News Kannada
Friday, February 23 2024
ಚಿಕಮಗಳೂರು

5 ಕಿಲೋಮೀಟರ್‌ ದಟ್ಟಕಾನನದಲ್ಲಿ ಹಗ್ಗ ಕಟ್ಟಿ ಟೆಕ್ಕಿ ಮೃತದೇಹ ಸಾಗಾಟ

ಡಿಸೆಂಬರ್ 6ರಂದು ಚಿಕ್ಕಮಗಳೂರು ಜಿಲ್ಲೆಯ ರಾಣಿಝರಿ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದ ಯುವಕ ತನ್ನ ಮೊಬೈಲ್, ಬೈಕ್, ಐಡಿ ಕಾರ್ಡ್, ಬಟ್ಟೆಯನ್ನ ಗುಡ್ಡದ ತುದಿಯಲ್ಲಿ ಬಿಟ್ಟು ರಾಣಿಝರಿ ಜಲಪಾತದ ಬಳಿ ಸುಮಾರು 4 ಸಾವಿರ ಅಡಿ ಪ್ರಪಾತದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ. ಇದೀಗ ಬೆಂಗಳೂರು ಮೂಲದ ಟೆಕ್ಕಿ ಭರತ್ ಮೃತದೇಹವನ್ನ ತರಲಾಗಿದೆ.
Photo Credit : News Kannada

ಚಿಕ್ಕಮಗಳೂರು: ಡಿಸೆಂಬರ್ 6ರಂದು ಚಿಕ್ಕಮಗಳೂರು ಜಿಲ್ಲೆಯ ರಾಣಿಝರಿ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದ ಯುವಕ ತನ್ನ ಮೊಬೈಲ್, ಬೈಕ್, ಐಡಿ ಕಾರ್ಡ್, ಬಟ್ಟೆಯನ್ನ ಗುಡ್ಡದ ತುದಿಯಲ್ಲಿ ಬಿಟ್ಟು ರಾಣಿಝರಿ ಜಲಪಾತದ ಬಳಿ ಸುಮಾರು 4 ಸಾವಿರ ಅಡಿ ಪ್ರಪಾತದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ. ಇದೀಗ ಬೆಂಗಳೂರು ಮೂಲದ ಟೆಕ್ಕಿ ಭರತ್ ಮೃತದೇಹವನ್ನ ತರಲಾಗಿದೆ.

ಶನಿವಾರ ಸಂಜೆ ವೇಳೆಯೇ ಮೃತದೇಹ ಪತ್ತೆಯಾಗಿದ್ದರೂ ದಟ್ಟಕಾನನ, ಕಾಡು-ಪ್ರಾಣಿಗಳ ಕಾಟ, ಕತ್ತಲಲ್ಲಿ 4 ಸಾವಿರ ಅಡಿ ಪ್ರಪಾತದಿಂದ ಮೃತದೇಹ ಹೊರತರೋದು ಕಷ್ಟಸಾಧ್ಯ ಎಂದು ಪೊಲೀಸರು, ಅರಣ್ಯ ಸಿಬ್ಬಂದಿ ಸೇರಿದಂತೆ ಸ್ಥಳೀಯರು ಕಾರ್ಯಾಚರಣೆಯನ್ನ ನಿಲ್ಲಿಸಿದ್ದರು. ಇಂದು ರಾಣಿಝರಿ ಜಲಪಾತದ ಕಡೆಯಿಂದ ಪ್ರಪಾತಕ್ಕೆ ಇಳಿದ 25 ಜನರ ತಂಡ, ಹರಸಾಹಸಪಟ್ಟು ಮೃತದೇಹವನ್ನು ಮೇಲಕ್ಕೆ ತಂದಿದ್ದಾರೆ. 4 ಸಾವಿರ ಅಡಿಯ ಪ್ರಪಾತದಿಂದ ಮೃತದೇಹವನ್ನ ತರೋದು ಅಷ್ಟು ಸುಲಭವಲ್ಲ. ಆದರೆ 25 ಜನರ ತಂಡ ಸುಮಾರು 5 ಕಿ.ಮೀ. ಮೃತದೇಹವನ್ನ ಹೊತ್ತು ತಂದು ತೀರಾ ಕಡಿದಾದ ಪ್ರದೇಶದಲ್ಲಿ ಮರದಿಂದ ಮರಕ್ಕೆ ಹಗ್ಗ ಕಟ್ಟಿಕೊಂಡು ಮೃತದೇಹ ಹೊತ್ತುಕೊಂಡು ಹಗ್ಗದ ಮೂಲಕ ಬೆಟ್ಟ ಹತ್ತಿದ್ದಾರೆ.

ರಾಣಿಝರಿ ವ್ಯೂ ಪಾಯಿಂಟ್‍ನಿಂದ ಮೃತದೇಹವಿದ್ದ 4 ಸಾವಿರ ಅಡಿ ಪ್ರಪಾತಕ್ಕೆ ಸುಮಾರು 14 ಕಿ.ಮೀ. ಆಗಲಿದೆ. ಸ್ಥಳಿಯರು, ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಮೇತದೇಹವನ್ನ ಹರಸಾಹಸಪಟ್ಟು ಮೇಲಕ್ಕೆ ತಂದಿದ್ದಾರೆ. 4 ಸಾವಿರ ಅಡಿ ಪ್ರಪಾತದಿಂದ ಬಿದ್ದ ರಭಸಕ್ಕೆ ಭರತ್ ಮೃತದೇಹ ಸಂಪೂರ್ಣ ಛಿದ್ರವಾಗಿತ್ತು. ಸಾಲದ್ದಕ್ಕೆ ದಟ್ಟಕಾನನ ತಂಪಾದ ವಾತಾವರಣಕ್ಕೆ ಕೊಳೆತು ಹೋಗಿತ್ತು. ಆದರೂ ಮೃತದೇಹವನ್ನ ಹೊತ್ತುಕೊಂಡು ಬೆಟ್ಟ ಹತ್ತಿ ಮೇಲಕ್ಕೆ ತಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು