News Karnataka Kannada
Saturday, April 20 2024
Cricket
ಚಿಕಮಗಳೂರು

ಚಿಕ್ಕಮಗಳೂರು: ಅವಧಿಯೊಳಗೆ ಟೆಕ್ಸ್‌ಟೈಲ್ ಪಾರ್ಕ್ ಆರಂಭ – ಶಾಸಕ ತಮ್ಮಯ್ಯ ಭರವಸೆ

Textile Park to be set up within the stipulated time: MLA Thammaiah
Photo Credit : News Kannada

ಚಿಕ್ಕಮಗಳೂರು: ಟೆಕ್ಸ್‌ಟೈಲ್ ಪಾರ್ಕ್‌ನ್ನು ಅವಧಿ ಮುಗಿಯುವುದರೊಳಗೆ ಕ್ಷೇತ್ರದಲ್ಲಿ ಆರಂಭಿಸಬೇಕೆಂಬ ಛಲ ಇದೆ ಎಂದು ನೂತನ ಶಾಸಕ ಎಚ್.ಡಿ.ತಮ್ಮಯ್ಯ ನುಡಿದರು.

ಕರ್ನಾಟಕ ಸ್ಟೇಟ್ ಟೈಲರ್‍ಸ್ ಅಸೋಸಿಯೇಷನ್ ಕ್ಷೇತ್ರ ಮತ್ತು ನಗರ ಸಮಿತಿ ಸಂಯುಕ್ತವಾಗಿ ಸುವರ್ಣ ಮಾಧ್ಯಮ ಭವನದಲ್ಲಿ ಇಂದು ಆಯೋ ಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು.

ದೊಡ್ಡ ಪ್ರಮಾಣದಲ್ಲಿರುವ ಟೈಲರ್ ವೃತ್ತಿ ನಿರತರಿಗೆ ಅನುಕೂಲವಾಗುವಂತೆ ಬೃಹತ್ ಪ್ರಮಾಣದ ಸಿದ್ಧ ಉಡುಪು ತಯಾರಿಕಾ ಘಟಕವನ್ನು ಕ್ಷೇತ್ರದಲ್ಲಿ ಆರಂಭಿಸುವ ಮೂಲಕ ಬಡತನದ ಬೇಗೆಯಲ್ಲಿರುವ ಕುಟುಂಬಗಳಿಗೆ ನೆರವು ನೀಡುವ ಆಸೆ-ಛಲ ತಮ್ಮದೆಂದ ಶಾಸಕರು, ಅಧಿಕಾರ ಶಾಶ್ವತವಲ್ಲ. ಅಧಿ ಕಾರದಲ್ಲಿರುವ ಸಂದರ್ಭದಲ್ಲಿ ಏನಾ ದರೂ ನೆನಪಿಟ್ಟುಕೊಳ್ಳುವ ಕಾರ್‍ಯ ಮಾಡ ಬೇಕೆಂಬ ಅಭಿಲಾಷೆ ಇದೆ ಎಂದರು.

ಬುರ್ಖಾಧಾರಿ ಮಹಿಳೆಯರೂ ಸೇರಿದಂತೆ ಇಲ್ಲಿರುವ ಹಲವರ ಪರಿಚಯವಿಲ್ಲ. ವೈಯಕ್ತಿಕವಾಗಿ ಭೇಟಿಮಾಡಿ ಕೋರಲಾಗದಿದ್ದರೂ ಬದಲಾವಣೆಯನ್ನು ಬಯಸಿ, ಬೆಂಬಲಿಸಿ ಮತ ನೀಡಿದ ಪರಿಣಾಮ ಶಾಸಕ ಸ್ಥಾನ ಸಿಕ್ಕಿದೆ. ಕೇಳಿರದಿದ್ದರೂ ಮತ ನೀಡಿರುವ ಟೈಲರ್‌ಗಳಿಗೆ ನಿವೇಶನದ ಕೊಡುಗೆ ನೀಡಬೇಕೆಂಬ ಅಪೇಕ್ಷೆ ಇದೆ. ಟೈಲರ್‍ಸ್ ಭವನ ನಿರ್ಮಾಣಕ್ಕಾಗಿ ಸಿ.ಎ.ನಿವೇಶನ ವನ್ನು ಸರ್ಕಾರದ ವತಿಯಿಂದ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿ ಇದಕ್ಕೆ ಪಾವತಿಸಬೇಕಾದ ಮೊತ್ತದಲ್ಲಿ ಒಂದಷ್ಟು ಅಂಶವನ್ನು ವೈಯಕ್ತಿಕವಾಗಿ ನೀಡುವುದಾಗಿ ಭರವಸೆಯಿತ್ತರು.

ಸಂಘಟನೆಯಲ್ಲಿ ಬಲವಿದೆ. ಯಾವುದೇ ವೃತ್ತಿನಿರತರು ಒಟ್ಟಾಗಿ ಕೇಳಿದಾಗ ಅಧಿಕಾರಿಗಳು-ರಾಜಕಾರ ಣಿಗಳು ಸ್ಪಂದಿಸಲೇ ಬೇಕಾಗುತ್ತದೆ. ಸಂಘದಲ್ಲಿ ಶಕ್ತಿ ಇರುತ್ತದೆ. ಸಂಘಟನೆ ಮತ್ತು ಹೋರಾಟ ಬಲದಿಂದಲೇ ಹಂತ ಹಂತವಾಗಿ ಬೆಳೆದು ಶಾಸಕ ಸ್ಥಾನದಲ್ಲಿರುವುದನ್ನು ಸ್ಮರಿಸಿದ ತಮ್ಮಯ್ಯ, ಹಿರೇಮಗಳೂರಿನ ಶ್ರೀದೇವಿ ಯುವಕ ಸಂಘದ ಅಧ್ಯಕ್ಷರಾಗಿ, ನಾಗರಿಕ ಹೋರಾಟ ಸಮಿತಿ ಮತ್ತು ಕನ್ನಡಪರ ಸಂಘಟನೆಗಳ ಹೋರಾಟದಿಂದ ಅನೇಕ ಬಾರಿ ಜೈಲು ಸೇರಿದ್ದು ಅಭಿಮಾನದ ಸಂಗತಿ. ಕಳವು, ಕೊಲೆ ಕೆಟ್ಟಕೆಲಸ ಮಾಡಿ ಜೈಲುಸೇರಿದರೆ ಅವಮಾನ. ಆದರೆ ಹೋರಾಟಮಾಡಿ ಪೊಲೀಸರ ವಶವಾದರೆ ಹೆಮ್ಮೆ ಮೂಡುತ್ತದೆ.

ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ವೀರಶೈವ ಧರ್ಮ ಸಂಸ್ಥಾಪಕರಾದ ಶ್ರೀರೇಣುಕರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂ ದಲೇ ವಿಶ್ವಕ್ಕೆ ಶಾಂತಿ ಎಂದಿದ್ದರು. ೧೨ನೆಯ ಶತಮಾನದ ಬಸವಣ್ಣನವರು ಇವನಾರವ ಇವನಾರವ ಎನ್ನದೆ ಇವನಮ್ಮವ ಎಂದು ಎಲ್ಲರನ್ನೂ ಒಳಗೊಳ್ಳುವ ಸೂತ್ರ ಹೊಂದಿದ್ದರು. ಜನಪ್ರತಿನಿಧಿಯಾಗಿ ಸಾಮಾನ್ಯ ಜನರು ಶಾಂತಿ-ನೆಮ್ಮದಿಯಿಂದ ಭಯಮುಕ್ತ ರಾಗಿ ಬದುಕಬೇಕೆಂಬುದೇ ತಮ್ಮ ಆಶಯ ಎಂದರು.

ಜನಸಾಮಾನ್ಯರ ಭಾವನೆ ಕೆರಳಿಸಿ ಬದುಕಿನ ಜೊತೆಗೆ ಆಟವಾಡಬಾರದು ಎಂಬುದು ಕಾಂಗ್ರೇಸ್ ಪಕ್ಷದ ನೀತಿ. ಇದನ್ನು ನಾಡಿನ ಜನ ಬೆಂಬಲಿಸಿದ್ದಾರೆ. ಐದು ಘೋಷಣೆಗಳು ಜನರ ಬದುಕಿಗೆ ಪೂರಕವಾದವು. ಅವುಗಳನ್ನು ಈಡೇರಿಸುವ ಪ್ರಮಾಣಿಕ ಪ್ರಯತ್ನ ರಾಜ್ಯಸರ್ಕಾರ ಮಾಡುತ್ತಿದ್ದರೂ ಅಸ್ತಿತ್ವದ ಭೀತಿಯಿಂದ ಕೆಲವರು ಕೂಗಾಡುತ್ತಿ ದ್ದಾರೆ. ಸರ್ಕಾರ ಬಂದು ವಾರದೊಳಗೆ ಮುಷ್ಕರ, ಪ್ರಚೋದನೆ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆಂದು ಬಿಜೆಪಿಯನ್ನು ಛೇಡಿಸಿದ ಶಾಸಕರು, ಯಾವುದಕ್ಕೂ ಸ್ವಲ್ಪ ತಾಳ್ಮೆ, ಸಮಾಧಾನ ಇದ್ದರೆ ಖಂಡಿತ ಒಳಿತಾಗುತ್ತದೆ ಎಂದರು.

