News Karnataka Kannada
Saturday, April 27 2024
ಚಿಕಮಗಳೂರು

ಸಹಕಾರಿ ಸಂಸ್ಥೆಗಳ ಸಬಲೀಕರಣಕ್ಕೆ ಹೆಚ್ಚಿನ ಒತ್ತು- ಶಾಸಕ ಹೆಚ್.ಡಿ. ತಮ್ಮಯ್ಯ

Emphasis on empowerment of co-operatives: MLA H.D. Thammaiah
Photo Credit : News Kannada

ಚಿಕ್ಕಮಗಳೂರು: ಚಿಕ್ಕಮಗಳೂರು ಸಹಕಾರಿ ಸಂಸ್ಥೆಗಳ ಸಬಲೀಕರಣಕ್ಕೆ ಸಹಕರಿಸುವುದಾಗಿ ಶಾಸಕ ಎಚ್.ಡಿ.ತಮ್ಮಯ್ಯ ನುಡಿದರು.

ಚಿಕ್ಕಮಗಳೂರು ಪಟ್ಟಣ ಸಹಕಾರ ಬ್ಯಾಂಕ್ ವತಿಯಿಂದ ಇಂದು ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಸಹಕಾರಿ ಬಂಧುಗಳು ನೀಡುತ್ತಿರುವ ಸನ್ಮಾನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.

ಜನತೆಯ ಪ್ರೀತಿ ವಿಶ್ವಾಸ-ಬೆಂಬಲದೊಂದಿಗೆ ಶಾಸಕನಾಗಿ ಆಯ್ಕೆಗೊಂಡು ಕೆಲವು ದಿನಗಳಷ್ಟೇ ಆಗಿದೆ. ನಿನ್ನೆಯಷ್ಟೇ ಜನತಾಬಜಾರ್ ವತಿಯಿಂದ ಸನ್ಮಾನಿಸಿದ್ದು, ಇಂದು ಪಟ್ಟಣ ಸಹಕಾರ ಬ್ಯಾಂಕ್ ಅಭಿನಂದಿ ಸುತ್ತಿದೆ. ಇಂತಹ ಅಭಿನಂದನೆಗೆ ತಾವೆ ಷ್ಟು ಅರ್ಹ ಎಂಬುದು ಯೋಚಿಸು ತ್ತಿದ್ದೇನೆ. ವಾಸ್ತವವಾಗಿ ಐದುವಷ ಆದ ಮೇಲೆ ಪೂರ್ಣ ಅಂಕ ಕೊಡಬೇಕೆಂಬುದು ಇಚ್ಛೆ ಎಂದರು.

ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ದೇವರಲ್ಲಿ ಪ್ರಾರ್ಥಿಸಿದಂತೆ ಅವಧಿಪೂರ್ಣ ಸಾರ್ವಜನಿಕ ಕಳಕಳಿ ಮುಂದುವರೆಯಬೇಕು. ಕ್ಷೇತ್ರದ ಶಾಂತಿ-ಸೌಹಾರ್ದತೆ ಉಳಿಯಬೇಕು. ಅಭಿವೃದ್ಧಿ ಕಾರ್‍ಯಗಳು ಆದ್ಯತೆಯ ಮೇರೆಗೆ ನಡೆಯಬೇಕೆಂಬ ಅಪೇಕ್ಷೆ ಇದೆ. ನಾನು ಎಂಬ ಅಹಂಕಾರ ಎಂದೂ ಬಾರದಂತೆ ಎಚ್ಚರಿಕೆ ವಹಿಸುವುದಾಗಿ ತಮ್ಮಯ್ಯ ನುಡಿದರು.

ಪಟ್ಟಣ ಸಹಕಾರ ಬ್ಯಾಂಕ್ ನಂಜೇಗೌಡರ ನೇತೃತ್ವದಲ್ಲಿ ಉತ್ತಮವಾಗಿ ಕಾರ್‍ಯನಿರ್ವಹಿಸುತ್ತಿದೆ. ಹೃದಯಭಾಗದಲ್ಲಿದ್ದು ಜನರಿಗೆ ಒಳ್ಳೆಯ ಸೇವೆ ಲಭ್ಯವಾಗುತ್ತಿದ್ದು ತಂಡ ಸ್ಪೂರ್ತಿಯೊಂದಿಗೆ ಮುನ್ನಡೆಯುತ್ತಿರು ವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ತಮ್ಮಯ್ಯ, ಸಹಕಾರಿ ಸಂಸ್ಥೆಗಳು ಬಲವರ್ಧನೆಗೊಂಡರೆ ಜನಸಾಮಾನ್ಯರ ಆರ್ಥಿಕ ವ್ಯವಹಾರಗಳು ಸುಲಲಿತವಾಗುತ್ತವೆ ಎಂದರು.

ನೂತನ ಶಾಸಕರಿಗೆ ಮೈಸೂರು ಪೇಟತೊಡಿಸಿ ಶಾಲುಹೊದಿಸಿ ಮಾಲಾ ರ್ಪಣೆ ಮಾಡಿದ ಬ್ಯಾಂಕ್‌ಅಧ್ಯಕ್ಷ ಎಚ್.ಎನ್.ನಂಜೇಗೌಡ ೨೭ವರ್ಷಗ ಳಿಂದ ನಾಗರಿಕ ಸೇವೆಯಲ್ಲಿ ಮುಂದುವರೆಯುತ್ತಿದೆ. ೪,೩೦೦ಕ್ಕೂ ಹೆಚ್ಚು ಸದಸ್ಯರಿದ್ದು ಕೋಟಿರೂ.ಗೂ ಹೆಚ್ಚು ಲಾಭ ಸಂಪಾದಿಸಿದ್ದು ಇನ್ನಷ್ಟು ಸೇವೆ ವಿಸ್ತರಿಸುವ ಆಶಯ ಹೊಂದಿದೆ. ನೂತನ ಶಾಸಕರು ಜನಪರವಾಗಿ ಕಾರ್‍ಯನಿರ್ವಹಿಸುವುದರೊಂದಿಗೆ ಬ್ಯಾಂಕ್‌ನ ಅಭಿವೃದ್ಧಿಗೂ ಪೂರ್ಣ ಸಹಕಾರ ನೀಡುವರೆಂಬ ಆಶಯ ವ್ಯಕ್ತಪಡಿಸಿದರು.

ಉಪಾಧ್ಯಕ ಬಿ.ಎಚ್.ಶ್ರೀಕಾಂತಪೈ, ನಿರ್ದೇಶಕರುಗಳಾದ ಎಂ.ವಿ.ಷಡಕ್ಷರಿ, ಪದ್ಮಾತಿಮ್ಮೇಗೌಡ, ಮಂಜುನಾಥ ಜೋಷಿ, ಜಿ.ರಘು, ಎಂ.ಎಸ್. ಉಮೇಶ್, ಭಗವತಿ ಹರೀಶ್, ಕೆ.ಎಸ್.ಧರ್ಮರಾಜು, ಶಶಿಪ್ರಸಾದ್, ಶೈಲಜಾಮಂಜುನಾಥ, ಸಿ.ಆರ್ .ಮಂಜು, ಕೆ.ಟಿ.ಮಂಜುನಾಥ, ಕೆ.ಡಿ. ಪುಟ್ಟಣ್ಣ, ಮುಖ್ಯಕಾರ್‍ಯನಿರ್ವ ಹಣಾಧಿ ಕಾರಿ ಬಿ.ವಿ.ರಾಘವೇಂದ್ರ, ವ್ಯವಸ್ಥಾಪಕಿ ಶೈಲಾ, ಸದಸ್ಯ ಪ್ರಸನ್ನ ಸೇರಿದಂತೆ ಸಿಬ್ಬಂ ದಿಗಳು. ಷೇರುದಾರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು