News Kannada
Tuesday, March 19 2024
ಚಿಕಮಗಳೂರು

ಚಿಕ್ಕಮಗಳೂರು: ಕಾಫಿ ನಾಡಿಗೆ ದಕ್ಕೀತೆ ಮಂತ್ರಿ ಭಾಗ್ಯ, ಹೈಕಮಾಂಡ್‌ನತ್ತ ಕೈ ಶಾಸಕರ ಚಿತ್ತ

Minister bhagya for coffee land, MLAs turn their attention towards high command
Photo Credit : News Kannada

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಕಳೆದ ಎರಡು ದಶಕಗಳಿಂದ ಬಿಜೆಪಿ ಭದ್ರೆಕೋಟೆಯಾಗಿತ್ತು. ಸ್ಥಳೀಯ ಸಂಸ್ಥೆಯಿಂದ ಹಿಡಿದು ವಿಧಾನಸಭೆ, ಲೋಕಸಭೆವರೆಗೂ ಬಿಜೆಪಿ ಜನಪ್ರತಿನಿಧಿಗಳು ಆಯ್ಕೆ ಯಾಗಿದ್ದರು.

ಈ ಮೂಲಕ ಕಾಂಗ್ರೆಸ್ ಶೂನ್ಯ ಸಾಧನೆ ಮೂಲಕ ಜಿಲ್ಲೆಯಲ್ಲಿ ಹೇಳ ಹೆಸರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಂಗ್ರೆಸ್ ಗೆ ಸಂಜೀವಿನಿಯಂತೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಿಂದ ಐದಕ್ಕೆ ಐದು ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಪಕ್ಷಕ್ಕೆ ಮರುಜೀವ ತಂದುಕೊಟ್ಟಿದ್ದಾರೆ.

ಈ ಮೂಲಕ ಶಾಸಕರು, ಜಿಲ್ಲೆಯ ಜನತೆ ಮಂತ್ರಿಗಿರಿಯ ನಿರೀಕ್ಷೆಯಲ್ಲಿ ದ್ದಾರೆ. ಚಿಕ್ಕಮಗಳೂರು ಜಿಲ್ಲೆ ರಾಜಕೀಯಕ್ಕೆ ಹಲವು ನಾಯಕರನ್ನು ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದು ಕಾಲದಲ್ಲಿ ಜಿಲ್ಲೆಯಿಂದ ಆಯ್ಕೆಯಾದ ಎರಡರಿಂದ ಮೂವರು ಮಂತ್ರಿಗಳಾಗಿದ್ರು. ಇದೀಗ ಮತ್ತೆ ಅದೇ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಜಿಲ್ಲೆಯಿಂದ ೫ ವಿಧಾನಸಭಾ ಕ್ಷೇತ್ರದಿಂದ ಕೈ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಇದು ಸಹಜವಾಗಿ ಜಿಲ್ಲೆಗೆ ಮಂತ್ರಿಗಿರಿ ಭಾಗ್ಯ ದೊರೆಯುಲಿದೆ ಎನ್ನುವ ಚರ್ಚೆ ಆರಂಭವಾಗಿದೆ.

ನಕ್ಸಲ್‌ಪೀಡಿತ ಜಿಲ್ಲೆಗೆ ಮೂಲಸೌಕರ್ಯಗಳ ಸಮಸ್ಯೆ: ತರೀಕೆರೆ, ಶೃಂಗೇರಿಯಿಂದ ಜೆ.ಹೆಚ್. ಶ್ರೀನಿವಾಸ್, ಟಿ.ಡಿ.ರಾಜೇಗೌಡ ಸತತವಾಗಿ ಎರಡನೇ ಭಾರೀಗೆ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಇನ್ನು ಉಳಿದ ಮೂರು ಕ್ಷೇತ್ರದಿಂದ ಹೊಸದಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಹೀಗಾಗಿ ಜಿ.ಹೆಚ್. ಶ್ರೀನಿವಾಸ್ ಅಥವಾ ಟಿ.ಡಿ.ರಾಜೇಗೌಡರಿಗೆ ಮಂತ್ರಿಗಿರಿ ಸಿಗಲಿದೆ ಎನ್ನುವ ರಾಜಕೀಯ ಚರ್ಚೆ ಆರಂಭವಾಗಿದೆ. ಚಿಕ್ಕಮಗಳೂರು ಜಿಲ್ಲೆ ಹಲವು ಸಮಸ್ಯೆಗಳನ್ನು ಒಳಗೊಂಡಿರುವ ಜಿಲ್ಲೆಯಾಗಿದೆ. ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಭಾಗಗಳು ನಕ್ಸಲ್ ಪೀಡಿತ ಪ್ರದೇಶವಾಗಿದ್ದು, ಹಲವು ಸಮಸ್ಯೆಗಳಿಂದ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದಾರೆ.

ಹೊಂದಾಣಿಕೆ ಕೊರತೆಯಿಂದ ಮಂತ್ರಿಗಿರಿ ವಂಚನೆ: ಕಳೆದ ಭಾರೀ ಬಿಜೆಪಿ ಸರ್ಕಾರದಲ್ಲಿ ಇಬ್ಬರ ಹೆಸರು ಪ್ರಬಲವಾಗಿ ಕೇಳಿಬಂದರೂ ಹೊಂದಾ ಣಿಕೆಯ ಕೊರತೆಯಿಂದ ಮಂತ್ರಿಗಿರಿಯ ಸ್ಥಾನ ಕೈತಪ್ಪಿ ಹೋಗುತಿತ್ತು. ಆದ್ರೆ ಈ ಭಾರಿ ನೂತನವಾಗಿ ಆಯ್ಕೆ ಆಗಿರುವ ಐವರು ಶಾಸಕರು ಒಗ್ಗೂಡಿ ಮುಂತ್ರಿ ಸ್ಥಾನಕ್ಕೆ ಒತ್ತಾಯಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಮಂತ್ರಿ ಸ್ಥಾನದಿಂದ ದೊರಉಳಿದಿದೆ. ಉಸ್ತುವಾರಿ ಸಚಿವರು ಕೂಡ ಪರಜಿಲ್ಲೆಗಳಿಂದ ಬಂದ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರಲ್ಲೂ ಮೈತ್ರಿ ಸರ್ಕಾರ, ಬಿಜೆಪಿ ನೇತೃತ್ವದಲ್ಲಿ ಬಂದ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ಶಾಸಕರು ವಂಚಿತರಾಗಿದ್ದರು. ಆದ್ರೆ ಈ ಭಾರೀ ಚಿಕ್ಕಮಗಳೂರು ಜಿಲ್ಲೆಯು ಐವರು ಕಾಂಗ್ರೆಸ್ ಶಾಸಕರನ್ನು ಹೊಂದಿರುವ ಕಾರಣಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಪ್ರಾತಿನಿದ್ಯ ದೊರೆಯುವುದೇ ಎನ್ನುವುದನ್ನು ಕಾದುನೋಡಬೇಕಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು