News Karnataka Kannada
Saturday, April 20 2024
Cricket
ಚಿಕಮಗಳೂರು

ಬಿಜೆಪಿ ಸರ್ಕಾರದ ಭ್ರಷ್ಟಾಚಾರ ತನಿಖೆ: ಎಸ್.ಎಲ್.ಬೋಜೆಗೌಡ ಆಗ್ರಹ

Activist's class for Boje Gowda: Audio goes viral
Photo Credit : News Kannada

ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟ ಚಾರವನ್ನು ತನಿಖೆಗೆ ಒಳಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಹೆಸರಿನಲ್ಲಿ ನಡೆ ದಿರುವ ಭ್ರಷ್ಟಾಚಾರವನ್ನು ಗಮನಿ ಸಿರುವ ಮತದಾರರು ಈ ಚುನಾ ವಣೆಯಲ್ಲಿ ತೀರ್ಪು ನೀಡಿದ್ದಾರೆ. ಸಿ.ಟಿ.ರವಿ ತಪ್ಪು ಮಾಡಿದ್ದಾರೋ ಅಥ ವಾ ಅವರ ಹಿಂಬಾಲಕರು ಮಾಡಿ ದ್ದಾರೊ ಗೊತ್ತಿಲ್ಲ. ಒಟ್ಟಾರೆ ಸಿ.ಟಿ.ರವಿ ಅವರನ್ನು ಜನರು ಸೋಲಿಸಿದ್ದಾರೆ ಎಂದರು.

ಚುನಾವಣೆಯಲ್ಲಿ ಗೆದ್ದವರು ಬೀಗದೆ. ಸೋತವರು ಸೋಲೊಪ್ಪಿಕೊ ಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಸಹಜ ಪ್ರಕ್ರಿಯೆ. ಅನೇಕರು ಚುನಾ ವಣೆಯಲ್ಲಿ ಸೋತು, ಗೆದ್ದು ಪಾಠ ಕಲಿತ್ತಿದ್ದಾರೆ. ವಿಧಾನಸಭೆ ಚುನಾ ವಣೆಯಲ್ಲಿ ಸಿ.ಟಿ. ರವಿ ಹಣದಿಂದ ಎಲ್ಲವೂ ಆಗುತ್ತದೆ. ಏನುಬೇಕಾ ದರೂ ಮಾಡಬಹುದು ಎಂಬುದಕ್ಕೆ ಮತ್ತು ಅಭಿವೃದ್ದಿ ಹೆಸರಿನಲ್ಲಿ ನಡೆದಿ ರುವ ಭ್ರಷ್ಟಚಾರಕ್ಕೆ ಮತದಾರ ತಕ್ಕ ಉತ್ತರ ನೀಡಿದ್ದಾರೆ ಎಂದರು.

ನೂತನ ಶಾಸಕರ ಮೇಲೆ ಬಹ ಳಷ್ಟು ಜವಬ್ದಾರಿಗಳಿವೆ. ದೌರ್ಜನ್ಯ, ಅಧಿಕಾರ ದುರುಪಯೋಗ ತಡೆ ಗಟ್ಟುವ ಬಗ್ಗೆ ಯೋಚಿಸಿ ತೀರ್ಮಾನ ಕೈಗೊಳ್ಳಬೇಕಿದೆ. ತಾಲೂಕು ಕಚೇರಿ, ನಗರಸಭೆ ಅವ್ಯವಹಾರಿಕ ಕೇಂದ್ರ ವಾಗಿದೆ. ರಾಜಕೀಯ ಸೇವೆ ಎಂಬು ದನ್ನು ಅರಿತು ಕೆಲಸ ನಿರ್ವಹಿಸ ಬೇಕು ಎಂದು ಸಲಹೆ ನೀಡಿದರು.

ಅಮೃತ್, ಒಳಚರಂಡಿ ಕಾಮ ಗಾರಿ ಪೂರ್ಣಗೊಂಡಿಲ್ಲ, ವಾಜಪೇ ಯಿ ಬಡಾವಣೆ ಮೂಲಸೌಕರ್ಯ ಕಲ್ಪಿಸಿಲ್ಲ, ಕೋಟ್ಯಂತರ ರೂ. ಕ್ಷೇತ್ರಕ್ಕೆ ತಂದಿದ್ದರೂ ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ. ಜನರಿಗೆ ಉಪಯೋಗವಾಗಿಲ್ಲ, ಸಿ.ಟಿ.ರವಿ ಅವ ರು ಅಭಿವೃದ್ಧಿ ವಿಷಯದಲ್ಲಿ ಪುಸ್ತಕ ಹೊರತರಲಾಗಿದೆ. ಪುಸ್ತಕದಲ್ಲಿರುವಂತೆ ಕಾಮಗಾರಿಗಳು ನಡೆದಿವೆಯೇ ಎಂದು ಪ್ರಶ್ನಿಸಿದ ಅವರು, ಹಾಗೇ ನಾದರೂ ಇದ್ದರೇ ಒಪ್ಪಿಕೊಳ್ಳುತ್ತೇನೆ ಎಂದರು.

ಗೃಹಮಂಡಳಿ ಬಡಾವಣೆಯ ಸಿಎ ನಿವೇಶನ ಸಾರ್ವಜನಿಕ ಆಸ್ತಿ. ಅದನ್ನು ಸರಕಾರಕ್ಕೆ ವಾಪಸ್ ಕೊಡ ಬೇಕು ಎಂಬ ಅದೇಶವಾಗಿದೆ. ನಿವೇ ಶನ ಹಿಂದಿರು ಗಿಸಲು ಮುಂದಾಗು ವುದು ಒಳ್ಳೆಯದು. ಆಂಜನೇಯ ಸಂಸ್ಥೆ ಹೆಸರಿನಲ್ಲಿ ರಚಿಸಿ ಕೊಂಡಿರುವ ಟ್ರಸ್ಟ್ ಬೋಗಸ್‌ ಎಂದರು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಬಿಜೆಪಿಯವರು ಕಳಿಸಿದ ಅಭ್ಯರ್ಥಿ. ಇದು ಪಂಚರತ್ನ ಯಾತ್ರೆ ವೇಳೆ ತಿಳಿಯಿತು ಎಂದು ಹೇಳಿದರು.

ನಗರಸಭೆ ಸದಸ್ಯರಾದ ಎ.ಸಿ. ಕುಮಾರಗೌಡ, ಗೋಪಿ, ಪರಿಶಿ ಷ್ಟಜಾತಿ ಘಟಕದ ಜಿಲ್ಲಾಧ್ಯಕ್ಷ ದೇವಿ ಪ್ರಸಾದ್, ನಗರ ಅಧ್ಯಕ್ಷ ಚಿದಾನಂದ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇರ್ಷಾದ್ ಅಹಮದ್, ಹರಿ ಪ್ರಸಾ ದ್, ದಿನೇಶ್ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು