News Karnataka Kannada
Saturday, April 27 2024
ಚಿಕಮಗಳೂರು

ಮರುಬಳಕೆ ವಸ್ತುಗಳ ಸಂಗ್ರಹ ಮಳಿಗೆಗೆ ಶಾಸಕ ಹೆಚ್.ಡಿ. ತಮ್ಮಯ್ಯ ಚಾಲನೆ

MLA H.D. Thammaiah inaugurates recycled material collection shop
Photo Credit : News Kannada

ಚಿಕ್ಕಮಗಳೂರು: ಮನುಷ್ಯ ತನ್ನ ದೇಹವನ್ನು ಎಷ್ಟರ ಮಟ್ಟಿಗೆ ಶುಚಿತ್ವ ಹೊಂದುವನು ಅದೇ ರೀತಿಯಲ್ಲಿ ನಗರವನ್ನು ಶುಚಿತ್ವದಿಂದ ಕೂಡಿರುವ ದೃಷ್ಟಿಯಿಂದ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದ ವಸ್ತುಗಳನ್ನು ಒಂದೆಡೆ ಶೇಖರಿಸಿ ಪುನಃ ಅವುಗಳನ್ನು ಮರುಬಳಕೆ ಮಾಡಲು ಮಳಿಗೆಗಳನ್ನು ಸ್ಥಾಪಿಸಲಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

ನಗರದ ಎಂ.ಜಿ.ರಸ್ತೆಯ ನಗರಸಭಾ ಕಟ್ಟಡದಲ್ಲಿ ಪೌರಾಡಳಿತ ನಿರ್ದೇಶಲಯ ಬೆಂಗಳೂರು ಇವರ ನಿರ್ದೇಶದಂತೆ ನಗರದಲ್ಲಿ ನನ್ನ ಲೈಫ್, ನನ್ನ ಸ್ವಚ್ಚ ನಗರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರುಬಳಕೆ ವಸ್ತುಗಳ ಸಂಗ್ರಹಣೆಯ ನೂತನ ಮಳಿಗೆಯನ್ನು ಭಾನುವಾರ ಚಾಲನೆ ನೀಡಿ ಅವರು ಮಾತನಾ ಡುತ್ತಿದ್ದರು.

ಕಾಂಗ್ರೆಸ್ ಪಕ್ಷ ಅಧಿಕಾರ ಪಡೆದುಕೊಂಡ ನಂತರ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಗರ ಸ್ವಚ್ಚತೆ ಕುರಿತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ನಗರಸಭಾಗೂ ತಮಗೂ ಹಿಂದಿನಿಂದಲೂ ಅನೇಕ ವರ್ಷಗಳ ಅವಿಭಾವ ಸಂಬಂಧವಿದೆ. ನಗರ ಸ್ವಚ್ಚತೆ ಕುರಿತು ಕಳೆದ ಕೆಳ ತಿಂಗಳಿನಿಂದ ಕೆಲಸ ಪ್ರಾರಂಭವಾಗಿದ್ದು ಇದೀಗ ಅಧಿಕೃತವಾಗಿ ಪ್ರಾರಂಭಿಸಿ ಜನಸೇವೆಗೆ ನೀಡಲಾಗಿದೆ ಎಂದರು.

ನಗರದಲ್ಲಿ ಮರುಬಳಕೆಗೆ ವಸ್ತುಗಳನ್ನು ಶೇಖರಿಸಲು ಕೆಲವು ನಿಯಮಗಳನ್ನು ಅನುಸರಿಸುವ ನಿಟ್ಟಿನಲ್ಲಿ ಆಟಿಕೆ ವಸ್ತುಗಳು, ಬಟ್ಟೆ, ಹಳೆಯ ಜೀನ್ಸ್, ಸಮವಸ್ತ್ರ, ಸೀರೆಗಳು, ದಿನಪತ್ರಿಕೆ, ಹಳೆಯ ಪುಸ್ತಕಗಳು, ಪೆನ್, ಪ್ಲಾಸ್ಟಿಕ್ ಚೀಲ, ಬ್ಯಾಗ್‌ಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಾರ್ವಜನಿಕರು ನೇರವಾಗಿ ಮಳಿಗೆಗಳಿಗೆ ನೀಡಿದರೆ ಗೌರವಯುತ ವಾಗಿ ಸಣ್ಣಮಟ್ಟಿನ ಬಹುಮಾನಗಳನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು ಎಂದು ಹೇಳಿದರು.

ಚಿಕ್ಕಮಗಳೂರು ತಾಲ್ಲೂಕು ಪ್ರವಾಸಿಗರ ತಾಣವಾಗಿರುವ ಹಿನ್ನೆಲೆಯಲ್ಲಿ ಅತಿಹೆಚ್ಚು ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ನಗರದ ಐದು ಕಡೆಗಳಲ್ಲಿ ತ್ಯಾಜ್ಯ ಸಂಗ್ರಹಣೆ ಶೇಖರಿಸುವ ಮಳಿಗೆಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಯಾವುದೇ ಉಪಯೋಗಕ್ಕೆ ಬಾರದ ವಸ್ತುಗಳನ್ನು ಮಳಿಗೆಗಳಿಗೆ ನೀಡಿದರೆ ಉಪಯೋಗಕ್ಕೆ ಬರುವ ವಸ್ತುಗಳನ್ನು ಮರುಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ನಗರ ಸ್ವಚ್ಚತೆ ಕುರಿತು ೨೦೦೧ರಲ್ಲಿ ಕಾಂಗ್ರೆಸ್‌ನ ನಗರಸಭಾ ಅಧ್ಯಕ್ಷರಾಗಿದ್ದ ಎಲ್.ವಿ.ಬಸವರಾಜ್‌ರವರ ನೇತೃತ್ವ ದಲ್ಲಿ ಮನೆ ಮನೆ ಕಸ ಸಂಗ್ರಹಣೆ ಕುರಿತು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಸ್ವಚ್ಚತೆ ಕುರಿತು ಕಾರ್ಯಕ್ರಮಕ್ಕೆ ಅತಿಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡು ಮನ್ನಣೆ ಗಳಿಸಿದೆ ಎಂದರು.

ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ ಸಾರ್ವಜನಿಕರು ಪ್ರತಿನಿತ್ಯ ಉಪಯೋಗಿಸುವ ಹಾಗೂ ಹಳೆಯ ವಸ್ತುಗಳನ್ನು ಮರುಬಳಕೆ ಮಾಡಲು ಸರ್ಕಾರವು ನಗರಸಭಾ ಮೂಲಕ ಕಾರ್ಯಕ್ರಮವನ್ನು ಚಾಲನೆ ನೀಡಲಾಗಿದೆ. ನಗರದ ಐದು ಕಡೆಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಿ ಸಾರ್ವಜನಿಕರಿಂದ ಉಪಯೋಗಕ್ಕೆ ಬಾರದ ವಸ್ತುಗಳನ್ನು ಸಂಗ್ರಹ ಮಾಡಲು ಮಳಿಗೆಯನ್ನು ಶಾಸಕರು ಅಧಿಕೃತವಾಗಿ ಪ್ರಾರಂಭಿಸಿದ್ದಾರೆ ಎಂದರು.

ಚಿಕ್ಕಮಗಳೂರು ನಗರದ ಜನತೆಗೆ ನಗರವನ್ನು ಸುಂದರವಾಗಿಡುವ ನಿಟ್ಟಿನಲ್ಲಿ ಹಳೆಯ ವಸ್ತುಗಳನ್ನು ಬೀಸಾ ಡುವ ಬದಲು ಮಳಿಗೆಗಳಿಗೆ ನೇರವಾಗಿ ನೀಡಿದರೆ ನಗರವನ್ನು ಇನ್ನಷ್ಟು ಮಾಲಿನ್ಯಮುಕ್ತಗೊಳಿಸಲು ಮುಂದಾಗಬ ಹುದು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭಾ ಪ್ರಬಾರಿ ಪೌರಾಯುಕ್ತೆ ಲತಾಮಣಿ, ಸದಸ್ಯರಾದ ಇಂದಿರಾ ಶಂಕರ್, ಶಾದಬ್ ಆಲಂ, ಲಕ್ಷ್ಮಣ್, ಪರಮೇಶ್, ರಾಮನಹಳ್ಳಿ ಲಕ್ಷ್ಮಣ್, ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಕ ಈಶ್ವರ್, ಕಂದಾಯ ಅಧಿಕಾರಿ ರಮೇಶ್ ಬಾಬು, ರೆವಿನ್ಯೂ ಇನ್ಸ್‌ಪೆಕ್ಟರ್ ಶಿವಾನಂದ ಮತ್ತಿತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು