ಶಿವಮೊಗ್ಗ, : ಶಿವಮೊಗ್ಗ ನಗರದ ವಿನೋಬನಗರ ಬಡಾವಣೆಯಲ್ಲಿರುವ ಮಾಜಿ ಸಿಎಂ
ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಇಂದು ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ
ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಸಮಾಲೋಚನೆ ನಡೆಸಿರುವುದು ಕುತೂಹಲ ಕೆರಳಿಸಿದೆ .
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಿವಾಸದಲ್ಲಿದ್ದ ಕೆ.ಎಸ್.ಇ., ಅಲ್ಲಿಯೇ ಉಪಹಾರ
ಸೇವಿಸಿದರು. ಈ ವೇಳೆ ಇಬ್ಬರು ನಾಯಕರ ಜೊತೆ ಸುದೀರ್ಘ ಸಮಾಲೋಚನೆ ನಡೆದಿದೆ. ಈ ವೇಳೆ
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉಪಸ್ಥಿತರಿದ್ದರು.ತವರಿಗೆ ಆಗಮನ: ಮುಖ್ಯಮಂತ್ರಿ
ಹುದ್ದೆಗೆ ರಾಜೀನಾಮೆ ನೀಡಿದ ನಂತರ ಮೊದಲ ಬಾರಿಗೆ ಬಿ.ಎಸ್.ವೈ. ತವರೂರಿಗೆ
ಆಗಮಿಸಿದ್ದಾರೆ. ಶುಕ್ರವಾರ ಶಿವಮೊಗ್ಗದ ವಿನೋಬನಗರದ ನಿವಾಸಕ್ಕೆ ಆಗಮಿಸಿ
ತಂಗಿದ್ದಾರೆ. ನಗರದಲ್ಲಿಯೇ ಇದ್ದ ಕೆ.ಎಸ್.ಇ. ರವರು ಬಿ.ಎಸ್.ವೈ.ರನ್ನು ಭೇಟಿಯಾಗಿ
ಉಭಯ ಕುಶಲೋಪಚರಿ ನಡೆಸಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಮಹತ್ವವಿಲ್ಲ ಎಂದು
ಸ್ಥಳೀಯ ಬಿಜೆಪಿ ಮೂಲಗಳು ಹೇಳುತ್ತವೆ.
ಕುತೂಹಲ: ಕಳೆದ ಹಲವು ವರ್ಷಗಳಿಂದ ಬಿ.ಎಸ್.ವೈ.-ಕೆ.ಎಸ್.ಇ. ನಡುವೆ ನಾನಾ ಕಾರಣಗಳಿಂದ
ವೈಮನಸ್ಸು ಆವರಿಸಿತ್ತು. ಆದರೆ ಇದೀಗ ಈ ಇಬ್ಬರು ನಾಯಕರ ನಡುವೆ ವೈಮನಸ್ಸು ಮರೆಯಾಗಿ,
ಮತ್ತೆ ಸ್ನೇಹ ಭಾವ ಮನೆ ಮಾಡಿದೆ. ಈ ಕಾರಣದಿಂದಲೇ ಕೆ.ಎಸ್.ಇ. ರವರು ಬಿ.ಎಸ್.ವೈ.
ನಿವಾಸಕ್ಕೆ ಭೇಟಿಯಿತ್ತು ಸಮಾಲೋಚಿಸಿದ್ದಾರೆ. ಪ್ರಸ್ತುತ ರಾಜಕೀಯ ವಿದ್ಯಮಾನಗಳ
ಕುರಿತಂತೆ ಈ ನಾಯಕರು ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಯಡಿಯೂರಪ್ಪ – ಈಶ್ವರಪ್ಪ ಚರ್ಚೆ ಮೂಡಿಸಿದ ಕುತೂಹಲ - 1 min read
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.