ಹಲವುವರ್ಷಗಳಿಂದ ಭಯ-ಭೀತಿಯಿಂದ ಕ್ಷೇತ್ರದ ಜನ ಬದುಕುವ ಸ್ಥಿತಿ ನಿರ್ಮಾಣವಾಗಿತ್ತು. ಮೇ ೧೩ರ ನಂತರ ಅಂತಹ ಸ್ಥಿತಿ ಇಲ್ಲ. ಜನ ನಿರ್ಭೀತಿಯಿಂದ ಮಾತನಾಡುವಂ ತಾಗಿದೆ. ಜನರ ಭಾವನೆ ಅರ್ಥಮಾಡಿ ಕೊಳ್ಳುವ ಶಾಸಕ ಆಯ್ಕೆಗೊಂಡಿದ್ದಾನೆ. ಮತ ಹಾಕಿದವರೂ- ಹಾಕದವರೂ ಎಂಬ ತಾರತಮ್ಯವಿಲ್ಲದೆ ಕೆಲಸ ಮಾಡುವ ಅಪೇಕ್ಷೆ ಇದೆ. ಮುಂದಿನ ಬಾರಿ ಎಲ್ಲರೂ ಅಭಿಮಾನದಿಂದ ಪ್ರೀತಿಯಿಂದ ಗೆಲ್ಲಿಸುವಂತ ವಾತಾವರಣ ಸೃಷ್ಟಿಯಾಗಬೇಕು ಎಂದ ತಮ್ಮಯ್ಯ, ಶಾಸಕ ಅನ್ನುವುದಕ್ಕಿಂತ ಜನಸೇವಕನಾಗಿ ಮನ್ನಣೆ ಗಳಿಸಬೇಕು. ನಾನು ಎಂಬ ಅಹಂಕಾರ ಬಾರದಂತೆ ಎಚ್ಚರಿಕೆ ವಹಿಸುವುದಾಗಿ ನುಡಿದರು.

ಕೆಎಸ್‌ಟಿಎ ರಾಜ್ಯ ಉಪಾಧ್ಯಕ್ಷ ಸಯ್ಯದ್‌ರೆಹಮಾನ್ ಮಾತನಾಡಿ ಟೈಲರ್‌ಗಳಿಂದ ನಾಗರೀಕತೆ ಉತ್ತಮ ವಾಗಿ ಬೆಳೆದಿದೆ. ಸಮಾಜಕ್ಕೆ ಟೈಲರ್‌ಗಳ ಸೇವೆ ಅತ್ಯಮೂಲ್ಯ. ಈ ಕೆಲಸದಲ್ಲಿ ಜಾತಿ-ಧರ್ಮ ಪರಿಗಣನೆಗೆ ಬರುವು ದಿಲ್ಲ. ವೃತ್ತಿನಿರತರೆಲ್ಲ ಒಂದೇ ಎಂಬ ಭಾವ ಅಗತ್ಯ. ಶೇ.೯೦ರಷ್ಟು ಟೈಲರ್ ಗಳು ಬಡತನದಲ್ಲಿ ಹುಟ್ಟಿ ಬದುಕುತ್ತಿರು ವವರು. ಮಹಿಳೆಯರೂ ದೊಡ್ಡ ಪ್ರಮಾ ಣದಲ್ಲಿ ಈ ವೃತ್ತಿಯನ್ನು ಅನುಸರಿಸುತ್ತಾ ಕುಟುಂಬದ ಬೆಳವಣಿಗೆಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ.

ಕೆಎಸ್‌ಟಿಎ ಕ್ಷೇತ್ರ ಮತ್ತು ನಗರಸಮಿತಿ ಅಧ್ಯಕ್ಷ ಫೈರೋಜ್‌ಆಲಿ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಗೌರವಾಧ್ಯಕ್ಷ ಮೈಲಾರಿರಾವ್ ಮಾತ ನಾಡಿದರು. ಪ್ರಧಾನಕಾರ್‍ಯದರ್ಶಿ ಮನೋಹರ, ಖಜಾಂಚಿ ಶಶಿಧರ, ಕಾರ್‍ಯದರ್ಶಿಗಳಾದ ಸೌಮ್ಯನಾಗರಾಜ್ ಮತ್ತು ಸುರೇಶ್‌ಪಗಡಿ, ಚಂದ್ರಕುಮಾರ್ ಶಾಸಕರನ್ನು ಸನ್ಮಾನಿಸಿದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಂಜೇಗೌಡ, ಉಪಾ ಧ್ಯಕ್ಷ ಅನ್ಸರ್‌ಆಲಿ, ಉಪ್ಪಳ್ಳಿ ಲೋಕೇಶ್ ಮತ್ತು ತಾಜ್ ಮತ್ತಿತರರು ವೇದಿಕೆಯಲ್ಲಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು