ಚಿಕ್ಕಮಗಳೂರು: ಪತ್ರಿಕಾ ವಿತರಕರಿಗೆ ಪ್ರಧಾನ ಮಂತ್ರಿ ಗಳ ಸ್ವನಿಧಿ ಯೋಜನೆಯಿಂದ ಹತ್ತು ಸಾವಿರದಿಂದ ಒಂದು ಲಕ್ಷ ವರಗೆ ಬಡ್ಡಿ ರಹಿತ ಸಾಲವನ್ನು ಕೊಡಲಾಗುವುದು ಇದರ ಸದುಪಯೋಗ ಪಡಿಸಿಕೊಳ್ಳಲು ಪತ್ರಿಕಾ ವಿತರಕರಿಗೆ ಸಂಸದರಾದ ಶೋಭಾ ಕರಂದ್ಲಾಜೆ ತಿಳಿಸಿದರು.
ನಗರದ ಪತ್ರಿಕಾ ವಿತರಕರನ್ನು ಬೆಳಿಗ್ಗೆ ಐದು ಗಂಟೆಗೆ ಭೇಟಿ ಮಾಡಿ ಮಾತನಾಡಿದರು ಚಿಕ್ಕಮಗಳೂರು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾದ ಶ್ರೀಧರ್ ಮಾತನಾಡಿ ಮಳೆ ಗಾಳಿ ಚಳಿಯನ್ನು ಲೆಕ್ಕಿಸದೆ ಪತ್ರಿಕೆಯನ್ನು ವಿತರಣೆ ಮಾಡುತ್ತಿದ್ದಾರೆ.
ವಿತರಕರಿಗೆ ಇನ್ನಷ್ಟು ಸೌಲಭ್ಯಗಳನ್ನು ಸಿಗುವಂತೆ ಮಾಡಬೇಕು ಎಂದು ಸಂಸದರಿಗೆ ತಿಳಿಸಿದರು. ವಿತರಕ ನಂಜುಂಡ ಮಾತನಾಡಿ ಪತ್ರಿಕೆಯನ್ನು ಜೋಡಿಸಲು ಸೂಕ್ತವಾದ ಸ್ಥಳವನ್ನು ಗುರುತಿಸಿ ನಮಗೆ ನಗರ ಸಭೆ ಹಾಗೂ ಜಿಲ್ಲಾಡಳಿತ ವತಿಯಿಂದ ಶೆಡ್ ಅಥವಾ ಮಳಿಗೆಗಳನ್ನು ನಿರ್ಮಾಣ ಮಾಡಿಕೋಡಬೇಕೆಂದು ಹೇಳಿದರು.
ನಗರ ಸಭೆ ವತಿಯಿಂದ ಸೂಕ್ತವಾದ ಸ್ಥಳವನ್ನು ಗುರುತಿಸಿಕೊಟ್ಟರೆ ಸಂಸದರ ನಿಧಿಯಿಂದ ಪತ್ರಿಕಾ ವಿತರಕರಿಗೆ ಶೆಡ್ ನಿರ್ಮಿಸಿ ಕೊಡಲಾಗುವುದು ಎಂದು ಸಂಸದರು ಹೇಳಿದರು.
ವಿತರಕರಾದ ವಿಜಯ್ ಮಾತನಾಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಪತ್ರಕರ್ತರ ಸಹಾಯದಿಂದ ಪತ್ರಿಕಾ ವಿತರಕರಿಗೆ ನೀವೆಶನಗಳನ್ನು ಮಂಜುರು ಮಾಡಿ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ .. ನಮ್ಮ ಜಿಲ್ಲೆಯಲ್ಲಿ ನಗರಸಭೆ ಹಾಗೂ ಜಿಲ್ಲಾಡಳಿತ ವತಿಯಿಂದ ವಿತರಕರಿಗೆ ನಿವೇಶನಗಳನ್ನು ಮಂಜುರು ಮಾಡಿಸಿ ಕೊಡುವಂತೆ ಸಂಸದರಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ರಾದ ವರಸಿದ್ದಿ ವೇಣುಗೋಪಾಲ್ , ವಿತರಕರಾದ ಶ್ರೀದರ್ , ನಂಜುಂಡ , ವಿಜಯ್ ,ಗಜೇಂದ್ರ , ಮೋಹನ್, ಸುರೇಶ ,ಷಣ್ಮುಖ ,ಅಜಯ್ , ರಕ್ಷಿತ್ ಇದ್ದರು.