಡೀಸಲ್, ಮದ್ಯದ ಬೆಲೆಗಳನ್ನು ಏರಿಕೆ ಮಾಡುವು ದರಿಂದ, ಮುದ್ರಣ ಶುಲ್ಕ ಹೆಚ್ಚಳ ಮಾಡುವ ಮೂಲಕ, ಪೊಲೀಸ್ ಇಲಾಖೆ ಮೂ ಲಕ ಹೆಚ್ಚು ದಂಢ ಸಂಗ್ರಹ, ಜಮೀನು ಕಂದಾಯಗಳನ್ನು ಹೆಚ್ಚಳ ಮಾಡುವ ಸರ್ಕಾರ ಆದಾಯ ಕ್ರೂಢೀಕರಿಸಲು ಮುಂದಾಗಿದೆ ಎಂಬ ಮಾಹಿತಿ ಇದ್ದು, ಸರ್ಕಾರ ಯಾವುದೇ ವಸ್ತು ಅಥವಾ ಹೆಚ್ಚುವರಿಗೆ ತೆರಿಗೆ ಹೇರುವ ಮೂಲಕ ಈ ಯೋಜನೆಗಳನ್ನು ಜಾರಿ ಮಾಡ ಬೇಕು. ತಪ್ಪಿದಲ್ಲಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು.

ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಗ್ಗೆ ಜಾಗೃತಿ ಮೂಡಿಸಲು ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಚಿಕ್ಕಮಗಳೂ ರು ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಜಾಥಾ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಕಚೇರಿ ಆವರಣದಲ್ಲಿ ಗಿಡ ನೆಡುವ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಹೇಳಿದರು. ಈ ಸಂದರ್ಭ ದಲ್ಲಿ ಬಿಜೆಪಿ ನಗರಾ ಧ್ಯಕ್ಷ ಮಧುಕುಮಾರ್ ರಾಜ್ ಅರಸ್ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು